ಆಯ್ಕೆ ಗೊಂದಲದಲ್ಲೇ ಮುಗಿದ ಆಸೀಸ್‌ ಪ್ರವಾಸ; ಇನ್ನು 6 ತಿಂಗಳಲ್ಲೇ ಬಲಿಷ್ಠ ತಂಡ ಕಟ್ಟುವ ಸವಾಲು

ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತ ತಂಡ ಆಯ್ಕೆ ಗೊಂದಲದಿಂದ ಸೋಲನ್ನು ಅನುಭವಿಸಿತು. ಮೂರನೇ ವೇಗಿ, ತಜ್ಞ ಬ್ಯಾಟರ್, ರೋಹಿತ್ ಬ್ಯಾಟಿಂಗ್ ಕ್ರಮಾಂಕ ಮತ್ತು ಗಿಲ್ ಆಯ್ಕೆಯಲ್ಲಿ ಗೊಂದಲಗಳು ಮುಂದುವರೆದವು. ಇದರಿಂದಾಗಿ ತಂಡ ಸ್ಥಿರತೆಯನ್ನು ಕಂಡುಕೊಳ್ಳಲು ಪರದಾಡಿತು.

Border Gavaskar Trophy Team India Selection committee need to answer So many questions kvn

ನವದೆಹಲಿ: ಭಾರತ ತಂಡ ಮಹತ್ವದ ಆಸ್ಟ್ರೇಲಿಯಾ ಪ್ರವಾಸವನ್ನು ಸರಣಿ ಸೋಲಿನೊಂದಿಗೆ ಮುಗಿಸಿದೆ ಎನ್ನುವುದಕ್ಕಿಂತ ಆಯ್ಕೆ ಗೊಂದಲದಲ್ಲೇ ಕೊನೆಗೊಳಿಸಿದೆ ಎಂಬುದು ಹೆಚ್ಚು ಸೂಕ್ತವಾಗಬಹುದೇನೋ. ಸರಣಿಯ ಮೊದಲ ಪಂದ್ಯದಿಂದ ಕೊನೆ ಪಂದ್ಯದ ವರೆಗೂ ಭಾರತ ಎದುರಿಸಿದ ಪ್ರಮುಖ ಸಮಸ್ಯೆ ತಂಡದ ಆಯ್ಕೆ ಗೊಂದಲ. ಇದುವೇ ತಂಡವನ್ನು ಸರಣಿ ಸೋಲುವಂತೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದರೆ ತಪ್ಪಾಗದು.

ಆದರೆ ತಂಡದ ಆಯ್ಕೆ ಗೊಂದಲಕ್ಕೆ ಬೇಗನೇ ಪರಿಹಾರ ಸಿಗಬಹುದು ಎಂಬ ಭರವಸೆ ಕ್ರೀಡಾ ತಜ್ಞರು, ಅಭಿಮಾನಿಗಳಲಿಲ್ಲ. ಯಾಕೆಂದರೆ ಇನ್ನು ಭಾರತಕ್ಕೆ ಟೆಸ್ಟ್‌ ಸರಣಿ ಇರುವುದು ಜೂನ್‌ನಲ್ಲಿ. ಅಂದರೆ 6 ತಿಂಗಳು ಬಿಡುವು. ಭಾರತೀಯ ಆಟಗಾರರು ಇನ್ನು ತವರಿನ ಟಿ20, ಏಕದಿನ ಸರಣಿ, ಐಸಿಸಿ ಚಾಂಪಿಯನ್ಸ್‌ ಟ್ರೋಫಿ, ಐಪಿಎಲ್‌ನಲ್ಲಿ ನಿರತರಾಗಲಿದ್ದಾರೆ. ಇದರ ನಡುವೆಯೇ ಬಿಸಿಸಿಐ ಹಾಗೂ ತಂಡದ ಆಯ್ಕೆ ಸಮಿತಿ ಬಲಿಷ್ಠ ಟೆಸ್ಟ್‌ ತಂಡ ಕಟ್ಟಬೇಕಾದ ಅನಿವಾರ್ಯತೆಯಿದೆ.

3ನೇ ವೇಗಿಯ ಆಯ್ಕೆ ಗೊಂದಲ

ಆಸ್ಟ್ರೇಲಿಯಾದಲ್ಲಿ ಭಾರತ 3ನೇ ವೇಗಿ ಆಯ್ಕೆಯಲ್ಲಿ ಎಡವಿದ್ದು ಸ್ಪಷ್ಟವಾಗಿ ಗೋಚರಿಸುತ್ತದೆ. ಬೂಮ್ರಾ, ಸಿರಾಜ್‌ ಎಲ್ಲಾ ಪಂದ್ಯ ಆಡಿದ್ದಾರೆ. 3ನೇ ವೇಗಿಯಾಗಿ ಮೊದಲೆರಡು ಪಂದ್ಯದಲ್ಲಿ ಅನನುಭವಿ ಹರ್ಷಿತ್‌ ರಾಣಾರನ್ನು ಕಣಕ್ಕಿಳಿಸಲಾಯಿತು. ಆರಂಭಿಕ ಸ್ಪೆಲ್‌ನಲ್ಲಿ ಹರ್ಷಿತ್‌ ನಿಖರ ದಾಳಿ ಸಂಘಟಿಸಿದರೂ, ಪಂದ್ಯ ಸಾಗಿದಂತೆ ಅವರ ವೇಗ ಕಡಿಮೆಯಾಗುತ್ತಿತ್ತು. ಹೀಗಾಗಿ 3 ಹಾಗೂ 4ನೇ ಪಂದ್ಯದಲ್ಲಿ ಆಕಾಶ್‌ದೀಪ್‌ರನ್ನು ಆಡಿಸಲಾಯಿತು. ಆಕಾಶ್‌ 2 ಪಂದ್ಯದಲ್ಲಿ 5 ವಿಕೆಟ್‌ ಕಿತ್ತರು. ಗಾಯದಿಂದಾಗಿ 5ನೇ ಪಂದ್ಯದಲ್ಲಿ ಅವರ ಬದಲು ಪ್ರಸಿದ್ಧ್‌ ಕೃಷ್ಣರನ್ನು ಕಣಕ್ಕಿಳಿಸಲಾಯಿತು.

ಧನಶ್ರೀ ಬಳಿ ಡ್ಯಾನ್ಸ್ ಕಲಿಯಲು ಹೋಗಿ ಜಾರಿಬಿದ್ದ ಚಹಲ್‌! ಡ್ಯಾನ್ಸ್‌ನಿಂದ ಆರಂಭ ಡಿವೋರ್ಸ್‌ನಲ್ಲಿ ಅಂತ್ಯ?

ತಜ್ಞ ಬ್ಯಾಟರ್ ಆಯ್ಕೆ ಎಡವಟ್ಟು

ಸರಣಿಯಲ್ಲಿ ತಜ್ಞ ಬ್ಯಾಟರ್‌ ಆಯ್ಕೆಯಲ್ಲೂ ಭಾರತಕ್ಕೆ ಗೊಂದಲ ಎದುರಾಯಿತು. 1, 4 ಮತ್ತು 5ನೇ ಪಂದ್ಯಗಳಲ್ಲಿ ಆಲ್ರೌಂಡರ್‌ ವಾಷಿಂಗ್ಟನ್‌ ಸುಂದರ್‌ರನ್ನು ಆಡಿಸಿದರೂ, ಬಳಸಿದ್ದು ಬ್ಯಾಟರ್‌ ಆಗಿ ಮಾತ್ರ. ಅವರಿಗೆ ಬೌಲಿಂಗ್‌ಗೆ ಹೆಚ್ಚಿನ ಅವಕಾಶ ಸಿಗಲಿಲ್ಲ. ತಂಡಕ್ಕೆ ತಜ್ಞ ಬ್ಯಾಟರ್‌ ಅಗತ್ಯವಿದ್ದಿದ್ದರೆ ಸರ್ಫರಾಜ್ ಖಾನ್‌, ಧ್ರುವ್‌ ಜುರೆಲ್‌, ಅಭಿಮನ್ಯು ಈಶ್ವರನ್‌ ಆಯ್ಕೆಗಳಿದ್ದವು.

ರೋಹಿತ್‌ ಬ್ಯಾಟಿಂಗ್‌ ಕ್ರಮಾಂಕ

ಸರಣಿಯುದ್ದಕ್ಕೂ ರೋಹಿತ್‌ ಬ್ಯಾಟಿಂಗ್‌ ಕ್ರಮಾಂಕದ್ದೇ ಹೆಚ್ಚಿನ ಚರ್ಚೆಯಾಯಿತು. ರೋಹಿತ್ ಅನುಪಸ್ಥಿತಿಯಲ್ಲಿ ಆರಂಭಿಕ ಪಂದ್ಯದಲ್ಲಿ ಕೆ.ಎಲ್‌.ರಾಹುಲ್‌ ಆರಂಭಿಕನಾಗಿ ಕಣಕ್ಕಿಳಿದರು. ಹೀಗಾಗಿ 2 ಮತ್ತು 3ನೇ ಪಂದ್ಯದಲ್ಲಿ ರೋಹಿತ್‌ ಮಧ್ಯಮ ಕ್ರಮಾಂಕದಲ್ಲಿ ಆಡಬೇಕಾಯಿತು. 4ನೇ ಪಂದ್ಯದಲ್ಲಿ ರೋಹಿತ್‌ ಮತ್ತೆ ಆರಂಭಿಕನಾಗಿ ಆಡಿದರು. ಆದರೆ ಯಾವ ಪಂದ್ಯ ದಲ್ಲೂ ಮಿಂಚಲಿಲ್ಲ. ಪದೇ ಪದೇ ಕ್ರಮಾಂಕ ಬದಲಾಗುತ್ತಿದ್ದರಿಂದ ರಾಹುಲ್‌ ಕೂಡಾ ಲಯ ಕಂಡುಕೊಳ್ಳಲು ಪರದಾಡಿದರು.

ದೇಶಿಯ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದ ಟೀಂ ಇಂಡಿಯಾ ಆಲ್ರೌಂಡರ್!

ಗಿಲ್‌ ಆಯ್ಕೆಯಲ್ಲಿ ಸಿಗದ ಸ್ಪಷ್ಟತೆ

ಭಾರತಕ್ಕೆ ಗಿಲ್‌ ಆಯ್ಕೆ ವಿಚಾರದಲ್ಲಿ ಕೊನೆವರೆಗೂ ಸ್ಪಷ್ಟತೆ ಸಿಗಲಿಲ್ಲ. ಗಾಯದಿಂದಾಗಿ ಗಿಲ್‌ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಬಳಿಕ 2 ಪಂದ್ಯಗಳಲ್ಲಿ ಆಡಿಸಿ, 4ನೇ ಪಂದ್ಯದಲ್ಲಿ ಹೊರಗಿಡಲಾಯಿತು. ಕೊನೆ ಪಂದ್ಯದಲ್ಲಿ ಅವರು ಮತ್ತೆ ತಂಡದಲ್ಲಿ ಕಾಣಿಸಿಕೊಂಡರು. ಅವರನ್ನು ಆಡಿಸುಬೇಕೇ, ಹೊರಗಿಡಬೇಕೇ ಎಂಬುದೇ ತಂಡಕ್ಕೆ ತಲೆನೋವಾಗಿತ್ತು. ಕೊನೆಗೂ ಅದಕ್ಕೆ ಉತ್ತರ ಕಂಡುಕೊಳ್ಳಲಾಗಲಿಲ್ಲ.

Latest Videos
Follow Us:
Download App:
  • android
  • ios