Asianet Suvarna News Asianet Suvarna News

ಶ್ರೀಲಂಕಾ ಸರಣಿಗೆ ಟೀಂ ಇಂಡಿಯಾ ಬೌಲಿಂಗ್ ಕೋಚ್ ನೇಮಕ..!

ಶ್ರೀಲಂಕಾ ಎದುರಿನ ಸೀಮಿತ ಓವರ್‌ಗಳ ಸರಣಿಗಾಗಿ ಟೀಂ ಇಂಡಿಯಾ ಬೌಲಿಂಗ್ ಕೋಚ್ ನೇಮಕವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ

BCCI pick Sairaj Bahutule to travel as Team India bowling coach for Sri Lanka series kvn
Author
First Published Jul 22, 2024, 12:59 PM IST | Last Updated Jul 22, 2024, 1:55 PM IST

ನವದೆಹಲಿ: ಶ್ರೀಲಂಕಾ ವಿರುದ್ಧ ಜುಲೈ 27ರಿಂದ ಆರಂಭಗೊಳ್ಳಲಿರುವ ಸರಣಿಗೆ ಭಾರತ ತಂಡಕ್ಕೆ ಸಾಯಿರಾಜ್‌ ಬಹುತುಲೆ ಬೌಲಿಂಗ್‌ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.ಭಾರತ ತಂಡದ ಮಾಜಿ ಬೌಲರ್‌ ಆಗಿರುವ 51 ವರ್ಷದ ಬಹುತುಲೆ ಕಳೆದ 3 ವರ್ಷಗಳಿಂದ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ಯಲ್ಲಿ ಬೌಲಿಂಗ್‌ ಕೋಚ್‌ ಆಗಿದ್ದಾರೆ. ಅವರು ಸೋಮವಾರ ಭಾರತ ತಂಡದ ಜೊತೆ ಶ್ರೀಲಂಕಾ ಪ್ರಯಾಣಿಸಲಿದ್ದಾರೆ ಎಂದು ವರದಿಯಾಗಿದೆ.

ಬಹುತುಲೆ 1997-2003ರ ಅವಧಿಯಲ್ಲಿ 2 ಟೆಸ್ಟ್‌, 8 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರು 188 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ. ಈ ಮೊದಲು ಅವರು ದೇಸಿ ಕ್ರಿಕೆಟ್‌ನಲ್ಲಿ ವಿದರ್ಭ, ಕೇರಳ, ಗುಜರಾತ್‌ ಹಾಗೂ ಬಂಗಾಳ ತಂಡಗಳಲ್ಲಿ ಕೋಚ್‌ ಆಗಿ ಸೇವೆ ಸಲ್ಲಿಸಿದ್ದಾರೆ. ಅವರು ಐಪಿಎಲ್‌ನ ರಾಜಸ್ಥಾನ ತಂಡದ ಬೌಲಿಂಗ್‌ ಕೋಚ್‌ ಆಗಿದ್ದರು.

ಕೊಹ್ಲಿ, ರೋಹಿತ್ 2027ರ ಏಕದಿನ ವಿಶ್ವಕಪ್ ಆಡ್ತಾರಾ..?: ಮಹತ್ವದ ಅಪ್‌ಡೇಟ್ ಕೊಟ್ಟ ಗೌತಮ್ ಗಂಭೀರ್..!

ಶ್ರೀಲಂಕಾ ಸರಣಿ ಬಳಿಕ ಬಿಸಿಸಿಐ ಭಾರತ ತಂಡಕ್ಕೆ ಖಾಯಂ ಬೌಲಿಂಗ್ ನೇಮಕ ಮಾಡುವ ನಿರೀಕ್ಷೆಯಿದೆ. ದ.ಆಫ್ರಿಕಾ ಮೊರ್ನೆ ಮಾರ್ಕೆಲ್‌ ಕೋಚ್‌ ಹುದ್ದೆಯ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

ಗಾಯ: ಏಷ್ಯಾಕಪ್‌ನಿಂದ ಹೊರಬಿದ್ದ ಶ್ರೇಯಾಂಕ ಪಾಟೀಲ್

ದಾಂಬುಲಾ: ಪಾಕಿಸ್ತಾನ ವಿರುದ್ಧ ಪಂದ್ಯದ ವೇಳೆ ಕೈ ಬೆರಳಿನ ಗಾಯಕ್ಕೆ ತುತ್ತಾಗಿದ್ದ ಭಾರತದ ಯುವ ಸ್ಪಿನ್ನರ್‌ ಶ್ರೇಯಾಂಕ ಪಾಟೀಲ್‌ ಮಹಿಳಾ ಏಷ್ಯಾಕಪ್‌ ಟಿ20 ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರ ಬದಲು ತನುಜಾ ಕಾನ್ವಾರ್‌ ತಂಡವನ್ನು ಕೂಡಿಕೊಂಡಿದ್ದಾರೆ. ಕರ್ನಾಟಕದ 21 ವರ್ಷದ ಶ್ರೇಯಾಂಕ ಪಾಕ್‌ ವಿರುದ್ಧ 3.2 ಓವರ್‌ಗಳಲ್ಲಿ 14 ರನ್‌ ನೀಡಿ 2 ವಿಕೆಟ್‌ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಯುಎಇ ವಿರುದ್ಧ ಪಂದ್ಯಕ್ಕೂ ಮುನ್ನ ತಂಡದಿಂದ ಹೊರಬಿದ್ದಿದ್ದಾರೆ. ಅವರು ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೂ ಮುನ್ನ ಚೇತರಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

2ನೇ ಟೆಸ್ಟ್‌: ವೆಸ್ಟ್‌ಇಂಡೀಸ್‌ಗೆ ಇನ್ನಿಂಗ್ಸ್‌ & 241 ರನ್‌ ಸೋಲು

ನಾಟಿಂಗ್‌ಹ್ಯಾಮ್‌: ವೆಸ್ಟ್‌ಇಂಡೀಸ್‌ ವಿರುದ್ಧ 2ನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಇನ್ನಿಂಗ್ಸ್‌ ಹಾಗೂ 241 ರನ್‌ ಬೃಹತ್‌ ಗೆಲುವು ಸಾಧಿಸಿದೆ. ಇದರೊಂದಿಗೆ ಇಂಗ್ಲೆಂಡ್‌ 3 ಪಂದ್ಯಗಳ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಕೈ ವಶಪಡಿಸಿಕೊಂಡಿದೆ. ಗೆಲುವಿಗೆ 385 ರನ್‌ ಗುರಿ ಪಡೆದಿದ್ದ ವಿಂಡೀಸ್‌ ಕೇವಲ 143 ರನ್‌ಗೆ ಆಲೌಟಾಯಿತು.

ಮಹಿಳಾ ಏಷ್ಯಾಕಪ್‌ ಟಿ20 ಟೂರ್ನಿ: ಯುಎಇಗೆ ಸೋಲುಣಿಸಿ ಭಾರತ ಸೆಮೀಸ್‌ ಸನಿಹಕ್ಕೆ

2ನೇ ಇನ್ನಿಂಗ್ಸ್‌ನಲ್ಲಿ ಭಾನುವಾರ ಆತಿಥೇಯ ಇಂಗ್ಲೆಂಡ್‌ 425 ರನ್‌ ಗಳಿಸಿತು. ಟೆಸ್ಟ್‌ ಕ್ರಿಕೆಟ್‌ನಲ್ಲಿ 32ನೇ ಶತಕ ಪೂರ್ಣಗೊಳಿಸಿದ ಹಿರಿಯ ಬ್ಯಾಟರ್‌ ಜೋ ರೂಟ್‌ 178 ಎಸೆತಗಳಲ್ಲಿ 122 ರನ್‌ ಗಳಿಸಿ ಔಟಾದರು. ಹ್ಯಾರಿ ಬ್ರೂಕ್‌ 109 ರನ್‌ ಸಿಡಿಸಿದರು. ಈ ಜೋಡಿ 4ನೇ ವಿಕೆಟ್‌ಗೆ 189 ರನ್‌ ಜೊತೆಯಾಟವಾಡಿತು. ಬ್ರೂಕ್‌ ನಿರ್ಗಮನದ ಬಳಿಕ ಇತರ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲಿಲ್ಲ. 329ಕ್ಕೆ 3 ವಿಕೆಟ್‌ ಕಳೆದುಕೊಂಡಿದ್ದ ತಂಡ ಬಳಿಕ 96 ರನ್‌ ಸೇರಿಸುವಷ್ಟರಲ್ಲಿ ಆಲೌಟಾಯಿತು. ಬಳಿಕ ಗುರಿ ಬೆನ್ನತ್ತಿದ ವಿಂಡೀಸ್‌ ಯಾವುದೇ ಹೋರಾಟ ಪ್ರದರ್ಶಿಸದೆ ಸೋಲೊಪ್ಪಿಕೊಂಡಿತು. ಶೋಯೆಬ್‌ ಬಶೀರ್‌ 5 ವಿಕೆಟ್‌ ಕಿತ್ತರು.
 

Latest Videos
Follow Us:
Download App:
  • android
  • ios