ಮುಂಬೈ(ಮೇ.12): ಐಪಿಎಲ್ ಟೂರ್ನಿ ಆಯೋಜನೆ ಸಾಧ್ಯತೆ ಕುರಿತು ಚರ್ಚೆಗಳು ನಡೆಯುತ್ತಿದೆ. ಹಲವು ನಿರ್ಬಂಧ, ಮಾರ್ಗಸೂಚಿಗಳನ್ನು ರೂಪಿಸಿ ಐಪಿಎಲ್ ಆಯೋಜನೆಗೆ ತಯಾರಿ ಕೂಡ  ನಡೆಯುತ್ತಿದೆ. ಇದರ ಬೆನ್ನಲ್ಲೇ ರಾಜಸ್ಥಾನ ರಾಯಲ್ಸ್,  ಹೊಸ ಐಡಿಯಾ ನೀಡಿದೆ. ಈ ವರ್ಷ ವಿದೇಶಿ ಆಟಗಾರರಲಿಲ್ಲದೆ ಐಪಿಎಲ್ ಟೂರ್ನಿ ಆಯೋಜನೆ ಮಾಡಿ ನಷ್ಟದ ಮೊತ್ತ ತಗ್ಗಿಸಿ ಎಂದು ಸೂಚಿಸಿದೆ. ಇದಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ವಿರೋಧ ವ್ಯಕ್ತಪಡಿಸಿದೆ.

IPL 2020 ಸಂಪೂರ್ಣ ರದ್ದಾದರೆ BCCIಗೆ ಆಗುವ ನಷ್ಟವೆಷ್ಟು? ಇಲ್ಲಿದೆ ವಿವರ!

ವಿದೇಶಿ ಆಟಗಾರರಿಲ್ಲದೆ ಐಪಿಎಲ್ ಟೂರ್ನಿ ಆಯೋಜಿಸಿದರೆ ಅದು ಇನ್ನೊಂದು ಮುಷ್ತಾಕ್ ಆಲಿ ಟೂರ್ನಿ ಆಗಲಿದೆ ಹೊರತು, ಐಪಿಎಲ್ ಟೂರ್ನಿ ಆಗಲ್ಲ ಎಂದು ಸಿಎಸ್‌ಕೆ ಹೇಳಿದೆ. ವಿದೇಶಿ ಆಟಗಾರರಿಲ್ಲದೆ ಐಪಿಎಲ್ ಟೂರ್ನಿ ಸಂಪೂರ್ಣ ಕಳೆಗುಂದಲಿದೆ. ಇಷ್ಟೇ ಅಲ್ಲ ಹಲವು ನಿರ್ಬಂಧದಲ್ಲಿ ಟೂರ್ನಿ ಆಯೋಜಿಸುವುದರಿಂದ ಹೆಚ್ಚಿನ ನಷ್ಟಗಳಾಗಲಿದೆ ಎಂದು ಚೈನ್ನೈ ಫ್ರಾಂಚೈಸಿ ಹೇಳಿದೆ.

IPL 2020 ಟೂರ್ನಿ ಆಯೋಜಿಸಲು ಬಿಸಿಸಿಐಗೆ ಆಹ್ವಾನ ನೀಡಿದ ದುಬೈ!

ಐಪಿಎಲ್ ಗರ್ವನಿಂಗ್ ಕೌನ್ಸಿಲ್ ಇದುವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಅರ್ನಿದಿಷ್ಟಾವದಿಗೆ ಐಪಿಎಲ್ ಟೂರ್ನಿ ಮುಂದೂಡಲಾಗಿದೆ. ಕೊರೋನಾ ನಿಯಂತ್ರಣಕ್ಕೆ ಬಂದು, ಸಮಯಾವಕಾಶ ಸರಿಹೊಂದಿದರೆ ಟೂರ್ನಿ ಆಯೋಜಿಸುವ ಕುರಿತು ಚಿಂತಿಸಲು ಬಿಸಿಸಿಐ ನಿರ್ಧರಿಸಿದೆ.