ಕೋಲ್ಕತಾ(ಜ.13): ಕ್ರಿಕೆಟಿಗನಾಗಿ ಬಳಿಕ ವೀಕ್ಷಕ ವಿವರಣೆಗಾರನಾಗಿ ಇದೀಗ ಬಿಸಿಸಿಐ ಅಧ್ಯಕ್ಷನಾಗಿ ಸೌರವ್ ಗಂಗೂಲಿ ನೇರ ನುಡಿ, ಖಡಕ್ ಮಾತು, ಧರ್ಯದಿಂದ ಮುನ್ನಗ್ಗುವ ಛಾತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಹೀಗಾಗಿ ಗಂಗೂಲಿ ಹೆಚ್ಚು ಗಂಭೀರವಾಗಿ ಕಾಣಿಸಿಕೊಳ್ಳುತ್ತಾರೆ. ಬಿಸಿಸಿಐ ಅಧ್ಯಕ್ಷನಾದ ಬಳಿಕ ಗಂಗೂಲಿ ಜವಾಬ್ದಾರಿ ಹೆಚ್ಚಾಗಿದೆ. ಇದರ ನಡುವೆ ಗಂಗೂಲಿ ಭರ್ಜರಿ ಡ್ಯಾನ್ಸ್ ಮಾಡಿ ಎಲ್ಲರ ಗಮನಸೆಳೆದಿದ್ದಾರೆ.

ಇದನ್ನೂ ಓದಿ: ರಜಾ ದಿನ ಕೆಲಸ ಇಷ್ಟವಿಲ್ಲ; ಗಂಗೂಲಿಗೆ ಫ್ಯಾನ್ಸ್ ಭರ್ಜರಿ ಪ್ರತಿಕ್ರಿಯೆ!

ಬಂಗಳಾದಲ್ಲಿ ಸೌರವ್ ಗಂಗೂಲಿ ದಾದಾಗಿರಿ ಅನ್‌ಲಿಮಿಟೆಡ್ ಕ್ವಿಝ್ ಕಾರ್ಯಕ್ರಮವನ್ನು ಸ್ವತಃ ಗಂಗೂಲಿ ನಿರೂಪಿಸಿದ್ದರು. ಈ ವಿಶೇಷ ಕಾರ್ಯಕ್ರಮಕ್ಕೆ ಗಂಗೂಲಿ ನಾಯಕತ್ವದಲ್ಲಿ ಆಡಿದ ಹಾಗೂ ಆಪ್ತರಾದ ವಿವಿಎಸ್ ಲಕ್ಷಣ್, ಹರ್ಭಜನ್ ಸಿಂಗ್, ವಿರೇಂದ್ರ ಸೆಹ್ವಾಗ್, ಜಹೀರ್ ಖಾನ್, ಮೊಹಮ್ಮದ್ ಕೈಫ್ ಹಾಗೂ ಆರ್ ಅಶ್ವಿನ್ ಆಹ್ವಾನಿಸಲಾಗಿತ್ತು. 

ಇದನ್ನೂ ಓದಿ: ಕೇವಲ 40 ನಿಮಿಷದಲ್ಲಿ ಹೃದಯ ಗೆದ್ದ ನಾಯಕ; ಗಂಗೂಲಿ ಹೊಗಳಿದ ಪಾಕ್ ದಿಗ್ಗಜ!

ಈ ಕಾರ್ಯಕ್ರಮದಲ್ಲಿ ಪಾಪ್ ಸಿಂಗರ್ ಉಶಾ ಉತ್ತಪ್ಪ ಕೂಡ ಹಾಜರಿದ್ದರು. ಕಾರ್ಯಕ್ರಮದ ನಡುವೆ ಉಶಾ ಉತ್ತಪ್ಪ ಬಾಲಿವುಡ್ ಹಾಡೊಂದನ್ನು ಹಾಡಿದರು. ಈ ವೇಳೆ ಹರ್ಭಜನ್ ಸಿಂಗ್ ಡ್ಯಾನ್ಸ್‌ ಮಾಡಲು ಮುಂದಾದರು. ಡ್ಯಾನ್ಸ್ ವೇಳೆ ಭಜ್ಜಿ, ಗಂಗೂಲಿಯನ್ನು ಕರೆತಂದು ಜೊತೆಯಾಗಿ ಡ್ಯಾನ್ಸ್ ಮಾಡಿದರು. ಗಂಗೂಲಿ ಕೂಡ ಅಷ್ಟೇ ಉತ್ತಮವಾಗಿ ಡ್ಯಾನ್ಸ್ ಮಾಡಿ ಎಲ್ಲರ ಗಮನಸೆಳೆದರು.