ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ, ಭಾರತದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರ ಶತಕದ ಆಟವನ್ನು ಕೊಂಡಾಡಿದ್ದಾರೆ. ಎರಡನೇ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಜೈಸ್ವಾಲ್‌ರನ್ನು ಭೇಟಿಯಾದ ಲಾರಾ, 'ನಮ್ಮ ಬೌಲರ್‌ಗಳನ್ನು ಅಷ್ಟೊಂದು ದಂಡಿಸಬೇಡಿ' ಎಂದು ತಮಾಷೆಯಾಗಿ ಮನವಿ ಮಾಡಿದ್ದಾರೆ.
ನವದೆಹಲಿ: ವಿಂಡೀಸ್‌ನ ದಿಗ್ಗಜ ಬ್ಯಾಟರ್ ಬ್ರಿಯಾನ್ ಲಾರಾ ಭಾರತದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್‌ಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಏಳನೇ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿರುವ ಯಶಸ್ವಿ ಜೈಸ್ವಾಲ್ ಅವರ ಆಟವನ್ನು ದಿಗ್ಗಜ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಕೊಂಡಾಡಿದ್ದಾರೆ.
2ನೇ ಟೆಸ್ಟ್‌ನ 2ನೇ ದಿನದಾಟ ಮುಕ್ತಾಯಗೊಂಡ ಬಳಿಕ ಮೈದಾನದಲ್ಲಿ ಯಶಸ್ವಿ ಜೈಸ್ವಾಲ್‌ರನ್ನು ಭೇಟಿಯಾದ ಲಾರಾ, 'ನಮ್ಮ (ವಿಂಡೀಸ್) ಬೌಲರ್‌ರನ್ನು ಅಷ್ಟೊಂದು ದಂಡಿಸಬೇಡಿ' ಎಂದರು. ಅದಕ್ಕೆ ಜೈಸ್ವಾಲ್, 'ಪ್ರಯತ್ನಿಸುತ್ತಿದ್ದೇನೆ' ಎಂದರು. ಬಿಸಿಸಿಐ ತನ್ನ ವೆಬ್‌ಸೈಟ್‌ನಲ್ಲಿ ಇಬ್ಬರ ನಡುವಿನ ಮಾತುಕತೆಯ ವಿಡಿಯೋವನ್ನು ಹಂಚಿಕೊಂಡಿದೆ.
ವೆಸ್ಟ್ ಇಂಡೀಸ್ ಎದುರಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಒಟ್ಟು 258 ಎಸೆತಗಳನ್ನು ಎದುರಿಸಿದ ಯಶಸ್ವಿ ಜೈಸ್ವಾಲ್ 22 ಬೌಂಡರಿ ಸಹಿತ ಆಕರ್ಷಕ 175 ರನ್ ಸಿಡಿಸಿ ರನೌಟ್ ಆಗಿದ್ದಾರೆ. ಜೈಸ್ವಾಲ್ ಆಟಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರು ಸಾವಿರ ರನ್ ಗಡಿದಾಟಿದ
ಯಶಸ್ವಿ ಜೈಸ್ವಾಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರು ಸಾವಿರ ರನ್ ಪೂರ್ಣಗೊಳಿಸಿದ್ದಾರೆ. 26 ಟೆಸ್ಟ್‌ನಲ್ಲಿ 2262 ರನ್, 22 ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 723 ರನ್ ಹಾಗೂ ಒಂದು ಅಂತಾರಾಷ್ಟ್ರೀಯ ಪಂದ್ಯದಲ್ಲಿ 15 ರನ್ ಗಳಿಸಿದ್ದಾರೆ. ಒಟ್ಟಾರೆ 71 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳನ್ನಾಡಿ ಮೂರು ಸಾವಿರ ರನ್ ಗಡಿ ದಾಟಿದ್ದಾರೆ.
ಇನ್ನಿಂಗ್ಸ್ ಸೋಲಿನಿಂದ ಪಾರಾಗುತ್ತಾ ವಿಂಡೀಸ್?
ನವದೆಹಲಿ: ಭಾರತ ವಿರುದ್ಧ ಟೆಸ್ಟ್ ಸರಣಿಯಲ್ಲಿ ವಿಂಡೀಸ್ ತನ್ನ ಕೊನೆಯ ಇನ್ನಿಂಗ್ಸ್‌ನಲ್ಲಿ ಉತ್ತಮ ಹೋರಾಟ ಪ್ರದರ್ಶಿಸಿದೆ. ಇಲ್ಲಿ ನಡೆಯುತ್ತಿರುವ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 248 ರನ್‌ಗೆ ಆಲೌಟ್ ಆಗಿ, 270 ರನ್ ಹಿನ್ನಡೆ ಅನುಭವಿಸಿದ ವಿಂಡೀಸ್ ಮೇಲೆ ಭಾರತ ಫಾಲೋ ಆನ್ ಹೇರಿತು. 2ನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ಕೆರಿಬಿಯನ್ ಪಡೆ, ಪಂದ್ಯವನ್ನು 4ನೇ ದಿನಕ್ಕೆ ಕೊಂಡೊಯ್ದಿದೆ.
2ನೇ ದಿನಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 140 ರನ್ ಗಳಿಸಿದ್ದ ವಿಂಡೀಸ್, ಭಾನುವಾರ ಆ ಮೊತ್ತಕ್ಕೆ 108 ರನ್ ಸೇರಿಸಿತು. ಕುಲ್ದೀಪ್ ಯಾದವ್ ಅಮೋಘ ಬೌಲಿಂಗ್ ದಾಳಿ ನಡೆಸಿ 5 ವಿಕೆಟ್ ಕಬಳಿಸಿದರು. ಜಡೇಜಾ 3, ಸಿರಾಜ್ ಹಾಗೂ ಬುಮ್ರಾ ತಲಾ 1 ವಿಕೆಟ್ ಕಿತ್ತರು.
270 ರನ್ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಬ್ಯಾಟಿಂಗ್‌ಗಿಳಿದ ವಿಂಡೀಸನ್ನು ಆಲೌಟ್ ಮಾಡಿ ಮೊದಲ ಪಂದ್ಯದಂತೆ ಈ ಪಂದ್ಯವನ್ನೂ 3 ದಿನದೊಳಗೆ ಮುಗಿಸಲು ಭಾರತ ಪಣತೊಟ್ಟಿತ್ತು. ಆದರೆ ಜಾನ್ ಕ್ಯಾಂಬೆಲ್ ಹಾಗೂ ಶಾಮ್ ಹೋಪ್ ಆಕರ್ಷಕ ಜೊತೆಯಾಟ, ಭಾರತೀಯರ ತಾಳ್ಮೆ ಪರೀಕ್ಷಿಸಿತು. 35 ರನ್‌ಗೆ 2 ವಿಕೆಟ್ ಕಳೆದುಕೊಂಡ ವಿಂಡೀಸ್ ಕ್ಯಾಂಬೆಲ್ ಹಾಗೂ ಹೋಪ್ ಆಸರೆಯಾದರು. ಈ ಜೋಡಿ ಮುರಿಯದ 3ನೇ ವಿಕೆಟ್‌ಗೆ 138 ರನ್ ಸೇರಿಸಿದ್ದು, ತಂಡವನ್ನು ಇನ್ನಿಂಗ್ಸ್ ಸೋಲಿನಿಂದ ಪಾರು ಮಾಡಲು ಕಾಯುತ್ತಿದೆ. ಕ್ಯಾಂಬೆಲ್ ಔಟಾಗದೆ 87, ಹೋಪ್ ಔಟಾಗದೆ 66 ರನ್ ಗಳಿಸಿದ್ದಾರೆ.
ಸ್ಕೋರ್: ಭಾರತ 518/5 ಡಿ.(ಯಶಸ್ವಿ ಜೈಸ್ವಾಲ್ 175, ಶುಭ್‌ಮನ್ ಗಿಲ್ 129*)
ವಿಂಡೀಸ್ 248 (ಅಥನೇಜ್ 41, ಹೋಪ್ 36, ಫಿಲಿಪ್ 24, 5-82, ಜಡೇಜಾ 3-46) ಹಾಗೂ 173/2 (ಕ್ಯಾಂಬೆಲ್ 87*, ವಾಷಿಂಗ್ಟನ್ 1-44)
