Asianet Suvarna News Asianet Suvarna News

ರಣಜಿ ಟ್ರೋಫಿ ವಿಜೇತರಿಗೆ ಇನ್ನು 5 ಕೋಟಿ ಬಹುಮಾನ!

ದೇಸಿ ಟೂರ್ನಿಗಳ ಬಹುಮಾನ ಮೊತ್ತ ಹೆಚ್ಚಿಸಿದ ಬಿಸಿಸಿಐ
ರಣಜಿ ಟ್ರೋಫಿ ಪ್ರಶಸ್ತಿ ವಿಜೇತರಿಗೆ ಸಿಗಲಿದೆ 5 ಕೋಟಿ ಬಹುತೇಕ
ರಣಜಿ ಟ್ರೋಫಿ ರನ್ನ​ರ್‌-ಅಪ್‌ ತಂಡಕ್ಕೆ 3 ಕೋಟಿ ರುಪಾಯಿ ಬಹುತೇಕ

BCCI hikes cash prize for domestic tournaments kvn
Author
First Published Apr 17, 2023, 11:14 AM IST

ನವ​ದೆ​ಹ​ಲಿ(ಏ.17): 2023-24ರ ದೇಸಿ ಋತು ಆರಂಭಕ್ಕೂ ಮುನ್ನ ಬಿಸಿ​ಸಿಐ ದೇಸಿ ಟೂರ್ನಿ​ಗಳ ಬಹು​ಮಾ​ನದ ಮೊತ್ತ ಭಾರೀ ಏರಿಕೆ ಮಾಡಿದ್ದು, ರಣಜಿ ಟ್ರೋಫಿ ವಿಜೇ​ತರು ಇನ್ನು ಮುಂದೆ 2 ಕೋಟಿ ರು. ಬದಲು 5 ಕೋಟಿ ರುಪಾಯಿ ಪಡೆ​ಯ​ಲಿ​ದ್ದಾರೆ. ಬಿಸಿ​ಸಿಐ ಕಾರ‍್ಯ​ದರ್ಶಿ ಜಯ್‌ ಶಾ ಭಾನು​ವಾರ ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದು, ಇನ್ಮುಂದೆ ರಣಜಿ ಟ್ರೋಫಿ ರನ್ನ​ರ್‌-ಅಪ್‌ ತಂಡ 1 ಕೋಟಿ ಬದಲು 3 ಕೋಟಿ ರುಪಾಯಿ ಪಡೆ​ಯ​ಲಿ​ದೆ ಎಂದಿದ್ದಾರೆ. 

ಇರಾನಿ ಕಪ್‌ ವಿಜೇ​ತರು 25 ಲಕ್ಷ ಬದಲು 50 ಲಕ್ಷ ರುಪಾಯಿ, ದುಲೀಪ್‌ ಟ್ರೋಫಿ ವಿಜೇ​ತರು 40 ಲಕ್ಷ ರುಪಾಯಿ ಬದಲು 1 ಕೋಟಿ ರುಪಾಯಿ, ವಿಜಯ್‌ ಹಜಾರೆ ಟ್ರೋಫಿ ವಿಜೇತ ತಂಡ 30 ಲಕ್ಷ ರುಪಾಯಿ ಬದಲು 1 ಕೋಟಿ ರು. ಪಡೆ​ಯಲಿದೆ ಎಂದು ತಿಳಿ​ಸಿ​ದ್ದಾರೆ. ದೇವ​ಧಾರ್‌ ಟ್ರೋಫಿಯ ಬಹು​ಮಾನ ಮೊತ್ತ 25 ಲಕ್ಷ​ದಿಂದ 40 ಲಕ್ಷ ರುಪಾಯಿಗೆ ಹೆಚ್ಚಾ​ಗಿ​ದ್ದರೆ, ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ ಮೊತ್ತ 25 ಲಕ್ಷ​ದಿಂದ 80 ಲಕ್ಷಕ್ಕೆ ಏರಿ​ಕೆ​ಯಾ​ಗಿದೆ. ಇದೇ ವೇಳೆ ರಾಷ್ಟ್ರೀಯ ಮಹಿಳಾ ಏಕ​ದಿನ ಟೂರ್ನಿಯ ಬಹು​ಮಾನ ಮೊತ್ತ 6 ಲಕ್ಷ​ದಿಂದ 50 ಲಕ್ಷಕ್ಕೆ, ಟಿ20 ಟೂರ್ನಿಯ ಮೊತ್ತ 5 ಲಕ್ಷ​ದಿಂದ 40 ಲಕ್ಷಕ್ಕೆ ಏರಿಕೆ ಮಾಡ​ಲಾ​ಗಿ​ದೆ ಎಂದು ತಿಳಿ​ಸಿ​ದ್ದಾ​ರೆ.

ಐಸಿಸಿಯಿಂದ ಬಿಸಿಸಿಐಗೆ 10,000 ಕೋಟಿ ಪಾವತಿ?

ನವ​ದೆ​ಹ​ಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಆದಾಯ ಹಂಚಿಕೆಯಲ್ಲಿ ಬಿಸಿಸಿಐ ಪಾಲು ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 2016-23ರ ಅವಧಿಯಲ್ಲಿ ಐಸಿಸಿಯ ಒಟ್ಟು ಆದಾಯದಲ್ಲಿ ಶೇ.22ರಷ್ಟುಅಂದರೆ ಅಂದಾಜು 3,300 ಕೋಟಿ ರು. ಬಿಸಿಸಿಐ ಖಜಾನೆ ಸೇರಿತ್ತು. ಈಗ 2024-27ರ ಅವಧಿಯಲ್ಲಿ ಬಿಸಿಸಿಐ ಪಾಲು ಶೇ.37ಕ್ಕೆ ಏರಿಕೆಯಾಗಲಿದೆ ಎನ್ನಲಾಗಿದೆ. ಅಂದರೆ ಐಸಿಸಿಯಿಂದ ಬಿಸಿಸಿಐಗೆ 10,000 ಕೋಟಿ ರು. ಹರಿದುಬರುವ ನಿರೀಕ್ಷೆ ಇದೆ.

IPL 2023: ಇಂದು ರಾಯಲ್ ಚಾಲೆಂಜರ್ಸ್‌ ಬೆಂಗ​ಳೂ​ರು - ಚೆನ್ನೈ ಸೂಪರ್ ಕಿಂಗ್ಸ್‌ ಮೆಗಾ ಫೈಟ್‌

ಮುಂದಿನ ವಾರ ಶ್ರೇಯಸ್‌ಗೆ ಇಂಗ್ಲೆಂಡ್‌​ನಲ್ಲಿ ಶಸ್ತ್ರ​ಚಿ​ಕಿ​ತ್ಸೆ

ನವ​ದೆ​ಹ​ಲಿ: ಬೆನ್ನು ನೋವಿ​ನಿಂದ ಬಳ​ಲು​ತ್ತಿ​ರುವ ಭಾರ​ತದ ತಾರಾ ಬ್ಯಾಟರ್‌ ಶ್ರೇಯ​ಸ್‌ ಅಯ್ಯರ್‌ ಮುಂದಿನ ವಾರ ಶಸ್ತ್ರ​ಚಿ​ಕಿ​ತ್ಸೆ​ಗಾಗಿ ಇಂಗ್ಲೆಂಡ್‌ಗೆ ತೆರ​ಳ​ಲಿ​ದ್ದಾರೆ ಎಂದು ಮಾಧ್ಯ​ಮ​ಗ​ಳಲ್ಲಿ ವರ​ದಿ​ಯಾ​ಗಿದೆ. ಅಯ್ಯರ್‌ ಶಸ್ತ್ರ​ಚಿ​ಕಿ​ತ್ಸೆಗೆ ಒಳ​ಗಾ​ಗ​ಲಿ​ದ್ದಾರೆ ಎಂದು ಬಿಸಿ​ಸಿಐ ಈಗಾ​ಗಲೇ ಖಚಿ​ತ​ಪ​ಡಿ​ಸಿತ್ತು. ಶಸ್ತ್ರ​ಚಿ​ಕಿತ್ಸೆ ಬಳಿಕ ಅಯ್ಯರ್‌ ಸುಮಾರು 4-5 ತಿಂಗಳ ಕಾಲ ಕ್ರಿಕೆ​ಟ್‌​ನಿಂದ ದೂರ ಉಳಿ​ಯ​ಲಿದ್ದು, ಸೆಪ್ಟೆಂಬ​ರ್‌​ನಲ್ಲಿ ನಡೆ​ಯ​ಲಿ​ರುಗ ಏಷ್ಯಾ​ಕ​ಪ್‌​ನಿಂದ ಹೊರ​ಗು​ಳಿ​ಯುವ ಸಾಧ್ಯತೆ ಇದೆ. ಅಕ್ಟೋ​ಬರ್‌ ವೇಳೆಗೆ ಗುಣ​ಮು​ಖ​ರಾಗುವ ನಿರೀಕ್ಷೆ ಇದ್ದರೂ ಐಸಿಸಿ ಏಕ​ದಿನ ವಿಶ್ವ​ಕ​ಪ್‌​ಗೆ ಅಲ​ಭ್ಯ​ರಾ​ಗ​ಬ​ಹುದು ಎಂದು ಹೇಳ​ಲಾ​ಗು​ತ್ತಿ​ದೆ.

ಬಾಬರ್‌ ಶತ​ಕ: ಪಾಕ್‌ಗೆ ಕಿವೀಸ್‌ ವಿರುದ್ಧ ಗೆಲು​ವು

ಲಾಹೋ​ರ್‌: ನಾಯಕ ಬಾಬರ್‌ ಆಜಂ ಶತ​ಕದ ನೆರ​ವಿ​ನಿಂದ ನ್ಯೂಜಿ​ಲೆಂಡ್‌ ವಿರು​ದ್ಧದ 2ನೇ ಟಿ20 ಪಂದ್ಯ​ದಲ್ಲಿ ಪಾಕಿ​ಸ್ತಾನ 38 ರನ್‌ ಜಯ​ಗ​ಳಿ​ಸಿದ್ದು, 5 ಪಂದ್ಯ​ಗಳ ಸರ​ಣಿ​ಯಲ್ಲಿ 2-0 ಮುನ್ನಡೆ ಪಡೆ​ದಿದೆ. ಮೊದಲು ಬ್ಯಾಟ್‌ ಮಾಡಿದ ಪಾಕ್‌ 4 ವಿಕೆ​ಟ್‌ಗೆ 192 ರನ್‌ ಕಲೆ​ಹಾ​ಕಿತು. ರಿಜ್ವಾನ್‌ 50 ರನ್‌ ಸಿಡಿ​ಸಿ​ದರೆ, ಆಜಂ 58 ಎಸೆ​ತ​ಗ​ಳಲ್ಲಿ ಔಟಾ​ಗದೆ 101 ರನ್‌ ಬಾರಿ​ಸಿ​ ಅಂ.ರಾ. ಟಿ20ಯಲ್ಲಿ 3 ಶತಕ ಸಿಡಿ​ಸಿದ ಮೊದಲ ನಾಯಕ ಎನಿ​ಸಿ​ಕೊಂಡ​ರು. ಗುರಿ ಬೆನ್ನ​ತ್ತಿದ ಕಿವೀಸ್‌ 7 ವಿಕೆ​ಟ್‌ಗೆ 154 ರನ್‌ ಗಳಿಸಲಷ್ಟೇ ಶಕ್ತ​ವಾ​ಯಿ​ತು. ಮಾರ್ಕ್ ಚಾಪ್ಮನ್‌(40 ಎಸೆ​ತ​ಗ​ಳಲ್ಲಿ 65) ಹೋರಾಟ ವ್ಯರ್ಥ​ವಾ​ಯಿತು. ರೌಫ್‌ ಮತ್ತೆ 4 ವಿಕೆಟ್‌ ಕಿತ್ತ​ರು.

Follow Us:
Download App:
  • android
  • ios