ನವದೆಹಲಿ(ನ.19): ಭಾರತದ ಯುವ ಹಾಗೂ ಉದಯೋನ್ಮುಖ ಕ್ರಿಕೆಟಿಗರಿಗೆ ನೆರವಾಗಲು ಬೂಸ್ಟ್(Boost) ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಯುವ ಕ್ರಿಕೆಟಿಗರಿಗೆ ಅಂತಾರಾಷ್ಟ್ರೀಯ ದರ್ಜೆಯ ತರಬೇತಿ ನೀಡಲು ಬೂಸ್ಟ್, ಸೌತ್ ಆಫ್ರಿಕಾ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಅವರನ್ನು ತರಬೇತುದಾರರನ್ನಾಗಿ ನೇಮಕ ಮಾಡಿದೆ.

ಇದನ್ನೂ ಓದಿ: ಜಾಂಟಿ ರೋಡ್ಸ್‌ಗೆ ಮೋಡಿ ಮಾಡಿದ ಆಧುನಿಕ ಕ್ರಿಕೆಟ್‌ನ ನಂ.1 ಫೀಲ್ಡರ್ ಈತ!

ಫುಡ್ ಡ್ರಿಂಕ್ಸ್ ಬೂಸ್ಟ್ ಕ್ರಿಕೆಟ್ ತರಬೇತಿಗಾಗಿ ರೋಡ್ಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಕ್ರೀಡಾ ಉತ್ಸಾಹಿಗಳಿಗೆ  ಆನ್‌ಲೈನ್ ಪ್ಲಾಟ್‌ಫಾರ್ಮ್ boostcamp ಮೂಲಕ ನಲ್ಲಿ ತರಬೇತಿ ನೀಡಲಿದೆ.  ಕ್ರಿಕೆಟ್ ಫೀಲ್ಡಿಂಗ್‌ನಲ್ಲಿ ಶತಮಾನದ ಶ್ರೇಷ್ಠ ಫೀಲ್ಡರ್ ಅನ್ನೋ ಖ್ಯಾತಿಗೆ ಪಾತ್ರವಾಗಿರುವ ಜಾಂಟಿ ರೋಡ್ಸ್, ವಿಡಿಯೋ ಮೂಲಕ ಕ್ರಿಕೆಟ್ ಫೀಲ್ಡಿಂಗ್, ಎಚ್ಚರ ವಹಿಸಿಬೇಕಾದ ಅಂಶಗಳು, ಅತ್ಯುತ್ತಮ ಕ್ಷೇತ್ರ ರಕ್ಷಣೆ ಕುರಿತು ತರಬೇತಿ ನೀಡಲಿದ್ದಾರೆ. 

ಇದನ್ನೂ ಓದಿ: RCB ವೀಕ್ನೆಸ್ ಬಹಿರಂಗ ಪಡಿಸಿದ ಆಲ್ರೌಂಡರ್ ಮೊಯಿನ್ ಆಲಿ!

ವೃತ್ತಿಪರ ಕ್ರಿಕೆಟ್ ಟೂರ್ನಿಗಳಲ್ಲಿ ಕಠಿಣ ಹಾಗೂ ಒತ್ತಡ ಸಂದರ್ಭಗಳನ್ನು ನಿಭಾಯಿಸುವ ಕಲೆಯನ್ನು ಬೂಸ್ಟ್‌ಕ್ಯಾಂಪ್ ಆನ್‌ಲೈನ್ ಮೂಲಕ ಹೇಳಿಕೊಡಲಾಗುತ್ತೆ. ಇನ್ನು ಕ್ರೀಡಾಪಟುಗಳ ಪೌಷ್ಠಿಕ ಆಹಾರ ಕುರಿತು ಬೂಸ್ಟ್ ಜೊತೆ ಒಪ್ಪಂದದಲ್ಲಿರುವ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಎಂ.ಎಸ್. ಧೋನಿ, ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ತರಬೇತಿ ನೀಡಲಿದ್ದಾರೆ.