Asianet Suvarna News Asianet Suvarna News

ICC World Cup 2023: ಆಫ್ಘನ್‌ ಸ್ಪಿನ್‌ ಸವಾಲು ಗೆಲ್ಲುತ್ತಾ ಪಾಕಿಸ್ತಾನ?

ಟೂರ್ನಿಯನ್ನು 2 ಗೆಲುವುಗಳೊಂದಿಗೆ ಆರಂಭಿಸಿದ್ದ ಬಾಬರ್ ಆಜಂ ಪಡೆಗೆ ಬಳಿಕ ಸತತ 2 ಸೋಲು ಎದುರಾಗಿದೆ. ಭಾರತ, ಆಸ್ಟ್ರೇಲಿಯಾ ಎರಡೂ ಪಂದ್ಯಗಳಲ್ಲೂ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಸ್ಪಿನ್ನರ್ ಗಳನ್ನು ಎದುರಿಸಲು ಪಾಕ್ ಬ್ಯಾಟರ್‌ಗಳು ತಿಣುಕಾಡಿದ್ದರು. ಇನ್ನು ಚೆಪಾಕ್‌ನ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಪಾಕಿಸ್ತಾನಿಯರ ಕಥೆ ಏನಾಗಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

ICC World Cup 2023 Pakistan Cricket team take on Afghanistan Challenge kvn
Author
First Published Oct 23, 2023, 1:11 PM IST

ಚೆನ್ನೈ(ಅ.23): ವಿಶ್ವಕಪ್‌ಗೆ ಕಾಲಿಡುವ ಮುನ್ನವೇ ಪಾಕಿಸ್ತಾನದ ತಲೆನೋವಿಗೆ ಕಾರಣವಾಗಿದ್ದು ಚೆನ್ನೈನಲ್ಲಿ ನಿಗದಿಯಾಗಿರುವ ಅಫ್ಘಾನಿಸ್ತಾನ ವಿರುದ್ಧದ ಪಂದ್ಯ. ತಜ್ಞ ಸ್ಪಿನ್ನರ್‌ಗಳನ್ನು ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಎದುರಿಸುವುದು ಹೇಗೆ ಎಂಬ ಚಿಂತೆ ಪಾಕ್ ಆಟಗಾರರಲ್ಲಿತ್ತು. ಸದ್ಯ ಆ ದಿನ ಬಂದೇ ಬಿಟ್ಟಿದ್ದು, ಸಾಂಪ್ರದಾಯಿಕ ವೈರಿಗಳ ನಡುವಿನ ಸೆಣಸಾಟ ಸೋಮವಾರ ನಡೆಯಲಿದೆ.

ಟೂರ್ನಿಯನ್ನು 2 ಗೆಲುವುಗಳೊಂದಿಗೆ ಆರಂಭಿಸಿದ್ದ ಬಾಬರ್ ಆಜಂ ಪಡೆಗೆ ಬಳಿಕ ಸತತ 2 ಸೋಲು ಎದುರಾಗಿದೆ. ಭಾರತ, ಆಸ್ಟ್ರೇಲಿಯಾ ಎರಡೂ ಪಂದ್ಯಗಳಲ್ಲೂ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಸ್ಪಿನ್ನರ್ ಗಳನ್ನು ಎದುರಿಸಲು ಪಾಕ್ ಬ್ಯಾಟರ್‌ಗಳು ತಿಣುಕಾಡಿದ್ದರು. ಇನ್ನು ಚೆಪಾಕ್‌ನ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಪಾಕಿಸ್ತಾನಿಯರ ಕಥೆ ಏನಾಗಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

IND vs NZ ಕಿವಿಸ್ ವಿರುದ್ಧ ಕೊಹ್ಲಿ ಹೋರಾಟ, ಜಯಸೂರ್ಯ ಸೇರಿ ದಿಗ್ಗಜರ ದಾಖಲೆ ಪುಡಿ ಪುಡಿ!

ಮತ್ತೊಂದೆಡೆ ಆಡಿರುವ 4ರಲ್ಲಿ ಕೇವಲ 1 ಪಂದ್ಯ ಗೆದ್ದು ಕೊನೆ ಸ್ಥಾನದಲ್ಲಿರುವ ಆಫ್ಘನ್‌ಗೂ ಈಗ ಗೆಲುವು ಅತ್ಯಗತ್ಯ. ಮತ್ತೊಂದು ಸೋಲು ತಂಡವನ್ನು ಸೆಮೀಸ್ ರೇಸ್‌ನಿಂದಲೇ ಹೊರಹಾಕಬಹುದು. ಹೀಗಾಗಿ ತನ್ನ ಸ್ಪಿನ್ನರ್‌ಗಳನ್ನೇ ಹೆಚ್ಚಾಗಿ ನೆಚ್ಚಿಕೊಳ್ಳದೆ ಬ್ಯಾಟರ್‌ಗಳೂ ಅಬ್ಬರಿಸಿದರೆ ಮಾತ್ರ ಪಾಕ್‌ಗೆ ಆಘಾತ ನೀಡಲು ಸಾಧ್ಯವಿದೆ. ಆದರೆ ಏಕದಿನದಲ್ಲಿ ಈ ವರೆಗೂ ಪಾಕ್ ವಿರುದ್ಧ ಗೆಲ್ಲದ ತಂಡಕ್ಕೆ ಈ ಬಾರಿ ಅದೃಷ್ಠ ಒಲಿಯಲಿದೆಯೇ ಎಂಬ ಪ್ರಶ್ನೆಗೆ ಉತ್ತರಸಿಗಬೇಕಿದೆ.

IND vs NZ ರೋಹಿತ್-ವಿರಾಟ್ ನಡುವೆ ನಡೆಯಿಯಾ ಮಾತಿನ ಚಕಮಕಿ? ವಿಡಿಯೋ ವೈರಲ್!

ಸಂಭಾವ್ಯ ಆಟಗಾರರ ಪಟ್ಟಿ ಹೀಗಿದೆ ನೋಡಿ

ಪಾಕಿಸ್ತಾನ:

ಅಬ್ದುಲ್ ಶಫಿಕ್, ಇಮಾಮ್ ಉಲ್ ಹಕ್, ಬಾಬರ್ ಅಜಂ(ನಾಯಕ), ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕಾರ್ ಅಹಮ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್.

ಆಫ್ಘಾನಿಸ್ತಾನ: 
ರೆಹಮನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ರೆಹಮತ್ ಶಾ, ಹಸ್ಮತುಲ್ಲಾ ಶಾಹಿದಿ(ನಾಯಕ), ಅಜ್ಮತುಲ್ಲಾ ಓಮರ್‌ಝೈ, ಇಕ್ರಾಂ ಅಲಿಕಿಲ್, ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ನವೀನ್ ಉಲ್ ಹಕ್, ಫಝಲ್‌ಹಕ್ ಫಾರೂಕಿ.

ಪಂದ್ಯ ಆರಂಭ: ಮಧ್ಯಾಹ್ನ: 2 ಗಂಟೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ ಹಾಟ್‌ಸ್ಟಾರ್

Follow Us:
Download App:
  • android
  • ios