ಮೆಲ್ಬರ್ನ್(ಡಿ.27): ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಆಕರ್ಷಕ ಶತಕ ಬಾರಿಸುವ ಮೂಲಕ ಜವಾಬ್ದಾರಿಯುತ ಪ್ರದರ್ಶನ ತೋರಿದ್ದಾರೆ. ಈ ಸಾಲಿನ ಬಾರ್ಡರ್-ಗವಾಸ್ಕರ್ ಟೆಸ್ಟ್‌ ಸರಣಿಯಲ್ಲಿ ದಾಖಲಾದ ಮೊದಲ ಶತಕ ಇದಾಗಿದೆ.

ಟೀಂ ಇಂಡಿಯಾ ಕೇವಲ 63 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಾಗ ಕ್ರೀಸ್‌ಗಿಳಿದ ರಹಾನೆ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ನಾಯಕನ ಆಟ ಪ್ರದರ್ಶಿಸಿದ್ದಾರೆ. ಸಾಕಷ್ಟು ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ರಹಾನೆ 195 ಎಸೆತಗಳನ್ನು ಎದುರಿಸಿ 11 ಬೌಂಡರಿಗಳ ನೆರವಿನಿಂದ ಟೆಸ್ಟ್‌ ವೃತ್ತಿಜೀವನದ 12ನೇ ಶತಕ ಪೂರೈಸಿದರು.

ಬಾಕ್ಸಿಂಗ್ ಡೇ ಟೆಸ್ಟ್‌: ನಾಯಕ ರಹಾನೆ ಆಕರ್ಷಕ ಅರ್ಧಶತಕ

ಈ ಶತಕದೊಂದಿಗೆ ಅಜಿಂಕ್ಯ ರಹಾನೆ ಕೆಲವು ಅಪರೂಪದ ದಾಖಲೆಗಳು ನಿರ್ಮಿಸಿದ್ದಾರೆ.
* ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಪರ ಶತಕ ಬಾರಿಸಿದ 12ನೇ ನಾಯಕ ರಹಾನೆ
* ವಿನು ಮಂಕಡ್ ಬಳಿಕ ಮೆಲ್ಬರ್ನ್ ಕ್ರಿಕೆಟ್‌ ಮೈದಾನದಲ್ಲಿ ಶತಕ ಬಾರಿಸಿದ ಎರಡನೇ ಬ್ಯಾಟ್ಸ್‌ಮನ್ ರಹಾನೆ