Asianet Suvarna News Asianet Suvarna News

ಬೆನ್ ಸ್ಟೋಕ್ಸ್ ನಿವೃತ್ತಿ: ಭಾರತೀಯ ಕ್ರಿಕೆಟರ್ಸ್​ ಕಲಿಬೇಕಾದ ಪಾಠವೇನು..?

ಒಂದು ಸೀರಿಸ್‌ನಲ್ಲಿ ಫೇಲಾದ ಬೆನ್‌ ಸ್ಟೋಕ್ಸ್ ಏಕದಿನ ಕ್ರಿಕೆಟ್‌ಗೆ ಗುಡ್‌ಬೈ
ಟೀಂ ಇಂಡಿಯಾ ಕ್ರಿಕೆಟಿಗರಿಗೆ ಪಾಠವಾಗುತ್ತಾ ಬೆನ್ ಸ್ಟೋಕ್ಸ್‌ ನಡೆ
ಸತತ ವೈಫಲ್ಯ ಅನುಭವಿಸುತ್ತಿರುವ ವಿರಾಟ್ ಕೊಹ್ಲಿ

Ben Stokes Retirement Indian Senior Cricketers need to learn lesson kvn
Author
Bengaluru, First Published Jul 20, 2022, 4:56 PM IST

ಬೆಂಗಳೂರು(ಜು.20): ಬೆನ್​​ ಸ್ಟೋಕ್ಸ್​. ವಿಶ್ವದ ದಿ ಬೆಸ್ಟ್​​​​​ ಆಲ್​ರೌಂಡರ್​​​. ಇಂಗ್ಲೆಂಡ್​​​ ಏಕದಿನ ವಿಶ್ವಕಪ್ ಗೆಲುವಿನ ಹೀರೋ. ವಯಸ್ಸು ಇನ್ನೂ ಬರೀ 31. ಇತ್ತೀಚೆಗಷ್ಟೇ ಟೆಸ್ಟ್​​​​ ತಂಡಕ್ಕೆ ನಾಯಕಾಗಿ ಯಶಸ್ಸು ಕಂಡ ಖ್ಯಾತ ಕ್ರಿಕೆಟಿಗ. ಇಂತಹ ಆಲ್​ರೌಂಡರ್​ ಸೋಮವಾರ ಅಚ್ಚರಿ ರೀತಿಯಲ್ಲಿ ಏಕದಿನ ಕ್ರಿಕೆಟ್​​​ಗೆ ಗುಡ್​​ಬೈ ಹೇಳಿದ್ರು. ಬೆನ್​ ಸ್ಟೋಕ್ಸ್​ರ ಈ ನಿರ್ಧಾರ ಒಂದು ಕ್ಷಣ ಕ್ರಿಕೆಟ್​ ಲೋಕವನ್ನ ಬೆಕ್ಕಸ ಬೆರಗಾಗಿಸಿದ್ದು ಸುಳ್ಳಲ್ಲ. ಯಾಕಂದ್ರೆ ಬೆನ್‌ ಸ್ಟೋಕ್ಸ್​​ ಈಗಿರೋ ಫಾರ್ಮ್​ಗೆ ಇನ್ನು ಕನಿಷ್ಟ 5-6 ವರ್ಷ ಕ್ರಿಕೆಟ್ ಆಡಬಹುದಿತ್ತು. ಕ್ರಿಕೆಟ್​​ನಲ್ಲಿ ಮತ್ತಷ್ಟು ಸಾಧನೆಯ ಶಿಖರ ಏರಬಹುದಿತ್ತು. ಆದ್ರೆ ಅದ್ಯಾವುದನ್ನ ಲೆಕ್ಕಿಸದ ಬೆನ್ ಸ್ಟೋಕ್ಸ್‌ ತನ್ನಿಂದ 100 ಪರ್ಸೆಂಟ್​​​ ಸಾಮರ್ಥ್ಯ ತೋರಲು ಆಗಲಿಲ್ಲ ಎಂದು ಏಕದಿನ ಕ್ರಿಕೆಟ್​​​ಗೆ ನಿವೃತ್ತಿ ಪಡೆದಿದ್ದಾರೆ. ನನ್ನ ಬದಲಿಗೆ ಬೇರೆ ಪ್ಲೇಯರ್​​ಗೆ ಚಾನ್ಸ್ ಸಿಗಲಿದೆ ಎಂದಿದ್ದಾರೆ. ಆ ಮೂಲಕ ಬೆನ್ ಸ್ಟೋಕ್ಸ್​​​​ ಮಾದರಿ ನಡೆ ಅನುಸರಿಸಿದ್ದಾರೆ. ಸ್ಟಾರ್​​ಗಿರಿಗೆ ಜೋತು ಬಿದ್ದಿರೋ ಟೀಂ​ ಇಂಡಿಯಾದ ಕೆಲ ಆಟಗಾರರಿಗೆ ಇದು ಪಾಠವಾಗಬೇಕಿದೆ. 

ಕಿಂಗ್​ ಕೊಹ್ಲಿ 3 ವರ್ಷದಿಂದ ಕಳಪೆ ಆಟ : 

ನಿಜವಲ್ವಾ? ಬೆನ್​ ಸ್ಟೋಕ್ಸ್​​​ ಬರೀ ಒಂದು ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗ್ಲಿಲ್ಲ ಅನ್ನೋ ಒಂದೇ ಕಾರಣಕ್ಕೆ ಒನ್ಡೇ ಕ್ರಿಕೆಟ್​​​ಗೆ ಗುಡ್​​ಬೈ ಹೇಳಿ ಬಿಟ್ರು. ಇಂತಹದ್ದೇ ನಿರ್ಧಾರವನ್ನ ಟೀಂ​ ಇಂಡಿಯಾದ ವಿರಾಟ್​​ ಕೊಹ್ಲಿ ಏಕೆ ಕೈಗೊಳ್ತಿಲ್ಲ ? ಕಳೆದ ಮೂರು ವರ್ಷಗಳಿಂದ ದಯನೀಯ ವೈಫಲ್ಯ ಕಾಣ್ತಿದ್ದಾರೆ. 2019ರ ಬಳಿಕ ಒಂದೂ ಶತಕವನ್ನೂ ಸಿಡಿಸಿಲ್ಲ. 

ಬಿಸಿಸಿಐ ವಿರಾಟ್ ಕೊಹ್ಲಿಯನ್ನು ಜಿಂಬಾಬ್ವೆ ವಿರುದ್ಧ ಕಣಕ್ಕಿಳಿಸಲು ಮುಂದಾಗುತ್ತಿರುವುದೇಕೆ..?

ವಿರಾಟ್ ಕೊಹ್ಲಿ ಇಷ್ಟೆಲ್ಲಾ ವರ್ಸ್ಟ್ ಪರ್ಫಾಮೆನ್ಸ್​ ನೀಡ್ತಿದ್ರೂ, ಸೆಲೆಕ್ಟರ್ಸ್​ ವಿರಾಟ್​​ರನ್ನ ತಂಡದಿಂದ ಹೊರಗಿಡ್ತಿಲ್ಲ. ಮಾಜಿ ಕ್ರಿಕೆಟರ್ಸ್​ ಕೊಹ್ಲಿ ವಿರುದ್ಧ ಗುಡುಗಿದ್ರೂ, ಪದೇ ಪದೇ ಚಾನ್ಸ್​​​​​​ ಕೊಡ್ತಿದ್ದಾರೆ. ಇನ್ನು ಇಷ್ಟೆಲ್ಲಾ ಕರಾಬ್ ಆಟವಾಡ್ತಿದ್ರೂ ಕೊಹ್ಲಿನೂ ನಿವೃತ್ತಿ ಬಗ್ಗೆ ಚೂರು ತುಟಿ ಬಿಚ್ತಿಲ್ಲ. ದಯನೀಯ ವೈಫಲ್ಯದ ಮಧ್ಯೆಯೂ ತಂಡದಲ್ಲಿ ಆಡುವ ಮೂಲಕ ಯುವ ಕ್ರಿಕೆಟಿಗರಿಗೆ ಅವಕಾಶ ಇಲ್ಲದಂತಾಗಿದೆ. ಇದರೊಂದಿಗೆ ವಿರಾಟ್ ಕೊಹ್ಲಿ ಯುವ ಕ್ರಿಕೆಟಿಗರ ಭವಿಷ್ಯವನ್ನ ಮುಗಿಸಲು ಹೊರಟ್ಟಿದ್ದಾರೆ. ಇನ್ನಾದ್ರು ಕೊಹ್ಲಿ ಆ ತಪ್ಪೆಸಗದೇ ಕೂಡಲೇ ನಿವೃತ್ತಿ ಕೊಟ್ಟು ಬೇರೆಯವರಿಗೆ ಆಡಲು ಅವಕಾಶ ಕೊಡಬೇಕಿದೆ.

ಕ್ರಿಕೆಟ್ ದೇವರಿಂದ ಅದೆಷ್ಟೊ ಕ್ರಿಕೆಟಿಗರ ಬದುಕು ಛಿದ್ರ..!:

ಇನ್ನು ಗಾಡ್​ ಆಫ್​​ ಕ್ರಿಕೆಟರ್​ ಅಂತ ಕರೆಸಿಕೊಳ್ಳೋ ಸಚಿನ್​ ತೆಂಡುಲ್ಕರ್​​​​​ ಕೂಡ ನಿವೃತ್ತಿ ವಿಚಾರದಲ್ಲಿ ಇನ್ನಿಲ್ಲದಂತೆ ಬೇಸರ ತರಿಸಿದ್ರು. ಬ್ಯಾಡ್ ಫಾರ್ಮ್​ ನಡುವೆಯೂ ಬೇಗನೆ ವಿದಾಯ ಘೋಷಿಸ್ಲಿಲ್ಲ. ಬಿಸಿಸಿಐ ಕೂಡ ಇವರನ್ನ ಹೊರಹಾಕುವ ಪ್ರಯತ್ನಕ್ಕೂ ಕೈ ಹಾಕ್ಲಿಲ್ಲ. ಸ್ಟಾರ್​ಗಿರಿ ಎನ್​​​ಕ್ಯಾಶ್​ ಪಡೆದು ಹಲವು ವರ್ಷ ಕ್ರಿಕೆಟ್​​ ಜಗತ್ತಿಗೆ ಭಾರವಾಗಿದ್ರು. ಆ ಮೂಲಕ ಅದೆಷ್ಟೋ ಪ್ರತಿಭಾವಂತರನ್ನ ಮುಗಿಸಿಬಿಟ್ರು. ಇನ್ನಾದ್ರು ಸ್ಟಾರ್​ಗಿರಿ, ಖ್ಯಾತಿ ಪಟ್ಟ ಬದಿಗೊತ್ತಿ ಟೀಂ​ ಇಂಡಿಯಾ ಕ್ರಿಕೆಟಿಗರು ಅಗತ್ಯ ಸಂದರ್ಭದಲ್ಲಿ ನಿವೃತ್ತಿ ಕೊಟ್ಟು ಹೊರನಡೆಯುವಂತಾದರೆ ಯುವ ಆಟಗಾರರಿಗೆ ಅವಕಾಶ ಸಿಗಲಿದೆ.

Follow Us:
Download App:
  • android
  • ios