ಟೀಂ ಇಂಡಿಯಾ ಆಯ್ಕೆಯಲ್ಲಿ ಲಾಜಿಕ್ಕೂ ಇಲ್ಲ, ಮ್ಯಾಜಿಕ್ಕೂ ಇಲ್ಲ..! ಹಿಂಗಾದ್ರೆ ಕಪ್‌ ಗೆಲ್ಲುತ್ತಾ ಭಾರತ?

ಐರ್ಲೆಂಡ್ ಸಿರೀಸ್​ಗೆ ವೈಸ್ ಕ್ಯಾಪ್ಟನ್.. ಏಷ್ಯನ್ ಗೇಮ್ಸ್​​ಗೆ ಕ್ಯಾಪ್ಟನ್..!
ಆದರೆ ವಿಂಡೀಸ್ ಸರಣಿಯಲ್ಲಿ ಆಟಗಾರನಾಗಿಯೂ ಸ್ಥಾನವಿಲ್ಲ..!
ಯಾರಿಗೂ ಅರ್ಥವಾಗ್ತಿಲ್ಲ ಬಿಸಿಸಿಐ ಸೆಲೆಕ್ಷನ್ ಕಮಿಟಿ ಲಾಜಿಕ್

BCCI Selection Committee Blunder Asian Games Captain Ruturaj Gaikwad No place in Windies T20I Series kvn

ಬೆಂಗಳೂರು(ಆ.05):  ಇನ್ನು 10 ತಿಂಗಳಲ್ಲಿ ಎರಡು ವಿಶ್ವಕಪ್ ಟೂರ್ನಿಗಳು ನಡೆಯಲಿವೆ. ದಶಕದಿಂದ ಐಸಿಸಿ ಟ್ರೋಫಿ ಗೆಲ್ಲದ ಟೀಂ ಇಂಡಿಯಾ, ಆ ಲಿಸ್ಟ್ ಈ ಎರಡಲ್ಲಿ ಒಂದು ವರ್ಲ್ಡ್​ಕಪ್​ ಅನ್ನಾದ್ರೂ ಗೆಲ್ಲುತ್ತೆ ಅನ್ನೋ ನಿರೀಕ್ಷೆಗಳಿವೆ. ಆದ್ರೆ ಬಿಸಿಸಿಐ, ಅಲ್ಲ.. ಅಲ್ಲ.. ಸೆಲೆಕ್ಟರ್ಸ್ ಮಾಡ್ತಿರೋ ಮಿಸ್ಟೇಕ್​​ಗಳನ್ನ ನೋಡ್ತಿದ್ದರೆ, ಈ ಎರಡು ವಿಶ್ವಕಪ್​ಗಳನ್ನೂ ಭಾರತೀಯರು ಗೆಲ್ಲಲ್ಲ ಅನಿಸ್ತಿದೆ. ಟೀಂ ಇಂಡಿಯಾ ಆಯ್ಕೆಯಲ್ಲಿ ಲಾಜಿಕ್ಕೂ ಇಲ್ಲ. ಮ್ಯಾಜಿಕ್ಕೂ ಇಲ್ಲ. ಮನಸ್ಸಿಗೆ ಬಂದಂತೆ ಟೀಂ ಸೆಲೆಕ್ಟ್ ಮಾಡ್ತಿದ್ದಾರೆ.

ಅಕ್ಟೋಬರ್​-ನವೆಂಬರ್​ನಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಅದಕ್ಕೂ ಮುನ್ನ ಮನಸ್ಸಿಗೆ ಬಂದಂತೆ ಆಟಗಾರರನ್ನ ಆಯ್ಕೆ ಮಾಡಿ ಪ್ರಯೋಗದ ಮೇಲೆ ಪ್ರಯೋಗ ಮಾಡಲಾಯ್ತು. ಇದರ ಜೊತೆ ಟಿ20 ವಿಶ್ವಕಪ್​ಗೆ ಟೀಂ  ಇಂಡಿಯಾ ಈಗಿನಿಂದಲೇ ರೆಡಿಯಾಗ್ತಿದೆ. ವೆಸ್ಟ್ ಇಂಡೀಸ್​ನಲ್ಲಿ ಐದು, ಐರ್ಲೆಂಡ್​ನಲ್ಲಿ ಮೂರು, ಏಷ್ಯನ್ ಗೇಮ್ಸ್​ನಲ್ಲಿ ಮೂರು ಪಂದ್ಯ, ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ಟಿ20 ಸರಣಿ. ಹೀಗೆ ಸಾಲು ಸಾಲು ಟಿ20 ಸಿರೀಸ್ ಆಯೋಜಿಸಿರುವ ಬಿಸಿಸಿಐ, ಟಿ20 ವಿಶ್ವಕಪ್​ಗೆ ಸಿದ್ದತೆ ಮಾಡಿಕೊಳ್ತಿದೆ. ಜೊತೆಗೆ ಯಂಗ್ ಪ್ಲೇಯರ್​ಗಳನ್ನ ಟೀಮ್​ಗೆ ಸೆಲೆಕ್ಟ್​ ಮಾಡ್ತಿದೆ.

ಏಷ್ಯನ್ ಗೇಮ್ಸ್​​-ಐರ್ಲೆಂಡ್​ನಲ್ಲಿ ಕ್ಯಾಪ್ಟನ್​-ವೈಸ್ ಕ್ಯಾಪ್ಟನ್..!

ಇದೇ ನೋಡಿ ವಿಪರ್ಯಾಸ ಅಂದ್ರೆ. ಐರ್ಲೆಂಡ್ ಸರಣಿಗೆ ಭಾರತ ಟಿ20 ತಂಡದ ಉಪನಾಯಕ. ಏಷ್ಯನ್ ಗೇಮ್ಸ್​​ನಲ್ಲಿ ಭಾಗವಹಿಸುವ ಟೀಂ ಇಂಡಿಯಾಗೆ ಕಪ್ತಾನ. ಆದ್ರೂ ವೆಸ್ಟ್ ಇಂಡೀಸ್​ ಟಿ20 ಸರಣಿಗೆ ಆಯ್ಕೆಯಾಗಿಲ್ಲ ಋತುರಾಜ್ ಗಾಯಕ್ವಾಡ್. ಯಾಕೆ ಅನ್ನೋ ಪ್ರಶ್ನೆಗೆ ಬಿಸಿಸಿಐ ಸೆಲೆಕ್ಟರ್ಸ್ ಬಳಿ ಉತ್ತರವೇ ಇಲ್ಲ. ಭವಿಷ್ಯದಲ್ಲಿ ಭಾರತ ಟಿ20 ತಂಡದ ಆಟಗಾರ ಎಂದೇ ಬಿಂಬಿಸುತ್ತಿರುವ ಬಿಸಿಸಿಐ, ಈ ಎಡವಟ್ಟು ಯಾಕೆ ಮಾಡಿದೆ ಅನ್ನೋದೇ ಅರ್ಥವಾಗ್ತಲೇ ಇಲ್ಲ. ಕನಿಷ್ಟ ಪಕ್ಷ ರಿಸರ್ವ್​ ಬ್ಯಾಟರ್ ಲಿಸ್ಟ್​ನಲ್ಲಾದ್ರೂ ಸ್ಥಾನ ನೀಡಬೇಕಿತ್ತು. ಅಲ್ಲೂ ನೀಡಿಲ್ಲ.

ಪ್ರೀತಿ ಬಲೆಯಲ್ಲಿ National Crush ಸ್ಮೃತಿ ಮಂಧನಾ..! ಆ ಲಕ್ಕಿ ಹುಡುಗ ಯಾರು ಗೊತ್ತಾ?

ರೋಹಿತ್ ಶರ್ಮಾ ಬಳಿಕ ಹಾರ್ದಿಕ್ ಪಾಂಡ್ಯ ಟೀಂ  ಇಂಡಿಯಾ ಕ್ಯಾಪ್ಟನ್ ಆಗ್ತಾರೆ. ಪಾಂಡ್ಯಗೆ ಉತ್ತರಾಧಿಕಾರಿ ಋತುರಾಜ್ ಗಾಯಕ್ವಾಡ್ ಅಂತ ಕ್ರಿಕೆಟ್ ವಲಯದಲ್ಲಿ ಸುದ್ದಿ ಹರಿದಾಡುತ್ತಿದೆ. ಹಾಗಾಗಿಯೇ ಅವರನ್ನ ಐರ್ಲೆಂಡ್​ ಸರಣಿಗೆ ಉಪನಾಯಕನನ್ನಾಗಿ ಮಾಡಿ, ಏಷ್ಯನ್ ಗೇಮ್ಸ್​ಗೆ ನಾಯಕನನ್ನಾಗಿ ಮಾಡಲಾಗಿದೆ. ಆದ್ರೆ ಆ ಎರಡು ಟೂರ್ನಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ಋತು​, ವಿಂಡೀಸ್ ಸರಣಿಯಲ್ಲಿ ಆಟಗಾರನಾಗಿಯೂ ಸ್ಥಾನ ಪಡೆಯದೆ ಇರೋದು ವಿಪರ್ಯಾಸ.

ಲಾಜಿಕ್ಕು.. ಮ್ಯಾಜಿಕ್ಕು ಎರಡು ಇಲ್ಲದೆ ಆಯ್ಕೆಗಾರರು ಟೀಂ ಅನ್ನ ಹೇಗೆ ಸೆಲೆಕ್ಟ್ ಮಾಡ್ತಾರೆ ಅನ್ನೋದೇ ಗೊತ್ತಾಗ್ತಿಲ್ಲ. ಒಬ್ಬ ಟೀಂ ಇಂಡಿಯಾದ ಭವಿಷ್ಯದ ಆಟಗಾರ ಅಂತ ಗುರುತಿಸಿದ ಮೇಲೆ ಆತನಿಗೆ ಸತತವಾಗಿ ಅವಕಾಶ ಕೊಡಬೇಕು. ಆಗ ಮಾತ್ರ ಆತ ಉತ್ತಮ ಪ್ರದರ್ಶನ ನೀಡಿ ತಂಡದಲ್ಲಿ ಖಾಯಂ ಆಟಗಾರನಾಗಿ ಉಳಿಯೋದು ಸಾಧ್ಯ. ಅದನ್ನ ಬಿಟ್ಟು ಒಂದು ಸರಣಿ ಕ್ಯಾಪ್ಟನ್. ಮತ್ತೊಂದು ಸರಣಿಗೆ ವೈಸ್ ಕ್ಯಾಪ್ಟನ್. ಆದ್ರೆ ಇನ್ನೊಂದು ಸರಣಿಗೆ ಆಯ್ಕೆಯಾಗುವುದೇ ಇಲ್ಲ. ಫಿಟ್ನೆಸ್ ಮತ್ತು ಫಾರ್ಮ್​ ಸಮಸ್ಯೆ ಇಲ್ಲದೆಯೇ ಆಟಗಾರರನ್ನ ಏಕಾಏಕಿ ಯಾಕೆ ಬಿಡ್ತಾರೆ ಅನ್ನೋದೇ ಅರ್ಥವಾಗ್ತಿಲ್ಲ.

Latest Videos
Follow Us:
Download App:
  • android
  • ios