ಈ ಬಾಲಕ ಇದೀಗ ಸುದ್ದಿಯಲ್ಲಿರೋ ಖ್ಯಾತ ಕ್ರಿಕೆಟಿಗ, ಯಾರು ಗೆಸ್ ಮಾಡಿ ನೋಡೋಣ!
ಇಂಟರ್‌ನೆಟ್‌ನಲ್ಲಿ ಒಂದು ಚಿಕ್ಕ ಬಾಲಕನ ಫೋಟೋ ಸಖತ್ ವೈರಲ್ ಆಗಿದೆ. ಆ ಬಾಲಕ ಇದೀಗ ಸುದ್ದಿಯಲ್ಲಿರೋ ಖ್ಯಾತ ಕ್ರಿಕೆಟಿಗ. ಅಷ್ಟಕ್ಕೂ ಅವರು ಯಾರು ಗೊತ್ತಾ? ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸೆಂಚುರಿ ದಾಖಲೆಯನ್ನೇ ಬದಿಗಟ್ಟಿದ ಕಿಂಗ್ ಕೋಹ್ಲಿ.
ವೈರಲ್ ಆಗಿರುವ ಈ ಫೋಟೋದಲ್ಲಿರುವ ಪುಟ್ಟ ಬಾಲಕ ಬೇರೆ ಯಾರೂ ಅಲ್ಲ. ಟೀಮ್ ಇಂಡಿಯಾದ ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ. ಅಂದಿನ ಈ ಪುಟಾಣಿ ಇಂದು ವಿಶ್ವ ಕ್ರಿಕೆಟ್‌ನಲ್ಲಿ ವಿರಾಟನಾಗಿ ಬೆಳೆದಿದ್ದಾರೆ.
ವಿರಾಟ್ ಕೊಹ್ಲಿ ಅವರು ಕೋಲ್ಕತ್ತಾದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ 49ನೇ ಏಕದಿನ ಅಂತಾರಾಷ್ಟ್ರೀಯ ಶತಕವನ್ನು ಸಿಡಿಸುವ ಮೂಲಕ ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ತಮ್ಮ 35 ನೇ ಹುಟ್ಟುಹಬ್ಬದಂದು ವಿರಾಟ್ ಕೊಹ್ಲಿ ತಮ್ಮ 49ನೇ ಶತಕವನ್ನು ಸಿಡಿಸಿ ಸಚಿನ್ ತೆಂಡೂಲ್ಕರ್ ಅವರ ಅತಿ ಹೆಚ್ಚು ODI ಶತಕಗಳ ದಾಖಲೆಯನ್ನು ಸರಿಗಟ್ಟಿದರು.
ಭಾರತದ ಏಸ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಏಕದಿನ ಮಾದರಿಯಲ್ಲಿ ಒಂದೇ ವರ್ಷದಲ್ಲಿ ಅತಿ ಹೆಚ್ಚು ಸಾವಿರ ರನ್ ಗಳಿಸಿದ ಬ್ಯಾಟರ್ ಆಗುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನೇ ಹಿಂದಿಕ್ಕಿದ್ದಾರೆ.
ವಿರಾಟ್ ತಮ್ಮ 49ನೇ ಶತಕದ ಈ ಮೈಲಿಗಲ್ಲು 217 ಇನ್ನಿಂಗ್ಸ್‌ನಲ್ಲಿ ಸಾಧಿಸಿದರು. ಸಚಿನ್ ತೆಂಡೂಲ್ಕರ್ ಅವರು ಅದೇ ಮೈಲಿಗಲ್ಲು ಸಾಧಿಸಲು 400 ಕ್ಕೂ ಹೆಚ್ಚು ಇನ್ನಿಂಗ್ಸ್ ತೆಗೆದು ಕೊಂಡರು.
ವಿರಾಟ್ ತಮ್ಮ 49ನೇ ಶತಕದ ದಾಖಲೆ ಜೊತೆಗೆ ತವರು ನೆಲದಲ್ಲಿ ಏಕದಿನದಲ್ಲಿ 6000 ರನ್ ಪೂರೈಸಿದ ಎರಡನೇ ಬ್ಯಾಟರ್ ಆದರು. ಮೊದಲ ಸ್ಥಾನದಲ್ಲಿ ತೆಂಡೂಲ್ಕರ್ ಇದ್ದಾರೆ.
ವಿರಾಟ್ 116 ಇನ್ನಿಂಗ್ಸ್‌ನಲ್ಲಿ 60.46 ರ ಸರಾಸರಿಯಲ್ಲಿ 6046 ರನ್ ಗಳಿಸಿ ರನ್ ಗಳಿಸಿದರು. ಅದೇ ಸಮಯದಲ್ಲಿ ಸಚ್ಚಿನ್ ತೆಂಡೂಲ್ಕರ್ ಅವರು 48.11 ಅವರೇಜ್‌ನಲ್ಲಿ 6976 ರನ್ ಅನ್ನು 160 ಮ್ಯಾಚ್‌ಗಳಲ್ಲಿ ಪೂರೈಸಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಟಿಂಗ್ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಜಾಕ್ವೆಸ್ ಕಾಲಿಸ್ ಅವರ ತವರಿನಲ್ಲಿ 5,000 ಪ್ಲಸ್ ರನ್‌ಗಳನ್ನು ಕಲೆಹಾಕಿದ ಇತರ ಬ್ಯಾಟರ್ ಆಗಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ಹುಟ್ಟುಹಬ್ಬದಂದು ODIನಲ್ಲಿ ಶತಕ ಗಳಿಸಿದ ಆಟಗಾರರರಲ್ಲಿ ವಿರಾಟ್ ಕೊಹ್ಲಿ ಏಳನೇ ಕ್ರಿಕೆಟರ್ ಆಗಿದ್ದಾರೆ. ವಿಶೇಷವೆಂದರೆ ಸಚಿನ್ ಕೂಡ ತಮ್ಮ ಬರ್ತ್‌ಡೇ ದಿನ 1998ರಲ್ಲಿ ಶಾರ್ಜಾದಲ್ಲಿ ಆಸ್ಟ್ರೇಲೇಯಾದ ವಿರುದ್ಧ 134 ರನ್ ಗಳಿಸಿದ್ದರು.
ವಿರಾಟ್ ಮತ್ತು ತೆಂಡೂಲ್ಕರ್ ಹೊರತುಪಡಿಸಿ, ವಿನೋದ್ ಕಾಂಬ್ಳಿ, ಶ್ರೀಲಂಕಾದ ಸನತ್ ಜಯಸೂರ್ಯ. ನ್ಯೂಜಿಲೆಂಡ್‌ನ ರಾಸ್ ಟೇಲರ್ ಮತ್ತು ಟಾಮ್ ಲ್ಯಾಥಮ್ ಮತ್ತು ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್ ತಮ್ಮ ಹುಟ್ಟಿದಹಬ್ಬದಂದು ಶತಕ ಗಳಿಸಿದ ಇತರ ಆಟಗಾರರು.