* ಭಾರತ-ಜಿಂಬಾಬ್ವೆ ನಡುವಿನ ಏಕದಿನ ಸರಣಿಗೆ ಭರದಿಂದ ಸಿದ್ದತೆ* ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೂ ಮುನ್ನ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿರುವ ಭಾರತ* ಜಿಂಬಾಬ್ವೆ ಪ್ರವಾಸಕ್ಕೆ ವಿರಾಟ್ ಕೊಹ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ

ಬೆಂಗಳೂರು(ಜು.20): ಸದ್ಯ ಟೀಂ ಇಂಡಿಯಾಗೆ ಯಾವುದೇ ಸರಣಿಗಳಿಲ್ಲ. ಜುಲೈ 22 ರಿಂದ ವೆಸ್ಟ್ವಿಂಡೀಸ್​​​​ ವಿರುದ್ಧ ಏಕದಿನ ಸರಣಿಗೆ ಸಿದ್ಧತೆ ನಡೆಸುತ್ತಿದ್ದು, ಕೆರಿಬಿಯನ್ನರ ನಾಡಿಗೆ ಕಾಲಿಟ್ಟಿದೆ. ಈ ಪ್ರವಾಸದಿಂದ ಕಿಂಗ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಇದರೊಂದಿಗೆ ಒಂದೇ ಸರಣಿ ಆಡಿದ ಬಳಿಕ ಕೊಹ್ಲಿ ಮತ್ತೆ ರೆಸ್ಟ್​​ಗೆ ಮೊರೆ ಹೋಗಿದ್ದಾರೆ. ಹೀಗೆ ಪದೇ ಪದೇ ವಿಶ್ರಾಂತಿ ಪಡೆದುಕೊಳ್ಳುತ್ತಿರುವ ರನ್​ ಮಶೀನ್​ ಏಷ್ಯಾಕಪ್​​ ಮೊದಲು ಜಿಂಬಾಬ್ವೆ ಸರಣಿಯನ್ನಾಡಲಿದ್ದಾರೆ.

ಹೌದು, ವೆಸ್ಟ್​​ಇಂಡೀಸ್ ಸರಣಿ ಮುಗಿದ ಬೆನ್ನಲ್ಲೇ ಭಾರತ ತಂಡ ಜಿಂಬಾಬ್ವೆಗೆ ತೆರಳಿದೆ. ಭಾರತ ತಂಡ ಬಿ ಇಲ್ಲಿ ಕಣಕ್ಕಿಳಿಸಲು ಟೀಂ ಮ್ಯಾನೇಜ್​​ಮೆಂಟ್​​​​ ಚಿಂತಿಸುತ್ತಿದೆ. ಈ ತಂಡದಲ್ಲಿ ವಿರಾಟ್ ಕೊಹ್ಲಿಯನ್ನ ಆಡಿಸಲು ಸೆಲೆಕ್ಟರ್ಸ್​ ಮುಂದಾಗಿದ್ದಾರೆ. ಆಗಸ್ಟ್​​ 18 ರಿಂದ ಸರಣಿ ಆರಂಭಗೊಳ್ಳಲಿದ್ದು, 3 ಏಕದಿನ ಪಂದ್ಯಗಳು ನಡೆಯಲಿವೆ.

ವಿರಾಟ್ ಕೊಹ್ಲಿ ಫಾರ್ಮ್​ ಕಂಡುಕೊಳ್ಳಲು ಬೆಸ್ಟ್ ಚಾನ್ಸ್: 

ಹೌದು, ವಿಂಡೀಸ್ ಸರಣಿಯಿಂದ ರೆಸ್ಟ್​​ ಪಡೆದಿದ್ದ ವಿರಾಟ್ ಕೊಹ್ಲಿ ನೇರವಾಗಿ ಏಷ್ಯಾಕಪ್​​ಗೆ ಧುಮುಕಬೇಕಿತ್ತು. ಆಗಸ್ಟ್​​​ 1 ರಿಂದ ಪ್ರಾಕ್ಟೀಸ್​ ಆರಂಭಿಸುವ ಪ್ಲಾನ್​ ಮಾಡಿದ್ರು. ಆದ್ರೆ ಈಗ ವಿರಾಟ್ ಕೊಹ್ಲಿಯನ್ನ ಜಿಂಬಾಬ್ವೆ ಸರಣಿಯಲ್ಲಿ ಆಡುವಂತೆ ಸೆಲೆಕ್ಟರ್ಸ್​ ಹೇಳಿದ್ದಾರೆ. ಯಾಕಂದ್ರೆ ವಿರಾಟ್ ಕೊಹ್ಲಿ ಸದ್ಯ ಬ್ಯಾಡ್​ ಫಾರ್ಮ್​ ಸುಳಿಗೆ ಸಿಲುಕಿದ್ದಾರೆ. ಮೂರು ಮಾದರಿಯಲ್ಲಿ ಇವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರ್ತಿಲ್ಲ. ಇದು ಬಿಸಿಸಿಐ ಕಣ್ಣು ಕೆಂಪಾಗಿಸಿದೆ. ಈ ಕಾರಣಕ್ಕಾಗಿ ಕೊಹ್ಲಿ ಫಾರ್ಮ್​ ಕಂಡುಕೊಳ್ಳಬೇಕಾದ ಅಗತ್ಯವಿದೆ. ಆ ದಿಸೆಯಲ್ಲಿ ಕೊಹ್ಲಿಗೆ ಜಿಂಬಾಬ್ವೆ ಟೂರ್​ ಅತಿ ಮಹತ್ವದ್ದೆನಿಸಿದೆ​​​​. ಇಲ್ಲಿ ಫಾರ್ಮ್​ಗೆ ಮರಳಿದ್ರೆ ಮುಂಬರುವ ಏಷ್ಯಾಕಪ್​ ಹಾಗೂ ಟಿ20 ವಿಶ್ವಕಪ್​​​ನಲ್ಲಿ ಸ್ಥಾನ ಭದ್ರವಾಗಲಿದೆ. ಹಾಗೇನಾದ್ರು ಇಲ್ಲಿ ವೈಪಲ್ಯ​ ಕಂಡ್ರೆ ವಿರಾಟ್ ಕೊಹ್ಲಿಯನ್ನ ಮಹತ್ವದ ಟೂರ್ನಿಗಳಿಂದ ಕೈಬಿಡಲು ಬಿಸಿಸಿಐ ಚಿಂತಿಸುತ್ತಿದೆ.

Ind vs WI ವೆಸ್ಟ್ ಇಂಡೀಸ್ ಸರಣಿಗೆ ಟೀಂ ಇಂಡಿಯಾ ಸಜ್ಜು..!

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ 2015ರಲ್ಲಿ ಕೊನೆಯ ಬಾರಿಗೆ ಜಿಂಬಾಬ್ವೆ ವಿರುದ್ದ ಕಣಕ್ಕಿಳಿದಿದ್ದರು. 2015ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಜಿಂಬಾಬ್ವೆ ವಿರುದ್ದ ಕಣಕ್ಕಿಳಿದಿದ್ದರು. ಸದ್ಯ ಡೆಲ್ಲಿ ಮೂಲದ 33 ವರ್ಷದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕಳೆದ 6 ಇನಿಂಗ್ಸ್‌ಗಳಿಂದ ಕೇವಲ 76 ರನ್‌ ಗಳಿಸಲಷ್ಟೇ ಶಕ್ತರಾಗಿದ್ದಾರೆ. ವಿರಾಟ್ ಕೊಹ್ಲಿ 2019ರಿಂದೀಚಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಸಿಡಿಸಲು ಪದೇ ಪದೇ ವಿಫಲರಾಗುತ್ತಲೇ ಬಂದಿದ್ದಾರೆ. ಇದೀಗ ಮುಂಬರುವ ಏಷ್ಯಾಕಪ್ ಹಾಗೂ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಜಿಂಬಾಬ್ವೆ ಪ್ರವಾಸಕ್ಕೆ ವಿರಾಟ್‌ ಕೊಹ್ಲಿಗೆ ತಂಡದಲ್ಲಿ ಸ್ಥಾನ ನೀಡುವ ಚಿಂತನೆ ಮಾಡುತ್ತಿದೆ ಬಿಸಿಸಿಐ ಆಯ್ಕೆ ಸಮಿತಿ.

ಈ ಕಾರಣಕ್ಕಾಗಿ ಜಿಂಬಾಬ್ವೆ ವಿರುದ್ಧ ಆಡಬೇಕೆಂದು ಖಡಕ್ ಆಗಿ ಸೂಚಿಸಿದೆ. ಸದ್ಯ ಕೊಹ್ಲಿಯ ಟಿ20 ವಿಶ್ವಕಪ್​ ಭವಿಷ್ಯ ಜಿಂಬಾಬ್ವೆ ಟೂರ್​​ನಲ್ಲಿ ಅಡಗಿದೆ. ಈ ಸವಾಲಿನ ಚಕ್ರವ್ಯೂವನ್ನ ಸೆಂಚುರಿ ಸ್ಪೆಶಲಿಸ್ಟ್​​​ ಭೇದಿಸ್ತಾರಾ ? ಇಲ್ಲ ಲಾಕ್ ಆಗ್ತಾರಾ ಅನ್ನೋದು ಇನ್ನು ಸ್ವಲ್ಪ ದಿನದಲ್ಲೇ ತಿಳಿಯಲಿದೆ.