ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆರಂಭಕ್ಕೆ ಕ್ಷಣಗಣನೆಫೆಬ್ರವರಿ 09ರಿಂದ 4 ಪಂದ್ಯಗಳ ಟೆಸ್ಟ್ ಸರಣಿ ಆರಂಭಫೆಬ್ರವರಿ 01ಕ್ಕೆ ಭಾರತಕ್ಕೆ ಬಂದಿಳಿಯಲಿರುವ ಕಾಂಗರೂ ಪಡೆ

ಮೆಲ್ಬನ್‌(ಜ.29): ಫೆಬ್ರವರಿ 9ರಿಂದ ಆರಂಭಗೊಳ್ಳಲಿರುವ ನಾಲ್ಕು ಪಂದ್ಯಗಳ ಮಹತ್ವದ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳಲು ಆಸ್ಪ್ರೇಲಿಯಾ ತಂಡ ಫೆಬ್ರವರಿ 1ಕ್ಕೆ ಭಾರತಕ್ಕೆ ಆಗಮಿಸಲಿದೆ. ಮೊದಲ ಟೆಸ್ಟ್‌ ಆಡಲು ನಾಗ್ಪುರಕ್ಕೆ ತೆರಳುವ ಮೊದಲು ಆಸೀಸ್‌ ತಂಡ ಬೆಂಗಳೂರಲ್ಲಿ 2-3 ದಿನಗಳ ಅಭ್ಯಾಸ ನಡೆಸಲಿದೆ ಎಂದು ವರದಿಯಾಗಿದೆ. 

ಇದೇ ವೇಳೆ ಭಾರತ ತಂಡ ಫೆಬ್ರವರಿ 2ರಿಂದಲೇ ನಾಗ್ಪುರದಲ್ಲಿ ಅಭ್ಯಾಸ ಶಿಬಿರ ನಡೆಸಲಿದೆ ಎಂದು ತಿಳಿದುಬಂದಿದೆ. ರೋಹಿತ್‌ ಶರ್ಮಾ, ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್‌ ಸೇರಿ ಪ್ರಮುಖರು ಫೆಬ್ರವರಿ 1ರ ವೇಳೆಗೆ ನಾಗ್ಪುರ ತಲುಪಲಿದ್ದು, ನ್ಯೂಜಿಲೆಂಡ್‌ ವಿರುದ್ಧ ಟಿ20 ಸರಣಿ ಆಡುತ್ತಿರುವ ಆಟಗಾರರು ಸರಣಿ ಮುಗಿದ ಬಳಿಕ ನೇರವಾಗಿ ಟೆಸ್ಟ್‌ ತಂಡ ಕೂಡಿಕೊಳ್ಳಲಿದ್ದಾರೆ.

ಆಸೀಸ್‌ ಟೆಸ್ಟ್‌ ಸರಣಿಗೆ ಭಾರತ ತಂಡ ಹೀಗಿದೆ: 

ರೋಹಿತ್‌ ಶರ್ಮಾ, ಕೆ ಎಲ್ ರಾಹುಲ್‌, ಶುಭ್‌ಮನ್ ಗಿಲ್‌, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆ ಎಸ್ ಭರತ್‌, ಇಶಾನ್ ಕಿಶನ್‌, ರವಿಚಂದ್ರನ್‌ ಅಶ್ವಿನ್‌, ಅಕ್ಷರ್‌ ಪಟೇಲ್, ಕುಲ್ದೀಪ್‌ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್‌, ಉಮೇಶ್‌ ಯಾದವ್, ಜಯದೇವ್ ಉನಾದ್ಕತ್‌.

ಭಾರತ ಸರಣಿಗೆ ಆಸ್ಟ್ರೇಲಿಯಾ ತಂಡ ಹೀಗಿದೆ ನೋಡಿ:

ಪ್ಯಾಟ್ ಕಮಿನ್ಸ್‌(ನಾಯಕ), ಆಸ್ಟನ್ ಅಗರ್, ಸ್ಕಾಟ್ ಬೋಲೆಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್, ಜೋಶ್ ಹೇಜಲ್‌ವುಡ್‌, ಪೀಟರ್‌ ಹ್ಯಾಂಡ್ಸ್‌ಕಂಬ್, ಟ್ರಾವಿಸ್ ಹೆಡ್‌, ಉಸ್ಮಾನ್ ಖವಾಜ, ಮಾರ್ನಸ್ ಲಬುಶೇನ್, ನೇಥನ್ ಲಯನ್, ಲಾನ್ಸ್ ಮೋರಿಸ್, ಟೋಡ್ ಮುರ್ಫೆ, ಮ್ಯಾಥ್ಯೂ ರೆನ್‌ಶೋ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್‌, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್.

ಭಾರತ ಎದುರಿನ ಟೆಸ್ಟ್‌ ಸರಣಿಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ; ನಾಲ್ವರು ಸ್ಪಿನ್ನರ್‌ಗಳಿಗೆ ಸ್ಥಾನ..!

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ವೇಳಾಪಟ್ಟಿ ಹೀಗಿದೆ: 

ಫೆಬ್ರವರಿ 9-12: ಮೊದಲ ಟೆಸ್ಟ್- ನಾಗ್ಪುರ
ಫೆಬ್ರವರಿ 17-21: ಎರಡನೇ ಟೆಸ್ಟ್- ಡೆಲ್ಲಿ
ಮಾರ್ಚ್‌ 01-05: ಮೂರನೇ ಟೆಸ್ಟ್ - ಧರ್ಮಶಾಲಾ
ಮಾರ್ಚ್‌ 09-13: ನಾಲ್ಕನೇ ಟೆಸ್ಟ್ - ಅಹಮದಾಬಾದ್

ಏಕದಿನ: ಇಂಗ್ಲೆಂಡ್‌ ವಿರುದ್ಧ ಗೆದ್ದ ದ.ಆಫ್ರಿಕಾ

ಬ್ಲೂಮ್‌ಫೌಂಟೇನ್‌: 49 ರನ್‌ಗೆ ಕೊನೆ 6 ವಿಕೆಟ್‌ ಕಳೆದುಕೊಂಡ ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 27 ರನ್‌ ಸೋಲು ಅನುಭವಿಸಿತು. ವಾನ್‌ ಡೆರ್‌ ಡುಸ್ಸೆನ್‌(111)ರ ಶತಕದ ನೆರವಿನಿಂದ 50 ಓವರಲ್ಲಿ 7 ವಿಕೆಟ್‌ಗೆ 298 ರನ್‌ ಗಳಿಸಿದ ದ.ಆಫ್ರಿಕಾ ಸ್ಪರ್ಧಾತ್ಮಕ ಗುರಿ ನೀಡಿತು. ಜೇಸನ್‌ ರಾಯ್‌(113) ಶತಕ, ಡೇವಿಡ್‌ ಮಲಾನ್‌(59) ಅರ್ಧಶತಕ ಸಿಡಿಸಿ ಮೊದಲ ವಿಕೆಟ್‌ಗೆ 146 ರನ್‌ ಸೇರಿಸಿದರು. ಭರ್ಜರಿ ಆರಂಭದ ಹೊರತಾಗಿಯೂ ಇಂಗ್ಲೆಂಡ್‌ ಮುಗ್ಗರಿಸಿತು. 222ಕ್ಕೆ 4ರಿಂದ 44.2 ಓವರಲ್ಲಿ 271 ರನ್‌ಗೆ ಆಲೌಟ್‌ ಆಯಿತು. 3 ಪಂದ್ಯಗಳ ಸರಣಿಯಲ್ಲಿ ದ.ಆಫ್ರಿಕಾ 1-0 ಮುನ್ನಡೆ ಪಡೆದಿದೆ.

ಆಟದ ವೇಳೆ ಬೇರೆಡೆ ತಿರುಗಿದ್ದ ಅಂಪೈರ್‌!

ಬ್ಲೂಮ್‌ಫೌಂಟೇನ್‌: ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್‌ ನಡುವಿನ ಮೊದಲ ಏಕದಿನ ಪಂದ್ಯದ ವೇಳೆ ವಿಚಿತ್ರ ಪ್ರಸಂಗವೊಂದು ನಡೆಯಿತು. ದ.ಆಫ್ರಿಕಾ ವೇಗಿ ನೋಕಿಯ ಇಂಗ್ಲೆಂಡ್‌ನ ಜೇಸನ್‌ ರಾಯ್‌ಗೆ ಬೌಲ್‌ ಮಾಡುವಾಗ ಆಟದ ಗಮನ ನೀಡುವುದನ್ನು ಮರೆತ ಲೆಗ್‌ ಅಂಪೈರ್‌ ಮರಾಯಸ್‌ ಎರಾಸ್ಮಸ್‌ ಮತ್ತೆಲ್ಲೋ ನೋಡುತ್ತಾ ನಿಂತಿದ್ದರು. ಸಾಮಾಜಿಕ ತಾಣಗಳಲ್ಲಿ ಈ ಪ್ರಸಂಗದ ತುಣುಕು ವೈರಲ್‌ ಆಗಿದೆ. ಜೊತೆಗೆ ಟಿ20 ಯುಗದಲ್ಲಿ ಏಕದಿನ ಕ್ರಿಕೆಟ್‌ ಬಗ್ಗೆ ಅಂಪೈರ್‌ಗೇ ಆಸಕ್ತಿ ಇಲ್ಲ ಎಂದು ಟ್ರೋಲ್‌ ಸಹ ಮಾಡಲಾಗಿದೆ.