ಟೀಂ ಇಂಡಿಯಾ ಸ್ಟಾರ್ ಆಟಗಾರರಿಗೆ ಬಿಸಿಸಿಐ ವಾರ್ನಿಂಗ್..!
ಗಾಯಾಳುವಾಗಿರುವ ಆಟಗಾರರು, ಫಿಟ್ನೆಸ್ ಸಾಧಿಸಲು ಅಭ್ಯಾಸ ಮಾಡೋದು ಕಾಮನ್. ಅವರು ರಣಜಿ ಪಂದ್ಯವಾಡದೆ ಐಪಿಎಲ್ ವೇಳೆಗೆ ಫಿಟ್ನೆಸ್ ಸಾಧಿಸಲು ತಯಾರಿ ನಡೆಸುತ್ತಿದ್ದಾರೆ. ಆದ್ರೆ ಗಾಯಾಳುವಾಗದೆ ಕಳಪೆ ಫಾರ್ಮ್‌ನಿಂದಾಗಿ ಟೀಂ ಇಂಡಿಯಾದಿಂದ ಡ್ರಾಪ್ ಆಗಿರೋ ಆಟಗಾರರು ಸಹ ರಣಜಿ ಪಂದ್ಯಗಳನ್ನಾಡ್ತಿಲ್ಲ. ಇದು ಬಿಸಿಸಿಐ ಪಿತ್ತ ನೆತ್ತಿಗೇರಿಸಿದೆ.
ಮುಂಬೈ(ಫೆ.13): ಯಾಕೋ ಕೆಲ ಭಾರತೀಯ ಕ್ರಿಕೆಟರ್ಸ್ ಯಾರ ಮಾತನ್ನೂ ಕೇಳ್ತಿಲ್ಲ. ಕೋಚ್-ಕ್ಯಾಪ್ಟನ್ ಮಾತಿಗೆ ಕ್ಯಾರೆ ಎನ್ನುತ್ತಿಲ್ಲ. ಈಗ ಅಂತವರಿಗೆ ಬಿಸಿಸಿಐ ಖಡಕ್ ವಾರ್ನಿಂಗ್ ನೀಡಿದೆ. ಹೀಗೆ ಇರಬೇಕು ಎಂದು ಆದೇಶಿಸಿದೆ. ಇದಕ್ಕಿದಂತೆ ಬಿಸಿಸಿಐಗೆ ಏನಾಯ್ತು ಅಂತ ಅಂದುಕೊಳ್ಳಬೇಡಿ. ಒಬ್ಬ ಮಾಡಿದ ತಪ್ಪಿಗೆ ಉಳಿದವರಿಗೆಲ್ಲಾ ಶಿಕ್ಷೆ ಅನ್ನುವಂತಾಗಿದೆ.
ಐಪಿಎಲ್‌ಗೂ ಮುನ್ನ ರಣಜಿ ಆಡುವಂತೆ ಅದೇಶ..!
ಐಪಿಎಲ್ ಬಂದ್ಮೇಲೆ ಬಿಸಿಸಿಐ ಯಾಕೋ ಆಟಗಾರರ ಮೇಲಿನ ಹಿಡಿತ ಕಳೆದುಕೊಂಡಂತೆ ಕಾಣ್ತಿದೆ. ಟೀಂ ಇಂಡಿಯಾಗೆ ಸೆಲೆಕ್ಟ್ ಮಾಡದಿದ್ದರೆ ಏನಂತೆ, ಐಪಿಎಲ್ ಆಡಿಕೊಂಡು ಇರ್ತೀವಿ. ನಿಮಗೆ ಅಗತ್ಯವಿದ್ದರೆ ತಂಡಕ್ಕೆ ಸೆಲೆಕ್ಟ್ ಮಾಡಿ ಅನ್ನೋ ದಾಟಿಯಲ್ಲಿದ್ದಾರೆ ಕೆಲ ಸ್ಟಾರ್ ಪ್ಲೇಯರ್ಸ್. ಇಂತಹ ಕೆಲ ಆಟಗಾರರಿಗೆ ಬಿಸಿಸಿಐ ವಾರ್ನಿಂಗ್ ನೀಡಿದೆ. ಹಾಗೆ ಚಾಟಿ ಏಟು ಬೀಸಿದೆ.
ಈ ಆಟಗಾರನ ಜತೆ ಫೋಟೋ ಶೇರ್ ಮಾಡಿದ ಸಾನಿಯಾ ಮಿರ್ಜಾ..! ಆ ದಿನಗಳನ್ನು ಮೆಲುಕುಹಾಕಿದ ಮೂಗುತಿ ಸುಂದರಿ
ಗಾಯಾಳುವಾಗಿರುವ ಆಟಗಾರರು, ಫಿಟ್ನೆಸ್ ಸಾಧಿಸಲು ಅಭ್ಯಾಸ ಮಾಡೋದು ಕಾಮನ್. ಅವರು ರಣಜಿ ಪಂದ್ಯವಾಡದೆ ಐಪಿಎಲ್ ವೇಳೆಗೆ ಫಿಟ್ನೆಸ್ ಸಾಧಿಸಲು ತಯಾರಿ ನಡೆಸುತ್ತಿದ್ದಾರೆ. ಆದ್ರೆ ಗಾಯಾಳುವಾಗದೆ ಕಳಪೆ ಫಾರ್ಮ್‌ನಿಂದಾಗಿ ಟೀಂ ಇಂಡಿಯಾದಿಂದ ಡ್ರಾಪ್ ಆಗಿರೋ ಆಟಗಾರರು ಸಹ ರಣಜಿ ಪಂದ್ಯಗಳನ್ನಾಡ್ತಿಲ್ಲ. ಇದು ಬಿಸಿಸಿಐ ಪಿತ್ತ ನೆತ್ತಿಗೇರಿಸಿದೆ. ಅದಕ್ಕಾಗಿ ಐಪಿಎಲ್‌ಗೆ ಸಿದ್ದತೆ ನಡೆಸುವ ಮುನ್ನ ರಣಜಿ ಟ್ರೋಫಿ ಪಂದ್ಯಗಳನ್ನಾಡಲು ಆದ್ಯತೆ ನೀಡಬೇಕು ಎಂದು ಬಿಸಿಸಿಐ ಖಡಕ್ ವಾರ್ನಿಂಗ್ ಮಾಡಿದೆ.
ಭಾರತ ತಂಡದ ವಿಕೆಟ್ ಕೀಪರ್ ಕಮ್ ಬ್ಯಾಟರ್ ಇಶಾನ್ ಕಿಶನ್ ಸೇರಿದಂತೆ ಹಲವು ಆಟಗಾರರು ರಣಜಿ ಟ್ರೋಫಿಯಲ್ಲಿ ಭಾಗವಹಿಸುವ ಬದಲು, ಐಪಿಎಲ್‌ಗಾಗಿ ತರಬೇತಿ ಪಡೆಯುತ್ತಿದ್ದಾರೆ ಎಂಬ ವರದಿಗಳ ನಂತರ ಬಿಸಿಸಿಐ ಎಚ್ಚೆತ್ತುಕೊಂಡಿದೆ. ಇಶಾನ್ ವಿಶ್ರಾಂತಿ ನೆಪ ಹೇಳಿ ಟೀಂ ಇಂಡಿಯಾದಿಂದ ಹೊರಗುಳಿದಿದ್ದರು. ಈಗ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿಲ್ಲ. ಆದ್ರೀಗ ರಣಜಿ ಆಡೋ ಬದಲು ಐಪಿಎಲ್‌ಗೆ ಸಿದ್ದತೆ ಮಾಡಿಕೊಳ್ತಿದ್ದಾರೆ. ಇಶಾನ್ ಕಿಶನ್ ಜೊತೆ ಕೃನಾಲ್ ಪಾಂಡ್ಯ ಸಹ ಫಿಟ್ ಆಗಿದ್ದರೂ ರಣಜಿ ಆಡದೆ ಐಪಿಎಲ್‌ಗೆ ತಯಾರಿ ಮಾಡಿಕೊಳ್ತಿದ್ದಾರೆ.
ಮುಂದಿನ ದಿನಗಳಲ್ಲಿ ಎಲ್ಲಾ ಆಟಗಾರರು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗದೆ ಇದ್ದಾಗ ರಣಜಿ ಟ್ರೋಫಿಯಲ್ಲಿ ತಮ್ಮ ರಾಜ್ಯ ತಂಡಕ್ಕಾಗಿ ಆಡಲು ಬಿಸಿಸಿಐ ಮೂಲಕ ತಿಳಿಸಲಾಗುವುದು. ಎನ್‌ಸಿಎಯಲ್ಲಿ ಅನರ್ಹರು ಮತ್ತು ಚೇತರಿಸಿಕೊಳ್ಳುವವರಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಅಲ್ಲದೆ, ಈ ನಿರ್ದೇಶನವು ಹಲವು ಭಾರತ ತಂಡ ಸ್ಟಾರ್ ಆಟಗಾರರಿಗೆ ಅನ್ವಯಿಸುತ್ತದೆ ಮತ್ತು ಯಾವುದೇ ಆಟಗಾರನು ದೇಶೀಯ ಸರ್ಕ್ಯೂಟ್‌ಗೆ ಕೊಡುಗೆ ನೀಡುವುದರಿಂದ ವಿನಾಯಿತಿ ಹೊಂದಿಲ್ಲ ಎಂದು ಒತ್ತಿ ಹೇಳಲಾಗುವುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸೆಂಚುರಿ ಹೊಡೆದ್ರೂ ಔಟಾಗಿಲ್ಲ: ಯಾರ್ಯಾರು ಅತಿಹೆಚ್ಚು ಅಜೇಯ ಶತಕ ಬಾರಿಸಿದ್ದಾರೆ ಗೊತ್ತಾ..?
ಇಶಾನ್ ಕಿಶನ್‌ಗೆ ಡೊಮೆಸ್ಟಿಕ್ ಕ್ರಿಕೆಟ್ ಆಡಿ ಎಂದು ಕೋಚ್ ದ್ರಾವಿಡ್ ಹೇಳಿದ್ರೂ ಅವರು ಯಾರ ಮಾತನ್ನೂ ಲೆಕ್ಕಿಸದೆ ಬರೋಡಾದಲ್ಲಿ ಪಾಂಡ್ಯ ಬ್ರದರ್ಸ್ ಜೊತೆ ಐಪಿಎಲ್‌ಗೆ ಸಿದ್ದತೆ ನಡೆಸ್ತಿದ್ದಾರೆ. ಈ ಬಗ್ಗೆ ಮಾದ್ಯಮಗಳಲ್ಲಿ ಸುದ್ದಿ ಬಂದ ಮೇಲೆ ಬಿಸಿಸಿಐ ಎಚ್ಚೆತ್ತುಕೊಂಡು ವಾರ್ನಿಂಗ್ ನೀಡಲು ಮುಂದಾಗಿದೆ. ಬಿಸಿಸಿಐನಿಂದ ಆಟಗಾರರಿಗೆ ನೋಟಿಸ್ ಹೋದ್ಮೇಲೆ ಆಟಗಾರರು ಯಾವ ರೀತಿ ಉತ್ತರ ನೀಡ್ತಾರೆ ಅನ್ನೋದು ಸದ್ಯಕ್ಕಿರುವ ಕುತೂಹಲ.
- ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್