ವಿಂಡೀಸ್ ವಿರುದ್ದ 351 ರನ್ ಸಿಡಿಸಿದರೂ ಭಾರತ ಸೋಲು ಕಂಡಿದೆ. ಪರಿಣಾಮ ಆರ್‌ಸಿಬಿ ವೇಗಿ ಭುವನೇಶ್ವರ್ ಕುಮಾರ್ ಆಯ್ಕೆಗೆ ಒತ್ತಡ ಹೆಚ್ಚಾಗುತ್ತಿದೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗ ಈ ಕುರಿತು ಖಡಕ್ ಸೂಚನೆ ನೀಡಿದ್ದಾರೆ.
ನವದೆಹಲಿ (ಅ.04) ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭಾರತ 351 ರನ್ ಸಿಡಿಸಿಯೂ ಮುಗ್ಗರಿಸಿತು. ಟೀಂ ಇಂಡಿಯಾ ಬೌಲಿಂಗ್ ದಾಳಿ ಕುರಿತು ಹಲವು ಪ್ರಶ್ನೆಗಳು ಎದ್ದಿದೆ. ಜಸ್ಪ್ರೀತ್ ಬುಮ್ರಾ ಏಷ್ಯನ್ ಗೇಮ್ಸ್ ಆಡುತ್ತಿದ್ದರೆ, ಅನುಪಸ್ಥಿತಿ ಟೀಂ ಇಂಡಿಯಾ ಏಕದಿನ ತಂಡಕ್ಕೆ ಕಾಡಿತ್ತು. ಇದೀಗ ಟೀಂ ಇಂಡಿಯಾಗೆ ಆರ್‌ಸಿಬಿ ವೇಗಿ ಭುವನೇಶ್ವರ್ ಕುಮಾರ್ ಹಾಗೂ ಮೊಹಮ್ಮದ್ ಶಮಿ ಆಯ್ಕೆ ಮಾಡಲು ಒತ್ತಡ ಹೆಚ್ಚಾಗುತ್ತಿದೆ. ಈ ಕುರಿತು ಟೀಂ ಇಂಡಿಯಾ ಕ್ರಿಕೆಟಿಗ ಹನುಮಾ ವಿಹಾರಿ ಖಡಕ್ ಸೂಚನೆ ನೀಡಿದ್ದಾರೆ.
2027ರ ವಿಶ್ವಕಪ್‌ಗೆ ಭುವಿ, ಶಮಿ ಅಗತ್ಯ ಎಂದ ವಿಹಾರಿ
ಟೀಂ ಇಂಡಿಯಾ ಏಕದಿನ ತಂಡ ಪ್ರತಿ ಬಾರಿ ಜಸ್ಪ್ರೀತ್ ಬುಮ್ರಾ ಹಾಗೂ ಹಾರ್ದಿಕ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಆದರೆ 2027ರ ವಿಶ್ವಕಪ್ ಟೂರ್ನಿಗೆ ಇವರಿಬ್ಬರ ಮೇಲೆ ಹೆಚ್ಚು ಅವಲಂಬಿತರಾಗಲು ಸಾಧ್ಯವಿಲ್ಲ. ಇದರಿಂದ ಅಪಾಯವೇ ಹೆಚ್ಚು. ಹೀಗಾಗಿ ಏಕದಿನ ತಂಡಕ್ಕೆ ಭುವನೇಶ್ವರ್ ಕುಮಾರ್ ಹಾಗೂ ಮೊಹಮ್ಮದ್ ಶಮಿ ಕರೆತರಬೇಕು ಎಂದು ವಿಹಾರಿ ಸಲಹೆ ನೀಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನದಲ್ಲಿ ಭಾರತ 351 ರನ್ ಸಿಡಿಸಿತ್ತು. ಆದರೆ ಈ ಮೊತ್ತವನ್ನು ವೆಸ್ಟ್ ಇಂಡೀಸ್ ಕೇವಲ 48.2 ಓವರ್‌ಗಳಲ್ಲಿ ಚೇಸ್ ಮಾಡಿ ಗೆಲುವು ಸಾಧಿಸಿತು. ಇಷ್ಟೇ ಅಲ್ಲ ದಾಖಲೆ ರನ್ ಚೇಸ್ ಮಾಡುವ ಮೂಲಕ ವಿಂಡೀಸ್ ಹೊಸ ಇತಿಹಾಸ ರಚಿಸಿತು. ಈ ಕುರಿತು ಪ್ರತಿಕ್ರಿಯಿಸಿರುವ ವಿಹಾರಿ, 2023ರ ವಿಶ್ವಕಪ್ ಟೂರ್ನಿಯಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ಪವರ್‌ಪ್ಲೇನಲ್ಲಿ ವಿಕೆಟ್ ಕಬಳಿಸಿದ್ದರು. ಸದ್ಯ ಬುಮ್ರಾ ಕೀ ಬೌಲರ್ ಆದರೆ, ಬುಮ್ರಾ ಜೊಗೆ ಫಾರ್ಮ್‌ನಲ್ಲಿರುವವ ಭುವನೇಶ್ವರ್ ಕುಮಾರ್ ಹಾಗೂ ಮೊಹಮ್ಮದ್ ಶಮಿಗೆ ಅವಕಾಶ ನೀಡಬೇಕು. ಭುವಿ ಹಾಗೂ ಶಮಿ ಇಬ್ಬರು ಭಾರತದ ಅತ್ಯುತ್ತಮ ಬೌಲರ್ಸ್. ಐಪಿಎಲ್ ಟೂರ್ನಿ ಹಾಗೂ ದೇಸಿ ಟೂರ್ನಿಗಳಲ್ಲಿ ಇಬ್ಬರು ಸಾಮರ್ಥ್ಯ ಸಾಬೀತುಪಡಿಸಿದ್ದಾರೆ ಎಂದು ವಿಹಾರಿ ಹೇಳಿದ್ದಾರೆ.
ಭುವಿ-ಶಮಿ ಅಗತ್ಯವಿದೆ
ಹೊಸ ಬಾಲ್‌ನಲ್ಲಿ ಭುವನೇಶ್ವರ್ ಕುಮಾರ್ ಉತ್ತಮ ಪರ್ಫಾಮೆನ್ಸ್ ನೀಡುತ್ತಾರೆ. ಇಷ್ಟೇ ಅಲ್ಲ ಭುವಿ ತಾಳ್ಮೆಯಿಂದ ಪರಿಸ್ಥಿತಿ ಎದುರಿಸುತ್ತಾರೆ. ಟೀಂ ಇಂಡಿಯಾಗೆ ಆಡಿದ ಅನುಭವವೂ ಇದೆ. ಹೀಗಾಗಿ ಭುವನೇಶ್ವರ್ ಕುಮಾರ್ ಅಗತ್ಯತೆ ಇದೆ. ಬುಮ್ರಾ ಹಾಗೂ ಹಾರ್ದಿಕ್‌ಗೆ ಬ್ಯಾಕ್ಅಪ್ ಆಗಿ ಬೌಲರ್ ಬೇಕು. ಹೀಗಾಗಿ ಭುವನೇಶ್ವರ್ ಕುಮಾರ್ ಹಾಗೂ ಮೊಹಮ್ಮದ್ ಶಮಿಗಿಂತ ಉತ್ತಮ ಆಯ್ಕೆ ಬೇರೆ ಇಲ್ಲ ಎಂದು ವಿಹಾರಿ ಹೇಳಿದ್ದಾರೆ.
ಆರ್‌ಸಿಬಿಗೆ 2 ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ
ಆರ್‌ಸಿಬಿಗೆ ಸತತ 2 ಟ್ರೋಫಿ ಗೆಲುವಿನಲ್ಲಿ ಭುವನೇಶ್ವರ್ ಕುಮಾರ್ ಕೊಡುಗೆ ಎಲ್ಲರಿಗೂ ನೆನಪಿದೆ ಎಂದು ವಿಹಾರಿ ಹೇಳಿದ್ದಾರೆ. 2025 ಹಾಗೂ 2026ರ ಐಪಿಎಲ್ ಟೂರ್ನಿಯ ಒಟ್ಟು 30 ಪಂದ್ಯಗಳಲ್ಲಿ ಭುವನೇಶ್ವರ್ ಕುಮಾರ್ 45 ವಿಕೆಟ್ ಕಬಳಿಸಿದ್ದಾರೆ. ಭಾರತ 351 ರನ್ ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂದರೆ ಬೌಲಿಂಗ್ ಸಮಸ್ಯೆ ಇದೆ ಎಂದರ್ಥ ಎಂದು ವಿಹಾರಿ ಹೇಳಿದ್ದಾರೆ.


