Glenn Maxwell

(Search results - 32)

Ab De Villiers

CricketApr 18, 2021, 5:22 PM IST

ಐಪಿಎಲ್ 2021: ಮ್ಯಾಕ್ಸ್‌ವೆಲ್, ಎಬಿಡಿ ‌ಅಬ್ಬರ, ಕೆಕೆಆರ್‌ಗೆ ಕಠಿಣ ಗುರಿ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಆರ್‌ಸಿಬಿ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರ್‌ಸಿಬಿ ಎರಡಂಕಿ ಮೊತ್ತ ದಾಖಲಿಸುವಷ್ಟರಲ್ಲಿ ವಿರಾಟ್ ಕೊಹ್ಲಿ ಹಾಗೂ ರಜತ್‌ ಪಾಟೀದಾರ್‌ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಯಿತು.

Glenn Maxwell

CricketApr 6, 2021, 5:43 PM IST

IPL 2021: ಆರ್‌ಸಿಬಿ ಕೂಡಿಕೊಂಡ ಬೆನ್ನಲ್ಲೇ ಅಬ್ಬರಿಸಿದ ಮ್ಯಾಕ್ಸ್‌ವೆಲ್‌

ಕ್ವಾರಂಟೈನ್‌ ಮುಗಿಸಿ ನೇರವಾಗಿ ಮೈದಾನಕ್ಕಿಳಿದಿರುವ ಪವರ್‌ ಹಿಟ್ಟರ್‌ ಮ್ಯಾಕ್ಸ್‌ವೆಲ್‌ ಬ್ಯಾಟಿಂಗ್‌ ಅಭ್ಯಾಸದ ವೇಳೆ ಸಿಡಿಲಬ್ಬರದ ಬ್ಯಾಟಿಂಗ್‌ ಮೂಲಕ ಗಮನ ಸೆಳೆದಿದ್ದಾರೆ. ಗ್ಲೆನ್‌ ಮ್ಯಾಕ್ಸ್‌ವೆಲ್‌ ಮೊದಲ ದಿನದ ಅಭ್ಯಾಸದ ವೇಳೆ ಬ್ಯಾಟಿಂಗ್‌ ನಡೆಸಿದ ಕೆಲವು ರೋಚಕ ಕ್ಷಣಗಳನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.

Glenn Maxwell

CricketMar 3, 2021, 4:43 PM IST

ಗ್ಲೆನ್‌ ಮ್ಯಾಕ್ಸ್‌ವೆಲ್ ಅಬ್ಬರಕ್ಕೆ ಚೇರ್ ಪೀಸ್‌-ಪೀಸ್‌..! ವಿಡಿಯೋ ವೈರಲ್

ಗ್ಲೆನ್‌ ಮ್ಯಾಕ್ಸ್‌ವೆಲ್‌ ನ್ಯೂಜಿಲೆಂಡ್‌ ವಿರುದ್ದದ ಮೂರನೇ ಟಿ20 ಪಂದ್ಯದಲ್ಲಿ ಕೇವಲ 31 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್‌ ನೆರವಿನಿಂದ 70 ರನ್‌ ಬಾರಿಸಿ ಅಬ್ಬರಿಸಿದ್ದಾರೆ. ಜೋಸ್ ಫಿಲಿಫ್ಪಿ ವಿಕೆಟ್‌ ಪತನದ ಬಳಿಕ ಕ್ರೀಸ್‌ಗಿಳಿದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಕಿವೀಸ್‌ ಬೌಲರ್‌ಗಳೆದುರು ಅಕ್ಷರಶಃ ಸವಾರಿ ಮಾಡಿದ್ದಾರೆ.

Yuzvendra Chahal- Glenn Maxwell

CricketFeb 20, 2021, 12:30 PM IST

'ಟಾಮ್‌ ಅಂಡ್‌ ಜೆರ್ರಿ ಒಂದೇ ತಂಡದಲ್ಲಿ'; ವಿನೂತನವಾಗಿ ಮ್ಯಾಕ್ಸ್‌ವೆಲ್‌ ಸ್ವಾಗತಿಸಿದ ಚಹಲ್‌

14ನೇ ಆವೃತ್ತಿಯ ಆಟಗಾರರ ಹರಾಜಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿ ಮೋಯಿನ್ ಅಲಿ ಹಾಗೂ ಕ್ರಿಸ್‌ ಮೋರಿಸ್‌ ಅವರಂತಹ ಸ್ಟಾರ್ ಆಟಗಾರರನ್ನು ರಿಲೀಸ್‌ ಮಾಡಿದ ಬೆನ್ನಲ್ಲೇ ಉತ್ತಮ ಆಲ್ರೌಂಡರ್‌ನ ಹುಡುಕಾಟದಲ್ಲಿತ್ತು. ಗ್ಲೆನ್‌ ಮ್ಯಾಕ್ಸ್‌ವೆಲ್‌ ಖರೀದಿಸಲು ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ಕೋಲ್ಕತ ನೈಟ್ ರೈಡರ್ಸ್‌ ಸಾಕಷ್ಟು ಪೈಪೋಟಿ ನಡೆಸಿದವಾದರೂ ಪಟ್ಟು ಬಿಡದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ದುಬಾರಿ ಮೊತ್ತ ನೀಡಿ ಆಸ್ಟ್ರೇಲಿಯಾ ಆಲ್ರೌಂಡರ್‌ನನ್ನು ತನ್ನ ಕಡೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.

Suvarna-IPL-Highest bid

CricketFeb 18, 2021, 10:03 PM IST

IPL 2021 ಗರಿಷ್ಠ ಮೊತ್ತಕ್ಕೆ ಹರಾಜಾದ ಟಾಪ್‌ 5 ಕ್ರಿಕೆಟಿಗರಿವರು..!

ಬೆಂಗಳೂರು: ಚೆನ್ನೈನಲ್ಲಿ ನಡೆದ ಐಪಿಎಲ್‌ ಆಟಗಾರರ ಹರಾಜು ಮುಕ್ತಾಯವಾಗಿದ್ದು, ಎಲ್ಲಾ 8 ಫ್ರಾಂಚೈಸಿಗಳು ಸಾಕಷ್ಟು ಅಳೆದು-ತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿವೆ. ಒಟ್ಟು 291 ಆಟಗಾರರ ಪೈಕಿ 8 ಫ್ರಾಂಚೈಸಿಗಳು 22 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 57 ಆಟಗಾರರನ್ನು ಖರೀದಿಸಿವೆ.
ಇನ್ನು ಐಪಿಎಲ್ ಆಟಗಾರರ ಹರಾಜಿನ ಇತಿಹಾಸದಲ್ಲೇ ಈ ಬಾರಿ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕ್ರಿಸ್ ಮೋರಿಸ್‌ 16.25 ಕೋಟಿ ರುಪಾಯಿಗೆ ಹರಾಜಾಗುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಸಂದರ್ಭದಲ್ಲಿ 14ನೇ ಆವೃತ್ತಿಯ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಹರಾಜಾದ ಟಾಪ್ 5 ಆಟಗಾರರ ವಿವರ ಇಲ್ಲಿದೆ ನೋಡಿ.

Glenn Maxwell

CricketFeb 18, 2021, 8:06 PM IST

ಆರ್‌ಸಿಬಿಗೆ ಬ್ರಹ್ಮಾಸ್ತ್ರ ಎಂಟ್ರಿ; ಮ್ಯಾಕ್ಸಿ ಸೇರ್ಪಡೆಗೆ ಜೈ ಹೋ ಎಂದ ಫ್ಯಾನ್ಸ್‌..!

ಆರಂಭದಲ್ಲೇ ಮ್ಯಾಕ್ಸ್‌ವೆಲ್‌ ಖರೀದಿಸಲು ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗಳು ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಕೊನೆಯವರೆಗೂ ಪಟ್ಟು ಬಿಡದ ಆರ್‌ಸಿಬಿ ಆಸ್ಟ್ರೇಲಿಯಾದ ಆಲ್ರೌಂಡರ್‌ರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್‌ ಬಳಿಕ ಮತ್ತೋರ್ವ ಸ್ಫೋಟಕ ಬ್ಯಾಟ್ಸ್‌ಮನ್‌ ತಂಡ ಕೂಡಿಕೊಂಡಿರುವುದು ಆರ್‌ಸಿಬಿ ಅಭಿಮಾನಿಗಳಲ್ಲಿ ಮತ್ತಷ್ಟು ಹುರುಪು ಮೂಡುವಂತೆ ಮಾಡಿದೆ.

• undefined

CricketFeb 18, 2021, 6:13 PM IST

RCB ಸೇರಿದ ಬೆನ್ನಲ್ಲೇ ಶಪಥ ಮಾಡಿದ ಗ್ಲೆನ್ ಮ್ಯಾಕ್ಸ್‌ವೆಲ್!

ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗ್ಲೆನ್ ಮ್ಯಾಕ್ಸ್‌ವೆಲ್ ಖರೀದಿಸಿದೆ. ಸಿಹಿ ಸುದ್ದಿ ಕಿವಿಗೆ ಬೀಳುತ್ತಲೇ ಗ್ಲೆನ್ ಮ್ಯಾಕ್ಸ್‌ವೆಲ್ ಶಪಥವೊಂದು ಮಾಡಿದ್ದಾರೆ.

Suvarna-IPL-Glenn Maxwell

CricketFeb 18, 2021, 3:41 PM IST

IPL Auction: ದಾಖಲೆ ಮೊತ್ತ ನೀಡಿದ ಮ್ಯಾಕ್ಸ್‌ವೆಲ್ ಖರೀದಿಸಿದ RCB!

2021ರ IPL ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಆಟಗಾರನ ಖರೀದಿಸಿದೆ. ಆದರೆ ಮೊದಲ ಖರೀದಿಯಲ್ಲಿ ಆರ್‌ಸಿಬಿ ದಾಖಲೆ ಬರೆದಿದೆ.

Glenn Maxwell

CricketFeb 17, 2021, 11:08 AM IST

ನಾನು ಈ ತಂಡದ ಪರ ಐಪಿಎಲ್‌ ಆಡಲು ಇಷ್ಟಪಡುತ್ತೇನೆ ಎಂದ ಗ್ಲೆನ್‌ ಮ್ಯಾಕ್ಸ್‌ವೆಲ್‌..!

ಕಳೆದ ಆವೃತ್ತಿಯಲ್ಲಿ ಮ್ಯಾಕ್ಸ್‌ವೆಲ್‌, ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಪರ ಆಡಿದ್ದರು. ಆದರೆ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರದ ಕಾರಣ, ಈ ಬಾರಿ ತಂಡ ಅವರನ್ನು ಕೈಬಿಟ್ಟಿದೆ. ಮ್ಯಾಕ್ಸ್‌ವೆಲ್‌ ಐಪಿಎಲ್‌ನಲ್ಲಿ ಡೆಲ್ಲಿ, ಮುಂಬೈ ತಂಡದ ಪರವೂ ಆಡಿದ್ದಾರೆ.

Glenn Maxwell

CricketJan 22, 2021, 5:28 PM IST

ಗ್ಲೆನ್‌ ಮ್ಯಾಕ್ಸ್‌ವೆಲ್‌ ಖರೀದಿಗೆ RCB ಸೇರಿದಂತೆ ಈ 3 ತಂಡಗಳಿಂದ ಪೈಪೋಟಿ..?

ಬೆಂಗಳೂರು: ತಮ್ಮ ವಿಸ್ಪೋಟಕ ಬ್ಯಾಟಿಂಗ್‌ ಹಾಗೂ ಉಪಯುಕ್ತ ಸ್ಪಿನ್‌ ಬೌಲಿಂಗ್‌ ಮೂಲಕ ಸ್ಟಾರ್ ಆಲ್ರೌಂಡರ್‌ ಆಗಿ ಹೊರಹೊಮ್ಮಿರುವ ಆಸ್ಟ್ರೇಲಿಯಾದ ಗ್ಲೆನ್‌ ಮ್ಯಾಕ್ಸ್‌ವೆಲ್‌ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.
ಕಳೆದ  ವರ್ಷ ಕಿಂಗ್ಸ್ ಇಲೆವನ್ ಪಂಜಾಬ್ ಫ್ರಾಂಚೈಸಿ 10.75 ಕೋಟಿ ರುಪಾಯಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಆದರೆ ಮ್ಯಾಕ್ಸ್‌ವೆಲ್‌ 13 ಪಂದ್ಯಗಳನ್ನಾಡಿ ಒಂದೇ ಒಂದು ಸಿಕ್ಸರ್ ಸಹ ಸಿಡಿಸದೇ 108 ರನ್‌ ಬಾರಿಸಿದ್ದರು. ಇದರ ಬೆನ್ನಲ್ಲೇ ಮ್ಯಾಕ್ಸ್‌ವೆಲ್‌ ಅವರನ್ನು KXIP ಫ್ರಾಂಚೈಸಿ ರಿಲೀಸ್‌ ಮಾಡಿದೆ. ಮುಂಬರುವ ಮಿನಿ ಹರಾಜಿನಲ್ಲಿ ಈ 3 ತಂಡಗಳು ಮ್ಯಾಕ್ಸ್‌ವೆಲ್ ಖರೀದಿಸಲು ಪೈಪೋಟಿ ನಡೆಸುವ ಸಾಧ್ಯತೆಯಿದೆ.

Glenn Maxwell

CricketDec 8, 2020, 3:35 PM IST

ವೇಡ್-ಮ್ಯಾಕ್ಸಿ ಅಬ್ಬರ: ಭಾರತಕ್ಕೆ ಸವಾಲಿನ ಟಾರ್ಗೆಟ್ ನೀಡಿದ ಆಸ್ಟ್ರೇಲಿಯಾ

ಕೊನೆಯ ಟಿ20 ಪಂದ್ಯದಲ್ಲಿ ಟಾಸ್ ಸೋತರೂ ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆತಿಥೇಯ ಆಸ್ಟ್ರೇಲಿಯಾ ಆರಂಭದಲ್ಲೇ ನಾಯಕ ಆ್ಯರೋನ್ ಫಿಂಚ್(0) ವಿಕೆಟ್ ಕಳೆದುಕೊಂಡಿತು. ಆ ಬಳಿಕ ಎರಡನೇ ವಿಕೆಟ್‌ಗೆ ಜತೆಯಾದ ಮ್ಯಾಥ್ಯೂ ವೇಡ್ ಹಾಗೂ ಸ್ಟೀವ್ ಸ್ಮಿತ್ ಜೋಡಿ ಎರಡನೇ ವಿಕೆಟ್‌ಗೆ 65 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

Glenn Maxwell

CricketNov 28, 2020, 4:52 PM IST

KL ರಾಹುಲ್ ಎದುರೇ ಅಬ್ಬರಿಸಿ ಕೊನೆಗೆ ಪಂಜಾಬ್ ನಾಯಕನ ಕ್ಷಮೆ ಕೇಳಿದ ಮ್ಯಾಕ್ಸ್‌ವೆಲ್..!

ಸಿಡ್ನಿ: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅಕ್ಷರಶಃ ಮಂಕಾಗಿದ್ದ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್, ಭಾರತ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.
ಕಿಂಗ್ಸ್‌ ಇಲೆವನ್ ಪಂಜಾಬ್ ನಾಯಕ ಕೆ.ಎಲ್ ರಾಹುಲ್ ಎದುರೇ ಗ್ಲೆನ್ ಮ್ಯಾಕ್ಸ್‌ವೆಲ್ ಆಕರ್ಷಕ ಸಿಕ್ಸರ್ ಸಿಡಿಸಿ ಮಿಂಚಿದರು. 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಒಂದೇ ಒಂದು ಸಿಕ್ಸರ್ ಬಾರಿಸಲು ವಿಫಲವಾಗಿದ್ದ ಮ್ಯಾಕ್ಸಿ, ಟೀಂ ಇಂಡಿಯಾ ವಿರುದ್ಧ ಮೈ ಚಳಿ ಬಿಟ್ಟು ಬ್ಯಾಟಿಂಗ್ ನಡೆಸಿದ್ದಾರೆ. ಪಂದ್ಯ ಮುಕ್ತಾಯದ ಬಳಿಕ ಮ್ಯಾಕ್ಸ್‌ವೆಲ್ ಪಂಜಾಬ್ ನಾಯಕ ರಾಹುಲ್ ಕ್ಷಮೆಯನ್ನು ಕೇಳಿದ್ದಾರೆ. ಇದೇ ವೇಳೆ ನ್ಯೂಜಿಲೆಂಡ್ ಆಲ್ರೌಂಡರ್ ಜೇಮ್ಸ್ ನೀಶಮ್ ಕೂಡಾ ಮ್ಯಾಕ್ಸಿಗೆ ಸಾಥ್ ನೀಡಿದ್ದಾರೆ.

Glenn Maxwell, Alex Carry

CricketSep 17, 2020, 1:50 PM IST

ಮ್ಯಾಕ್ಸಿ-ಕ್ಯಾರಿ ಭರ್ಜರಿ ಶತಕ: ಹಾಲಿ ಚಾಂಪಿಯನ್ನರ ವಿರುದ್ಧ ಆಸೀಸ್ ಜಯಭೇರಿ

ಇಂಗ್ಲೆಂಡ್‌ ನೀಡಿದ್ದ 303 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಒಂದು ಹಂತದಲ್ಲಿ 73 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತ್ತು. ಆದರೆ 6ನೇ ವಿಕೆಟ್‌ಗೆ ಜತೆಯಾದ ಅಲೆಕ್ಸ್ ಕ್ಯಾರಿ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಜೋಡಿ 212 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಅಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು.

maxwell ipl

Video Icon

IPLSep 11, 2020, 6:15 PM IST

ಬಯಲಾಯ್ತು ಸೀಕ್ರೇಟ್: KXIP ಮ್ಯಾಕ್ಸ್‌ವೆಲ್ ದುಬಾರಿ ಮೊತ್ತಕ್ಕೆ ಖರೀದಿಸಿದ್ದೇಕೆ..?

ಯಾರಿಗೂ ಬೇಡವಾಗಿದ್ದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರಿಗೆ ಅಷ್ಟೊಂದು ದುಬಾರಿ ಮೊತ್ತ ನೀಡಿ ಖರೀದಿಸಿದ್ದೇಕೆ ಎನ್ನುವ ಸೀಕ್ರೆಟ್‌ ಇದೀಗ ಬಯಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

IPL 2020 Orange Cap

IPLAug 6, 2020, 5:16 PM IST

IPL 2020: ಈ ಐವರು ಬ್ಯಾಟ್ಸ್‌ಮನ್‌ಗಳು ಈ ಬಾರಿ ಆರೆಂಜ್ ಕ್ಯಾಪ್ ಗೆಲ್ಲಬಲ್ಲರು..!

ಬೆಂಗಳೂರು: ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾಗಲಿದೆ. ಈ ಹಿಂದೆ 2014ರಲ್ಲಿ ಯುಎಇನಲ್ಲಿ ಅರ್ಧ ಟೂರ್ನಿ ಯುಎಇನಲ್ಲಿ ನಡೆದಿತ್ತು.
ಹೊಡಿ ಬಡಿ ಆಟಕ್ಕೆ ಹೆಸರುವಾಸಿಯಾದ ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದ ತಂಡವೇ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.  ಯುಎಇ ಪಿಚ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅದ್ಭುತ ಪ್ರದರ್ಶನ ತೋರಿದ್ದಾರೆ. ಈ ಬಾರಿ ಯಾವ ಆಟಗಾರರು ಆರೆಂಜ್ ಕ್ಯಾಪ್(ಗರಿಷ್ಠ ರನ್ ಬಾರಿಸುವ ಆಟಗಾರ) ಗೆಲ್ಲಬಹುದು ಎನ್ನುವುದನ್ನು ನೋಡೋಣ ಬನ್ನಿ.