ಮುಂಬೈ(ಡಿ.29): ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಧಿಕಾರವದಿ ವಿಸ್ತರಿಸುವಂತೆ ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿದೆ. ಅಲ್ಪ ಅವಧಿಯಲ್ಲಿ ಗಂಗೂಲಿ ಹಲವು ಕೆಲಸಗಳನ್ನು ಮಾಡುತ್ತಿದ್ದಾರೆ. ರಜಾ ದಿನದಲ್ಲೂ ಗಂಗೂಲಿ ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಕುರಿತು ಗಂಗೂಲಿ ಟ್ವೀಟ್ ಮೂಲಕ ಭಾನುವಾರ ಕೆಲಸ ಮಾಡುವುದು ಇಷ್ಟವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

 

ಇದನ್ನೂ ಓದಿ: ಧೋನಿ ಭವಿಷ್ಯ; ಗಂಗೂಲಿ ಹೇಳಿಕೆಯಿಂದ ಹೆಚ್ಚಿದ ಆತಂಕ!

ಪಾರ್ಕ್‌ನಲ್ಲಿ ನಿಂತಿರುವ ಫೋಟೋ ಪೋಸ್ಟ್ ಮಾಡಿದ ಗಂಗೂಲಿ ಭಾನುವರಾ ಕೆಲಸ ಇಷ್ಟವಿಲ್ಲ ಎಂದಿದ್ದಾರೆ. ಗಂಗೂಲಿ ಟ್ವೀಟ್‌ಗೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಪಾರ್ಕ್‌ನಲ್ಲಿ ನಿಂತು ಕೆಲಸ ಎಂದರೆ ಹೇಗೆ? ಬಿಸಿಸಿಐ ಬಾಸ್ ಆಗಿರುವಾಗ ರಜಾ ದಿನ ಕೆಲಸ ಮಾಡಿ ಎಂದವರ್ಯಾರು? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಪುತ್ರಿ ಸನಾ ವಿರುದ್ದ ಸೋಲೋಪ್ಪಿಕೊಂಡ ಸೌರವ್ ಗಂಗೂಲಿ!

ರಜಾ ದಿನವೂ ಕೆಲಸ, ಹೀಗಾಗಿ ದಾದಿ ಎಂದು ಕೆಲವರು ಕರೆದಿದ್ದಾರೆ. ರಜಾ ದಿನದಲ್ಲಿ ಕೆಲಸ ಇಷ್ಟವಿಲ್ಲ ಎಂದಾದರೆ ಸೋಮವಾರ ಮಾಡಿ ಎಂದು ಸಲಹೆ ನೀಡಿದ್ದಾರೆ.