ವೀಕ್ಷಕರಿಗೆ ಹಾಗೂ ತನ್ನ ಗರ್ಲ್‌ಫ್ರೆಂಡ್ಸ್‌ಗೆ ಸಪ್ರೈಸ್ ನೀಡುವಲ್ಲಿ ಆತ ಯಶಸ್ವಿಯಾಗಿದ್ದಾನೆ. ಮಂಡಿಯೂರಿ ರಿಂಗ್ ಮುಂದೆ ಹಿಡಿದು, "ಇದೊಂದು ದೊಡ್ಡ ಸಂದರ್ಭ, ನಾನು ಈ ರಿಂಗ್ ಅನ್ನು ನಿನಗೆ ತೊಡಿಸಲು ಬಯಸುತ್ತೇನೆ ಎಂದು ಪ್ರಪೋಸ್ ಮಾಡಿದ್ದಾರೆ. ಇದಾದ ಬಳಿಕ ಇಡೀ ಸ್ಟೇಡಿಯಂ ಈ ಸುಂದರ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಪ್ರೇಕ್ಷಕರು ಜೋರಾಗಿ ಚಪ್ಪಾಳೆ ತಟ್ಟುವ ಮೂಲಕ ಬೆಂಬಲಿಸಿದರು.

ಮೆಲ್ಬರ್ನ್‌(ಜ.03): ಆಸ್ಟ್ರೇಲಿಯಾದಲ್ಲಿ ಭರ್ಜರಿಯಾಗಿಯೇ ಬಿಗ್‌ಬ್ಯಾಶ್ ಲೀಗ್ ಟೂರ್ನಿ ಸಾಗುತ್ತಿದೆ. ಹೀಗಿರುವಾಗಲೇ ಐತಿಹಾಸಿಕ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತೀಯ ಮೂಲದ ಕ್ರಿಕೆಟ್ ಅಭಿಮಾನಿಯೊಬ್ಬ ತನ್ನ ಪ್ರೇಯಸಿಗೆ ಪ್ರೇಮ ನಿವೇದನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆತನ ಪ್ರೇಯಸಿಯ ಪ್ರತಿಕ್ರಿಯೆಯ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಈ ಪ್ರೇಮನಿವೇದನೆಯೂ ಇನಿಂಗ್ಸ್‌ ಬ್ರೇಕ್‌ ವೇಳೆಯಲ್ಲಿ ನಡೆದಿದ್ದು, ಇಂಟರ್‌ವ್ಯೂವರ್ ಮ್ಯಾಚ್ ಮಧ್ಯ ಸ್ಟೇಡಿಯಂನಲ್ಲಿ ಫ್ಯಾನ್ಸ್ ಜತೆ ಮಾತುಕತೆ ನಡೆಸುವ ವೇಳೆ ನಡೆದಿದೆ. ಈ ವೇಳೆ ಜೋಡಿಯೊಂದು ಬೇರೆ ಬೇರೆ ತಂಡವನ್ನು ಬೆಂಬಲಿಸುವ ಜೆರ್ಸಿ ತೊಟ್ಟು ಒಟ್ಟಿಗೆ ಕುಳಿತಿತ್ತು. ಆಗ ಇಂಟರ್‌ವ್ಯೂವರ್, ನೀವು ಬೇರೆ ಬೇರೆ ತಂಡವನ್ನು ಬೆಂಬಲಿಸುತ್ತಿರುವುದು ನಿಮ್ಮ ಸಂಬಂಧದ ಮೇಲೆ ಏನಾದರೂ ಪರಿಣಾಮ ಬೀರುತ್ತದೆಯೇ ಎಂದು ಕೇಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಆತ, "ನಾನು ದೊಡ್ಡ ಸ್ಟಾರ್‌ನ ಅಭಿಮಾನಿ ಹಾಗೂ ಆಕೆ ರೆನೆಗೇಡ್ಸ್‌ ತಂಡದ ಅಭಿಮಾನಿ. ಆದರೆ ಆಕೆ ಗ್ಲೆನ್ ಮ್ಯಾಕ್ಸ್‌ವೆಲ್ ಅಭಿಮಾನಿ ಮತ್ತು ನಾನು ಕೂಡಾ ಮ್ಯಾಕ್ಸ್‌ವೆಲ್ ಅಭಿಮಾನಿ. ಹೀಗಾಗಿಯೇ ನಾನು ಆಕೆಯನ್ನು ಕರೆದುಕೊಂಡು ಬಂದಿದ್ದೇನೆ ಎಂದು ಹೇಳಿದ್ದಾರೆ.

ಐಪಿಎಲ್‌ ಟೈಟಲ್ ಸ್ಪಾನ್ಸರ್: 5 ವರ್ಷಕ್ಕೆ ₹1,750 ಕೋಟಿ?

ಇದಾದ ಬಳಿಕ ವೀಕ್ಷಕರಿಗೆ ಹಾಗೂ ತನ್ನ ಗರ್ಲ್‌ಫ್ರೆಂಡ್ಸ್‌ಗೆ ಸಪ್ರೈಸ್ ನೀಡುವಲ್ಲಿ ಆತ ಯಶಸ್ವಿಯಾಗಿದ್ದಾನೆ. ಮಂಡಿಯೂರಿ ರಿಂಗ್ ಮುಂದೆ ಹಿಡಿದು, "ಇದೊಂದು ದೊಡ್ಡ ಸಂದರ್ಭ, ನಾನು ಈ ರಿಂಗ್ ಅನ್ನು ನಿನಗೆ ತೊಡಿಸಲು ಬಯಸುತ್ತೇನೆ ಎಂದು ಪ್ರಪೋಸ್ ಮಾಡಿದ್ದಾರೆ. ಇದಾದ ಬಳಿಕ ಇಡೀ ಸ್ಟೇಡಿಯಂ ಈ ಸುಂದರ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಪ್ರೇಕ್ಷಕರು ಜೋರಾಗಿ ಚಪ್ಪಾಳೆ ತಟ್ಟುವ ಮೂಲಕ ಬೆಂಬಲಿಸಿದರು.

ತಮ್ಮ ಪ್ರೇಮಿಯ ಈ ಪ್ರೇಮನಿವೇದನೆಯನ್ನು ಪ್ರೇಯಸಿ ಒಪ್ಪಿಕೊಂಡರು. ತಕ್ಷಣ ಆತ ಆಕೆಗೆ ಉಂಗುರ ತೊಡಿಸಿದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಹೀಗಿತ್ತು ನೋಡಿ ಆ ಕ್ಷಣ:

Scroll to load tweet…