Asianet Suvarna News Asianet Suvarna News

ಸಿಡ್ನಿಯಲ್ಲಿ ಬೆಲಿಂಡಾ ಪ್ರತಿಮೆ ಅನಾವರಣ; ಕ್ರೀಡಾಂಗಣದಲ್ಲಿ ಮಹಿಳಾ ಕ್ರಿಕೆಟರ್‌ ಪ್ರತಿಮೆ

ಆಸ್ಪ್ರೇಲಿಯಾದ ಮಾಜಿ ನಾಯಕಿ ಬೆಲಿಂಡಾ ಕ್ಲಾರ್ಕ್ರ ಕಂಚಿನ ಪ್ರತಿಮೆ ಅನಾವರಣ
ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ಕಂಚಿನ ಪ್ರತಿಮೆ
2 ಬಾರಿ ಏಕದಿನ ವಿಶ್ವಕಪ್‌ ಗೆದ್ದ ಆಸೀಸ್‌ ತಂಡದ ನಾಯಕಿ

Belinda Clark becomes first women cricketer to have a statue cast at Sydney Cricket Ground kvn
Author
First Published Jan 6, 2023, 10:55 AM IST

ಸಿಡ್ನಿ(ಜ.06): ಇದೇ ಮೊದಲ ಬಾರಿಗೆ ಕ್ರೀಡಾಂಗಣವೊಂದರಲ್ಲಿ ಮಹಿಳಾ ಕ್ರಿಕೆಟ್‌ ಆಟಗಾರ್ತಿಯೊಬ್ಬರ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಗುರುವಾರ ಆಸ್ಪ್ರೇಲಿಯಾದ ಮಾಜಿ ನಾಯಕಿ ಬೆಲಿಂಡಾ ಕ್ಲಾರ್ಕ್ರ ಕಂಚಿನ ಪ್ರತಿಮೆಯನ್ನು ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ಅನಾವರಣಗೊಳಿಸಲಾಯಿತು. 2 ಬಾರಿ ಏಕದಿನ ವಿಶ್ವಕಪ್‌ ಗೆದ್ದ ಆಸೀಸ್‌ ತಂಡದ ನಾಯಕಿಯಾಗಿದ್ದ ಕ್ಲಾರ್ಕ್ 2005ರಲ್ಲಿ ನಿವೃತ್ತಿಯಾಗಿದ್ದರು. ಅವರು ತಂಡದ ಪರ 15 ಟೆಸ್ಟ್‌, 118 ಏಕದಿನ ಪಂದ್ಯಗಳನ್ನಾಡಿದ್ದಾರೆ. 1997ರಲ್ಲಿ ಏಕದಿನದಲ್ಲಿ ಮೊದಲ ದ್ವಿಶತಕ ಬಾರಿಸಿದ ಕ್ರಿಕೆಟರ್‌ ಎನ್ನುವ ದಾಖಲೆ ಬರೆದಿದ್ದರು. ಡೆನ್ಮಾರ್ಕ್ ವಿರುದ್ಧ 155 ಎಸೆತದಲ್ಲಿ ಔಟಾಗದೆ 229 ರನ್‌ ಸಿಡಿಸಿದ್ದರು.

ಮಹಿಳಾ ಐಪಿಎಲ್‌ ತಂಡ ಖರೀದಿಗೆ ಭಾರೀ ಪೈಪೋಟಿ!

ನವದೆಹಲಿ: ಮಾರ್ಚ್‌ನಲ್ಲಿ ನಡೆಯಲಿರುವ ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್‌ನ ತಂಡಗಳ ಖರೀದಿಗೆ ಚೆನ್ನೈ, ಕೆಕೆಆರ್‌ ಸೇರಿ 5 ಫ್ರಾಂಚೈಸಿಗಳು ಆಸಕ್ತಿ ವಹಿಸಿದೆ ಎಂದು ತಿಳಿದುಬಂದಿದೆ. ಬಿಸಿಸಿಐ ಗುರುವಾರ ತಂಡಗಳ ಖರೀದಿಗೆ ಟೆಂಡರ್‌ ಆಹ್ವಾನಿಸಿದ್ದು, ಜನವರಿ 21ರ ವರೆಗೆ ಗಡುವು ನೀಡಿದೆ. ತಂಡ ಖರೀದಿಸಲು ಸಿದ್ಧತೆ ನಡೆಸುತ್ತಿರುವುದಾಗಿ ಚೆನ್ನೈ ಫ್ರಾಂಚೈಸಿ ಈಗಾಗಲೇ ಖಚಿತಪಡಿಸಿದ್ದು, ರಾಜಸ್ಥಾನ, ಕೆಕೆಆರ್‌ ಹಾಗೂ ಪಂಜಾಬ್‌ ಫ್ರಾಂಚೈಸಿಗಳು ಕೂಡಾ ತಂಡ ಖರೀದಿಗೆ ಬಿಡ್‌ ಸಲ್ಲಿಸುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.

ಸ್ಮಿತ್‌, ಖವಾಜ ಶತಕ: ಆಸೀಸ್‌ ಬೃಹತ್‌ ಮೊತ್ತ

ಸಿಡ್ನಿ: ಸ್ಟೀವ್‌ ಸ್ಮಿತ್‌ ಹಾಗೂ ಉಸ್ಮಾನ್‌ ಖವಾಜ ಭರ್ಜರಿ ಶತಕಗಳ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಆಸ್ಪ್ರೇಲಿಯಾ ಬೃಹತ್‌ ಮೊತ್ತ ಗಳಿಸಿದ್ದು, 2ನೇ ದಿನದಂತ್ಯಕ್ಕೆ 4 ವಿಕೆಟ್‌ಗೆ 475 ರನ್‌ ಕಲೆ ಹಾಕಿದೆ. ಸ್ಮಿತ್‌ 104 ರನ್‌ ಸಿಡಿಸಿದರೆ, ಟ್ರ್ಯಾವಿಸ್‌ ಹೆಡ್‌ 70(59 ಎಸೆತ) ರನ್‌ ಗಳಿಸಿ ಔಟಾದರು. ಖವಾಜ 195 ರನ್‌ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

Ranji Trophy ಛತ್ತೀಸ್‌ಗಢ ಎದುರು ಜಯದ ನಿರೀಕ್ಷೆಯಲ್ಲಿ ಕರ್ನಾಟಕ

ಸ್ಮಿತ್‌ 30ನೇ ಶತಕ: ಟೆಸ್ಟ್‌ನಲ್ಲಿ 30ನೇ ಶತಕ ಪೂರೈಸಿದ ಸ್ಮಿತ್‌, ದಿಗ್ಗಜ ಡಾನ್‌ ಬ್ರಾಡ್ಮನ್‌(29 ಶತಕ) ದಾಖಲೆ ಮುರಿದರು. ಗರಿಷ್ಠ ಶತಕ ಗಳಿದ ಆಸೀಸ್‌ ಬ್ಯಾಟರ್‌ಗಳ ಪಟ್ಟಿಯಲ್ಲಿ ಹೇಡನ್‌(30 ಶತಕ) ಜತೆ ಜಂಟಿ 3ನೇ ಸ್ಥಾನ ಹಂಚಿಕೊಂಡರು. ಪಾಂಟಿಂಗ್‌ 41, ಸ್ಟೀವ್‌ ವಾ 32 ಶತಕಗಳೊಂದಿಗೆ ಮೊದಲೆರಡು ಸ್ಥಾನದಲ್ಲಿದ್ದಾರೆ.

ಕಿವೀಸ್‌ ಟಿ20 ಸರಣಿಗೂ ಕೊಹ್ಲಿ, ರೋಹಿತ್‌ ಇಲ್ಲ?

ನವದೆಹಲಿ: ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿಯನ್ನು ಜನವರಿ 27ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್‌ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೂ ಆಯ್ಕೆ ಮಾಡದಿರಲು ಬಿಸಿಸಿಐ ನಿರ್ಧರಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೆ.ಎಲ್‌.ರಾಹುಲ್‌, ಭುವನೇಶ್ವರ್‌, ಮೊಹಮದ್‌ ಶಮಿ, ಆರ್‌.ಅಶ್ವಿನ್‌ರನ್ನು ಕೂಡಾ ಸರಣಿಯಿಂದ ಹೊರಗಿಡಲಿದ್ದು, ಯುವ ಆಟಗಾರರಿಗೆ ಬಿಸಿಸಿಐ ಮಣೆ ಹಾಕಲಿದೆ ಎಂದು ಗೊತ್ತಾಗಿದೆ. ಸದ್ಯ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಆಡುತ್ತಿರುವ ಬಹುತೇಕರು ಕಿವೀಸ್‌ ಸರಣಿಗೂ ಆಯ್ಕೆಯಾಗಲಿದ್ದು, ಹಾರ್ದಿಕ್‌ ಪಾಂಡ್ಯ ನಾಯಕರಾಗಿ ಮುಂದುವರಿಯುವ ನಿರೀಕ್ಷೆಯಿದೆ.

Follow Us:
Download App:
  • android
  • ios