ವೆಸ್ಟ್‌ ಇಂಡೀಸ್ ಎದುರು ಏಕದಿನ ಸರಣಿಯನ್ನಾಡಲು ಕೆರಿಬಿಯನ್‌ ನಾಡಿಗೆ ಬಂದಿಳಿದ ಭಾರತಶಿಖರ್ ಧವನ್ ನೇತೃತ್ವದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿರುವ ಟೀಂ ಇಂಡಿಯಾ3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಜುಲೈ 22ರಿಂದ ಆರಂಭ

ನವದೆಹಲಿ(ಜು.20): ಇತ್ತೀಚೆಗಷ್ಟೇ ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ ಪ್ರವಾಸ ಮುಗಿಸಿದ ಟೀಂ ಇಂಡಿಯಾ ಆಟಗಾರರು ಮತ್ತೊಂದು ಸರಣಿಗೆ ಸಜ್ಜಾಗುತ್ತಿದ್ದಾರೆ. ವೆಸ್ಟ್‌ ಇಂಡೀಸ್‌ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ಜುಲೈ 22ರಿಂದ ಆರಂಭವಾಗಲಿದ್ದು, ಬಳಿಕ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ತಂಡದ ಖಾಯಂ ನಾಯಕ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಜಸ್‌ಪ್ರೀತ್‌ ಬುಮ್ರಾ, ಮೊಹಮದ್‌ ಶಮಿ, ರಿಷಭ್‌ ಪಂತ್‌ ಸೇರಿದಂತೆ ಪ್ರಮುಖರಿಗೆ ಏಕದಿನ ಸರಣಿಗೆ ವಿಶ್ರಾಂತಿ ನೀಡಲಾಗಿದ್ದು, ಶಿಖರ್‌ ಧವನ್‌ ನಾಯಕತ್ವ ವಹಿಸಲಿದ್ದಾರೆ. ಹಿರಿಯರ ಅನುಪಸ್ಥಿತಿಯಲ್ಲಿ ಐರ್ಲೆಂಡ್‌ ಟಿ20 ಪ್ರವಾಸ ಕೈಗೊಂಡಿದ್ದ ಕಿರಿಯ ಆಟಗಾರರಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಮತ್ತೊಂದು ಅವಕಾಶ ಸಿಗಲಿದೆ. ಟಿ20 ಸರಣಿಗೆ ರೋಹಿತ್‌ ವಾಪಸ್‌ ಆಗಲಿದ್ದು, ಪಂತ್‌, ಹಾರ್ದಿಕ್‌ ಕೂಡಾ ತಂಡ ಸೇರಿಕೊಳ್ಳಲಿದ್ದಾರೆ.

ವಿಂಡೀಸ್‌ಗೆ ಬಂದಿಳಿದ ಭಾರತ ಕ್ರಿಕೆಟ್ ತಂಡ

ಶಿಖರ್‌ ಧವನ್‌ ಸಾರಥ್ಯದ ತಂಡ ಈಗಾಗಲೇ ವೆಸ್ಟ್‌ಇಂಡೀಸ್‌ಗೆ ತೆರಳಿದ್ದು, ಕೋಚ್‌ ರಾಹುಲ್‌ ದ್ರಾವಿಡ್‌ ಕೂಡಾ ತಂಡದ ಜೊತೆ ಪ್ರಯಾಣಿಸಿದ್ದಾರೆ. ಕೆಲ ಆಟಗಾರರು ವಿಂಡೀಸ್‌ಗೆ ತೆರಳುತ್ತಿರುವ ಫೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸರಣಿಯ ಮೊದಲ ಪಂದ್ಯ ಜು.22ಕ್ಕೆ ನಡೆಯಲಿದ್ದು, ಇನ್ನುಳಿದ ಎರಡು ಪಂದ್ಯಗಳು ಜು.24 ಹಾಗೂ 27ಕ್ಕೆ ನಿಗದಿಯಾಗಿವೆ. ಎಲ್ಲಾ ಪಂದ್ಯಗಳೂ ಪೋರ್ಚ್‌ ಆಫ್‌ ಸ್ಪೇನ್‌ನ ಕ್ವೀನ್ಸ್‌ ಪಾರ್ಕ್ ಓವಲ್‌ ಕ್ರೀಡಾಂಗಣದಲ್ಲಿ ನಡೆಯಲಿವೆ. ಜುಲೈ 29ರಿಂದ ಆಗಸ್ಟ್‌ 7ರವರೆಗೆ 5 ಪಂದ್ಯಗಳ ಟಿ20 ಸರಣಿ ನಡೆಯಲಿವೆ.

Scroll to load tweet…

ಎನ್‌ಸಿಎನಲ್ಲಿ ಕೆ ಎಲ್ ರಾಹುಲ್‌ಗೆ ಜೂಲನ್‌ ಗೋಸ್ವಾಮಿ ಬೌಲಿಂಗ್‌

ಬೆಂಗಳೂರು: ವೆಸ್ಟ್‌ಇಂಡೀಸ್‌ ವಿರುದ್ಧದ ಸರಣಿಗೆ ಇಲ್ಲಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ನಲ್ಲಿ ಅಭ್ಯಾಸ ನಡೆಸುವ ವೇಳೆ ಭಾರತದ ತಾರಾ ಕ್ರಿಕೆಟಿಗ ಕೆ.ಎಲ್‌.ರಾಹುಲ್‌ಗೆ ನೆಟ್ಸ್‌ನಲ್ಲಿ ಭಾರತ ಮಹಿಳಾ ತಂಡದ ದಿಗ್ಗಜ ವೇಗಿ ಜೂಲನ್‌ ಗೋಸ್ವಾಮಿ ಬೌಲ್‌ ಮಾಡಿದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಇಬ್ಬರು ತಾರಾ ಕ್ರಿಕೆಟಿಗರು ಪರಸ್ಪರ ಗೌರವದೊಂದಿಗೆ ಒಟ್ಟಿಗೆ ಅಭ್ಯಾಸ ನಡೆಸಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಭಾರತ ಏಕದಿನ ಸರಣಿ: ವಿಂಡೀಸ್‌ ತಂಡಕ್ಕೆ ಜೇಸನ್‌ ಹೋಲ್ಡರ್‌

ಪೋರ್ಚ್‌ ಆಫ್‌ ಸ್ಪೇನ್‌: ಶುಕ್ರವಾರ(ಜುಲೈ 22) ರಿಂದ ಆರಂಭವಾಗಲಿರುವ ಭಾರತ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ 13 ಮಂದಿಯ ವೆಸ್ಟ್‌ಇಂಡೀಸ್‌ ತಂಡ ಪ್ರಕಟಿಸಲಾಗಿದ್ದು, ಆಲ್ರೌಂಡರ್‌ ಜೇಸನ್‌ ಹೋಲ್ಡರ್‌ ಮತ್ತೆ ತಂಡಕ್ಕೆ ವಾಪಸ್‌ ಆಗಿದ್ದಾರೆ. ನಿಕೋಲಸ್‌ ಪೂರನ್‌ ತಂಡವನ್ನು ಮುನ್ನಡೆಸಲಿದ್ದು, ಶಾಯ್ ಹೋಪ್‌ ಉಪನಾಯಕನಾಗಿ ಕಾರ‍್ಯನಿರ್ವಹಿಸಲಿದ್ದಾರೆ. 

Team India Squad ವೆಸ್ಟ್‌ ಇಂಡೀಸ್‌ ಎದುರಿನ ಟಿ20 ಸರಣಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ..!

ತಂಡ: ಪೂರನ್‌(ನಾಯಕ), ಶಾಯ್ ಹೋಪ್‌, ಶಾಮ್ರಾ ಬ್ರೂಕ್ಸ್‌, ಕೀಸಿ ಕಾರ್ಟಿ, ಜೇಸನ್ ಹೋಲ್ಡರ್‌, ಅಕೇಲ್‌ ಹೊಸೈನ್‌, ಅಲ್ಜಾರಿ ಜೋಸೆಫ್‌, ಬ್ರೆಂಡಾನ್‌ ಕಿಂಗ್‌, ಕೈಲ್‌ ಮೇಯ​ರ್ಸ್‌, ಗುಡಕೇಶ್‌ ಮೋಟಿ, ಕೀಮೊ ಪಾಲ್‌, ರೋವ್ಮನ್‌ ಪೋವೆಲ್‌, ಜೇಡನ್‌ ಸೀಲ್ಸ್‌.

ವೆಸ್ಟ್ ಇಂಡೀಸ್ ಎದುರಿನ ಏಕದಿನ ಸರಣಿಗೆ ಭಾರತ ತಂಡ: 

ಶಿಖರ್ ಧವನ್‌(ನಾಯಕ), ಇಶಾನ್‌ ಕಿಶನ್‌, ಋತುರಾಜ್ ಗಾಯಕ್ವಾಡ್‌, ಶುಭ್‌ಮನ್ ಗಿಲ್‌, ದೀಪಕ್‌ ಹೂಡಾ, ಸೂರ್ಯಕುಮಾರ್ ಯಾದವ್‌, ಶ್ರೇಯಸ್‌ ಅಯ್ಯರ್‌, ಸಂಜು ಸ್ಯಾಮ್ಸನ್‌, ರವೀಂದ್ರ ಜಡೇಜಾ, ಶಾರ್ದೂಲ್‌ ಠಾಕೂರ್‌, ಯುಜುವೇಂದ್ರ ಚಹಲ್‌, ಅಕ್ಷರ್ ಅಕ್ಷರ್‌, ಪ್ರಸಿದ್ಧ್ ಕೃಷ್ಣ, ಆವೇಶ್ ಖಾನ್‌, ಮೊಹಮ್ಮದ್ ಸಿರಾಜ್‌, ಅಶ್‌ರ್‍ದೀಪ್ ಸಿಂಗ್‌.

ವೆಸ್ಟ್ ಇಂಡೀಸ್ ಎದುರಿನ ಟಿ20 ಸರಣಿಗೆ ಭಾರತ ಕ್ರಿಕೆಟ್ ತಂಡ ಹೀಗಿದೆ

ರೋಹಿತ್ ಶರ್ಮಾ‌(ನಾಯಕ), ಇಶಾನ್ ಕಿಶನ್‌, ಕೆ.ಎಲ್‌.ರಾಹುಲ್‌*, ಸೂರ್ಯಕುಮಾರ್ ಯಾದವ್‌, ದೀಪಕ್‌ ಹೂಡಾ, ಶ್ರೇಯಸ್‌ ಅಯ್ಯರ್‌, ದಿನೇಶ್ ಕಾರ್ತಿಕ್‌, ರಿಷಭ್ ಪಂತ್‌, ಹಾರ್ದಿಕ್ ಪಾಂಡ್ಯ‌, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್‌, ರವಿಚಂದ್ರನ್ ಅಶ್ವಿನ್‌, ರವಿ ಬಿಷ್ಣೋಯಿ, ಕುಲ್ದೀಪ್ ಯಾದವ್‌*, ಭುವನೇಶ್ವರ್ ಕುಮಾರ್‌, ಆವೇಶ್ ಖಾನ್‌, ಹರ್ಷಲ್ ಪಟೇಲ್‌, ಅಶ್‌ರ್‍ದೀಪ್ ಸಿಂಗ್‌.