Asianet Suvarna News Asianet Suvarna News

ಅನುಷ್ಕಾ ಜೊತೆಗೂ ಉತ್ತಮ ಬಾಂಧವ್ಯ ಹೊಂದಿರುವ ವಿರಾಟ್‌ ಕೊಹ್ಲಿಯ ಅಕ್ಕನ ಬಗ್ಗೆ ನಿಮಗೆಷ್ಟು ಗೊತ್ತು?

Virat Kohli elder sister bhawna kohli dhingra ಬಾಲ್ಯದಿಂದಲೂ ಕ್ರಿಕೆಟ್‌ನ ಬಗ್ಗೆ ಅಪಾರವಾದ ಆಸಕ್ತಿ ಹೊಂದಿದ್ದ ವಿರಾಟ್‌ ಕೊಹ್ಲಿಗೆ ಶಾಲಾ ದಿನಗಳಲ್ಲಿ ಅವರ ಆಡುವ ಹುಚ್ಚಿಗೆ ಅಪಾರ ಬೆಂಬಲ ನೀಡಿದ್ದವರು ಅಕ್ಕ ಭಾವನಾ ಕೊಹ್ಲಿ ಧಿಂಗ್ರಾ.

Bhawna Kohli Dhingra Virat Kohli elder sister  shares good relations with Anushka san
Author
First Published Nov 6, 2023, 7:04 PM IST

ನವದೆಹಲಿ (ನ.6): ಟೀಮ್ ಇಂಡಿಯಾದ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ ನವೆಂಬರ್‌ 5 ರಂದು ತಮ್ಮ 35ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡರು. ಈ ಹಂತದಲ್ಲಿ ವಿರಾಟ್‌ ಕೊಹ್ಲಿ ಅವರ ಕ್ರಿಕೆಟ್‌ ಬದುಕಿನಲ್ಲಿ ದೊಡ್ಡ ಮಟ್ಟದ ಬೆಂಬಲವಾಗಿ ನಿಂತ ಭಾವ್ನಾ ಕೊಹ್ಲಿ ಧಿಂಗ್ರಾ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಕೊಹ್ಲಿ ಅವರ ಕ್ರಿಕೆಟ್‌ ಬದುಕಿನಲ್ಲಿ ಭಾವ್ನಾ ಕೊಹ್ಲಿ ದೊಡ್ಡ ಬಲ ಮಾತ್ರವಲ್ಲ, ಸ್ಪೂರ್ತಿಯೂ ಕೂಡ ಹೌದು. ಕೊಹ್ಲಿ ಕ್ರಿಕೆಟ್‌ ಬದುಕಿನ ಆರಂಭಿಕ ದಿನಗಳಲ್ಲಿ ದೊಡ್ಡ ಮಟ್ಟದ ಪ್ರಭಾವವನ್ನು ಬೀರಿದ್ದು ಅಕ್ಕ  ಭಾವ್ನಾ ಕೊಹ್ಲಿ ಎಂದು ಸ್ವತಃ ವಿರಾಟ್‌ ಕೊಹ್ಲಿಯೇ ಸಾಕಷ್ಟು ಬಾರಿ ಹೇಳಿದ್ದಾರೆ. ಹಾಗಾದರೆ ವಿರಾಟ್ ಕೊಹ್ಲಿ ಅವರ ಅಕ್ಕ ಮತ್ತು ಅನುಷ್ಕಾ ಶರ್ಮಾ ಅವರ ಅತ್ತಿಗೆ ಭಾವನಾ ಕೊಹ್ಲಿ ಧಿಂಗ್ರಾ ಬಗ್ಗೆ ನಿಮಗೆ ಗೊತ್ತಿರದೇ ಇರುವ ಮಾಹಿತಿ ಇದೆ.

ವಿರಾಟ್ ಕೊಹ್ಲಿ ಯಾವಾಗಲೂ ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿದ್ದರು ಮತ್ತು ಅವರು ತಮ್ಮ ಶಾಲಾ ದಿನಗಳಲ್ಲಿ ಆಡುವಾಗ, ಭಾವನಾ ಕೊಹ್ಲಿ ಧಿಂಗ್ರಾ ಅವರ ದೊಡ್ಡ ಬೆಂಬಲವಾಗಿ ನಿಂತಿದ್ದರು. ದೆಹಲಿಯವರಾದ ಭಾವನಾ ಕೊಹ್ಲಿ ಧಿಂಗ್ರಾ, ಹಂಸರಾಜ್‌ ಮಾಡೆಲ್‌ ಸ್ಕೂಲ್‌ನಲ್ಲಿ ಶಾಳಾ ಶಿಕ್ಷಣವನ್ನು ಪೂರೈಸಿದ್ದಾರೆ. ಆ ಬಳಿಕ ದೆಹಲಿಯ ದೌತಲ್‌ ರಾಮ್‌ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ್ದಾರೆ. ಉದ್ಯಮಿ ಸಂಜಯ್‌ ಧಿಂಗ್ರಾ ಅವರನ್ನು ವಿವಾಹವಾಗಿರುವ ಭಾವ್ನಾ ಕೊಹ್ಲಿಗೆ ಮೆಹಕ್‌ ಮತ್ತು ಆಯುಷ್‌ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ವರದಿಗಳ ಪ್ರಕಾರ, ಭಾವನಾ ಕೊಹ್ಲಿ ಧಿಂಗ್ರಾ ಕೂಡ ವಿರಾಟ್ ಕೊಹ್ಲಿಯ ಬ್ರ್ಯಾಂಡ್ 'One8 Select' ನ ಪ್ರಮುಖ ಸದಸ್ಯರಾಗಿದ್ದಾರೆ.

ಭಾವನಾ ಕೊಹ್ಲಿ ಧಿಂಗ್ರಾ ಅವರು ಅನುಷ್ಕಾ ಶರ್ಮಾ ಅವರೊಂದಿಗೆ ಉತ್ತಮ ಸಂಬಂಧವನ್ನು ಹಂಚಿಕೊಂಡಿದ್ದಾರೆ. ವಿರಾಟ್‌ ಕೊಹ್ಲಿ ಮದುವೆಯ ನಂತರ ಅನುಷ್ಕಾ ಅವರನ್ನು ಅಧಿಕೃತವಾಗಿ ಕುಟುಂಬಕ್ಕೆ ಭಾವ್ನಾ ಅವರು ಸ್ವಾಗತಿಸಿದ್ದರು. "ಅಂತಿಮವಾಗಿ ಅನುಷ್ಕಾ ಕುಟುಂಬಕ್ಕೆ ಸುಸ್ವಾಗತ ವೀರ್ ಜಿ ವ್ಯೋನ್ ಚಲ್ಯಾ ರಾಲ್ ಮಿಲ್ ಖುಷಿಯನ್ ಮನಾಯಿಯೇ" ಎಂದು ಅವರು ಬರೆದುಕೊಂಡಿದ್ದರು.

ಭಾವ್ನಾ ಇನ್ಸ್‌ಟಾಗ್ರಾಮ್‌ನಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ ಮತ್ತು ವಿರಾಟ್ ಮತ್ತು ಅವರ ಸಹೋದರ ವಿಕಾಸ್ ಕೊಹ್ಲಿ ಅವರ ಬಾಲ್ಯದ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವಿರಾಟ್‌ ಕೊಹ್ಲಿ ಬಾಲ್ಯದ ದಿನಗಳಲ್ಲಿ ಕೇಕ್‌ ಕತ್ತರಿಸಿದ ಸಮಯದಿಂದ ಹಿಡಿದು, ವಿರಾಟ್‌ನ ಬಾಲ್ಯದ ಹಲವು ಫೋಟೋಗಳನ್ನು ಬಾವ್ನಾ ಹಂಚಿಕೊಳ್ಳುವ ಮೂಲಕ ಸಹೋದರ ಕುರಿತಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿರುತ್ತಾರೆ.

ಈ ಬಾಲಕ ಇದೀಗ ಸುದ್ದಿಯಲ್ಲಿರೋ ಖ್ಯಾತ ಕ್ರಿಕೆಟಿಗ, ಯಾರು ಗೆಸ್ ಮಾಡಿ ನೋಡೋಣ!

ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಶತಕ ಬಾರಿಸಿದ ಬಳಿಕ ಪೋಸ್ಟ್‌ ಹಂಚಿಕೊಂಡಿದ್ದ ಭಾವನಾ ಕೊಹ್ಲಿ ಧಿಂಗ್ರಾ ತಮ್ಮ ಸಹೋದರನನ್ನು ಹೊಗಳುತ್ತಾ Instagramನಲ್ಲಿ ಬರೆದುಕೊಂಡಿದ್ದರು. "ಹೆಮ್ಮೆ ಒಂದು ಸಣ್ಣ ಪದ, ನೀವು ಇದನ್ನು ಮಾಡಲು ನಿಮ್ಮ ಕಠಿಣ ಪರಿಶ್ರಮ ಮತ್ತು ಈ ಆಟದ ಬಗ್ಗೆ ಸ್ಪಷ್ಟ ಉತ್ಸಾಹವಿದೆ. ನಿಮ್ಮ ದಾರಿಯ ಪ್ರತಿಯೊಂದು ಹಂತದಲ್ಲೂ ತೋರಿಸಲಾಗಿದೆ .ನಿಮ್ಮ ಸಾಧನೆಗಳನ್ನು ಅಂತಹ ಅದ್ಭುತ ಮಟ್ಟದಲ್ಲಿ ನೋಡುವ ಅದೃಷ್ಟವನ್ನು ಕುಟುಂಬವಾಗಿ ನಾವು ಹೊಂದಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿದೆ, ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ' ಎಂದು ಬರೆದಿದ್ದಾರೆ.

ನನ್ನ ದಾಖಲೆ ಕೊಹ್ಲಿ-ರೋಹಿತ್ ಮುರಿಯುತ್ತಾರೆ; 2012ರಲ್ಲೇ ಸಲ್ಮಾನ್ ಖಾನ್‌ಗೆ ಭವಿಷ್ಯ ನುಡಿದಿದ್ದ ಸಚಿನ್!

Follow Us:
Download App:
  • android
  • ios