ವರದಿಗಳ ಪ್ರಕಾರ, ಈ ಬಾರಿ ಐಪಿಎಲ್‌ನ ಎಲ್ಲಾ 13 ಆತಿಥ್ಯ ನಗರಗಳಲ್ಲಿ ಉದ್ಘಾಟನಾ ಸಮಾರಂಭಗಳು ನಡೆಯಲಿವೆ. ಮಾರ್ಚ್ 22 ರಂದು ಕೋಲ್ಕತ್ತಾದಲ್ಲಿ ಪಂದ್ಯಾವಳಿ ಪ್ರಾರಂಭವಾಗಲಿದ್ದು, ಬೆಂಗಳೂರಿನ ಮೊದಲ ಪಂದ್ಯ ಏಪ್ರಿಲ್ 2 ರಂದು ನಡೆಯಲಿದೆ. ರಾಮ ನವಮಿಯ ಕಾರಣದಿಂದಾಗಿ ಏಪ್ರಿಲ್ 6 ರಂದು ನಡೆಯಬೇಕಿದ್ದ ಕೆಕೆಆರ್ ಮತ್ತು ಲಖನೌ ನಡುವಿನ ಪಂದ್ಯದ ದಿನಾಂಕ ಬದಲಾಗುವ ಸಾಧ್ಯತೆಯಿದೆ. ಫೈನಲ್ ಪಂದ್ಯವು ಮೇ 25 ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ.
ನವದೆಹಲಿ: ಈ ಬಾರಿ ಐಪಿಎಲ್‌ಗೆ ಆತಿಥ್ಯ ವಹಿಸಲಿರುವ ಬೆಂಗಳೂರು ಸೇರಿದಂತೆ ಎಲ್ಲಾ 13 ನಗರಗಳಲ್ಲೂ ಉದ್ಘಾಟನಾ ಸಮಾರಂಭ ನಡೆಸಲು ಬಿಸಿಸಿಐ ನಿರ್ಧರಿಸಿದೆ ಎಂದು ವರದಿಯಾಗಿದೆ. ಸಾಮಾನ್ಯವಾಗಿ ಟೂರ್ನಿಯ ಮೊದಲ ಪಂದ್ಯ ನಡೆಯಲಿರುವ ಕ್ರೀಡಾಂಗಣದಲ್ಲಿ ಸಮಾರಂಭ ಇರುತ್ತದೆ.
ಆದರೆ ಈ ಬಾರಿ ಎಲ್ಲಾ ಕ್ರೀಡಾಂಗಣಗಳಲ್ಲೂ ಅಲ್ಲಿನ ಮೊದಲ ಪಂದ್ಯಕ್ಕೂ ಮುನ್ನ ಸಮಾರಂಭ ನಡೆಸಲು ಬಿಸಿಸಿಐ ಉದ್ದೇಶಿಸಿದೆ. ಸಂಗೀತ, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಗಳು ನಡೆಯಲಿವೆ ಎಂದು ಹೇಳಲಾಗುತ್ತಿದೆ. ಟೂರ್ನಿ ಮಾ.22ಕ್ಕೆ ಕೋಲ್ಕತಾದಲ್ಲಿ ಆರಂಭಗೊಳ್ಳಲಿದೆ. ಬೆಂಗಳೂರಿನ ಮೊದಲ ಪಂದ್ಯ ಏ.2ರಂದು ನಡೆಯಲಿದೆ.
ಏಪ್ರಿಲ್ 6ರ ಪಂದ್ಯದ ದಿನಾಂಕ ಬದಲು?
ಏಪ್ರಿಲ್ 6ರಂದು ಕೋಲ್ಕತಾದಲ್ಲಿ ನಡೆಯಲಿರುವ ಕೆಕೆಆರ್ ಹಾಗೂ ಲಖನೌ ಪಂದ್ಯದ ದಿನಾಂಕ ಬದಲಾಗುವ ಸಾಧ್ಯತೆಯಿದೆ. ಏ.6ರಂದು ರಾಮ ನವಮಿ ಇದೆ. ಹೀಗಾಗಿ ಪಂದ್ಯಕ್ಕೆ ಭದ್ರತಾ ಸಮಸ್ಯೆ ಎದುರಾಗಲಿದೆ. ಇದೇ ಕಾರಣಕ್ಕೆ ಪಂದ್ಯದ ದಿನಾಂಕ ಬದಲಾಗಬಹುದು ಎಂದು ವರದಿಯಾಗಿದೆ.
ಬಹುನಿರೀಕ್ಷಿತ 18ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ ವೇಳಾಪಟ್ಟಿ ಪ್ರಕಟಗೊಂಡಿದೆ. ಮಾ.22ರಂದು ಟೂರ್ನಿಗೆ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡ ಆರ್‌ಸಿಬಿ ವಿರುದ್ಧ ಸೆಣಸಾಡಲಿದೆ.
ಇದನ್ನೂ ಓದಿ ಮೈದಾನದಲ್ಲೇ ಕುಸಿದು ಪಾಕ್ ಮೂಲದ ಆಸೀಸ್ ಕ್ರಿಕೆಟಿಗ ಸಾವು!
ಈ ಬಾರಿ 10 ತಂಡಗಳು ಪಾಲ್ಗೊಳ್ಳಲಿದ್ದು, 65 ದಿನಗಳ ಕಾಲ ಒಟ್ಟು 74 ಪಂದ್ಯಗಳು ನಡೆಯಲಿವೆ. ಮೇ 25ರಂದು ಫೈನಲ್ ಪಂದ್ಯ ನಿಗದಿಯಾಗಿದೆ. ಉದ್ಘಾಟನಾ ಪಂದ್ಯ ಹಾಗೂ ಫೈನಲ್‌ಗೆ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಈ ಬಾರಿ ಟೂರ್ನಿಯಲ್ಲಿ ಒಟ್ಟು 12 ದಿನ ಡಬಲ್ ಹೆಡರ್(ದಿನಕ್ಕೆ 2 ಪಂದ್ಯ) ಇರಲಿದೆ. ದಿನದ ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ, 2ನೇ ಪಂದ್ಯ ಸಂಜೆ 7.30ಕ್ಕೆ ಆರಂಭಗೊಳ್ಳಲಿವೆ.
ಇದನ್ನೂ ಓದಿ: ಕೋಣೆಯಲ್ಲಿ ಒಂಟಿಯಾಗಿ ಕೂತು ಅಳಬೇಕಾ? ವಿರಾಟ್ ಕೊಹ್ಲಿ ಹೀಗಂದಿದ್ದೇಕೆ?
ಅರ್‌ಸಿಬಿ ಪಂದ್ಯಗಳ ವೇಳಾಪಟ್ಟಿ
ಎದುರಾಳಿ ದಿನಾಂಕ ಸ್ಥಳ ಸಮಯ
ಕೆಕೆಆರ್ ಮಾ.22 ಕೋಲ್ಕತಾ ಸಂಜೆ 7.30
ಚೆನ್ನೈ ಮಾ.28 ಚೆನ್ನೈ ಸಂಜೆ 7.30
ಗುಜರಾತ್ ಏ.2 ಬೆಂಗಳೂರು ಸಂಜೆ 7.30
ಮುಂಬೈ ಏ.7 ಮುಂಬೈ ಸಂಜೆ 7.30
ಡೆಲ್ಲಿ ಏ.10 ಬೆಂಗಳೂರು ಸಂಜೆ 7.30
ರಾಜಸ್ಥಾನ ಏ.13 ಜೈಪುರ ಮಧ್ಯಾಹ್ನ 3.30
ಪಂಜಾಬ್ ಏ.18 ಬೆಂಗಳೂರು ಸಂಜೆ 7.30
ಪಂಜಾಬ್ ಏ.20 ಚಂಡೀಗಢ ಮಧ್ಯಾಹ್ನ 3.30
ರಾಜಸ್ಥಾನ ಏ.24 ಬೆಂಗಳೂರು ಸಂಜೆ 7.30
ಡೆಲ್ಲಿ ಏ.27 ನವದೆಹಲಿ ಸಂಜೆ 7.30
ಚೆನ್ನೈ ಮೇ 3 ಬೆಂಗಳೂರು ಸಂಜೆ 7.30
ಲಖನೌ ಮೇ 9 ಲಖನೌ ಸಂಜೆ 7.30
ಸನ್‌ರೈಸರ್ಸ್ ಮೇ 9 ಬೆಂಗಳೂರು ಸಂಜೆ 7.30
ಕೆಕೆಆರ್ ಮೇ 17 ಬೆಂಗಳೂರು ಸಂಜೆ 7.30
ಕೋಲ್ಕತಾ, ಹೈದ್ರಾಬಾದಲ್ಲಿ ನಾಕೌಟ್, ಫೈನಲ್ ಪಂದ್ಯ
ಕ್ವಾಲಿಫೈರ್-1 ಹಾಗೂ ಎಲಿಮಿನೇಟರ್ ಪಂದ್ಯ ಕ್ರಮವಾಗಿ ಮೇ 20 ಹಾಗೂ 21ರಂದು ಹೈದರಾಬಾದ್‌ನಲ್ಲಿ ನಡೆಯಲಿವೆ. ಬಳಿಕ ಕೋಲ್ಕತಾದಲ್ಲಿ ಕ್ವಾಲಿಫೈರ್-2 ಮೇ 23ಕ್ಕೆ, ಫೈನಲ್ ಪಂದ್ಯ ಮೇ 25ಕ್ಕೆ ನಡೆಯಲಿದೆ.
