ಕೊನೆಯುಸಿರೆಳೆದ ಭಾರತದ ಸ್ಪಿನ್ ದಂತಕಥೆ ಬಿಷನ್ ಸಿಂಗ್ ಬೇಡಿ..!
ಭಾರತ ತಂಡವನ್ನು ನಾಯಕನಾಗಿಯೂ ಮುನ್ನಡೆಸಿದ್ದ ಬಿಷನ್ ಸಿಂಗ್ ಬೇಡಿಯವರು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಎರಡು ವರ್ಷಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬೇಡಿಯವರು ಹಲವು ಸರ್ಜರಿಗಳಿಗೂ ಒಳಗಾಗಿದ್ದರು.
ನವದೆಹಲಿ(ಅ.23): ಭಾರತ ಕ್ರಿಕೆಟ್‌ನ ಸ್ಪಿನ್ ದಂತಕಥೆ ಬಿಷನ್ ಸಿಂಗ್ ಬೇಡಿ ಇಂದು ತಮ್ಮ 77ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. 1967ರಿಂದ 1979ರ ಅವಧಿಯಲ್ಲಿ ಭಾರತ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ ಬೇಡಿ, ಟೀಂ ಇಂಡಿಯಾ ಪರ 67 ಟೆಸ್ಟ್ ಹಾಗೂ 10 ಏಕದಿನ ಪಂದ್ಯಗಳನ್ನಾಡಿದ್ದರು.
ಭಾರತ ತಂಡವನ್ನು ನಾಯಕನಾಗಿಯೂ ಮುನ್ನಡೆಸಿದ್ದ ಬಿಷನ್ ಸಿಂಗ್ ಬೇಡಿಯವರು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಎರಡು ವರ್ಷಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬೇಡಿಯವರು ಹಲವು ಸರ್ಜರಿಗಳಿಗೂ ಒಳಗಾಗಿದ್ದರು. ಇನ್ನು ಕಳೆದ ತಿಂಗಳಷ್ಟೇ ಬಿಷನ್ ಸಿಂಗ್ ಬೇಡಿಯವರು ಮೊಣಕಾಲಿನ ಸರ್ಜರಿಯನ್ನು ಮಾಡಿಸಿಕೊಂಡಿದ್ದರು. ಇದೀಗ ಬಿಷನ್ ಸಿಂಗ್ ಬೇಡಿಯವರು ಪತ್ನಿ ಅಂಜು ಹಾಗೂ ತಮ್ಮ ಇಬ್ಬರು ಮಕ್ಕಳಾದ ನೇಹಾ ಹಾಗೂ ಅಂಗದ್ ಅವರನ್ನು ಅಗಲಿದ್ದಾರೆ.
ಗಾಯದ ಮೇಲೆ ಬರೆ..! ಹಾಲಿ ಚಾಂಪಿಯನ್ ಇಂಗ್ಲೆಂಡ್ ಮಾರಕ ವೇಗಿ ವಿಶ್ವಕಪ್ ಟೂರ್ನಿಯಿಂದಲೇ ಔಟ್..!
ಭಾರತ ಕ್ರಿಕೆಟ್ ತಂಡವು ಜಗತ್ತಿಗೆ ಪರಿಚಯಿಸಿದ ಶ್ರೇಷ್ಠ ಎಡಗೈ ಸ್ಪಿನ್ನರ್ ಎನ್ನುವ ಖ್ಯಾತಿಯ ಪಾತ್ರರಾಗಿದ್ದ ಬೇಡಿ, ಒಂದು ಕಾಲದಲ್ಲಿ ಭಾರತದ ಪರ ಅತಿಹೆಚ್ಚು ಟೆಸ್ಟ್ ವಿಕೆಟ್ ಕಬಳಿಸಿದ ಬೌಲರ್ ಎನ್ನುವ ಹಿರಿಮೆಗೂ ಪಾತ್ರರಾಗಿದ್ದರು. ಬಿಷನ್ ಸಿಂಗ್ ಬೇಡಿ ಭಾರತ ಪರ 67 ಟೆಸ್ಟ್ ಪಂದ್ಯಗಳನ್ನಾಡಿ 28.71ರ ಸರಾಸರಿಯಲ್ಲಿ 266 ವಿಕೆಟ್ ಕಬಳಿಸಿದ್ದರು. 1970ರ ದಶಕದಲ್ಲಿ ಭಾಗವತ್ ಚಂದ್ರಶೇಖರ್, ಎರಪಳ್ಳಿ ಪ್ರಸನ್ನ, ಶ್ರೀನಿವಾಸ್ ವೆಂಕಟರಾಘವನ್ ಅವರ ಜತೆ ಬೇಡಿ ಕೂಡಾ ಟೀಂ ಇಂಡಿಯಾದ ಬಲಾಢ್ಯ ಸ್ಪಿನ್ ವಿಭಾಗದ ಜವಾಬ್ದಾರಿ ಹೊತ್ತಿದ್ದರು.
ICC World Cup 2023: ಆಫ್ಘನ್ ಸ್ಪಿನ್ ಸವಾಲು ಗೆಲ್ಲುತ್ತಾ ಪಾಕಿಸ್ತಾನ?
ಬಿಷನ್ ಸಿಂಗ್ ಬೇಡಿಯವರ ನಿಧನಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ಗೌತಮ್ ಗಂಭೀರ್, ಮಿಥಾಲಿ ರಾಜ್, ಕ್ರೀಡಾ ಸಚಿವ ಅನುರಾಗ್ ಠಾಕೂರ್, ಮೊಹಮ್ಮದ್ ಸಿರಾಜ್ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.