ಮುಂಬೈ(ಅ.12): ಕ್ರಿಕೆಟ್‌ನಲ್ಲಿ ವಯಸ್ಸಿನ ವಂಚನೆ ಮಾಡುವವರನ್ನು ಪ್ರೋತ್ಸಾಹಿಸಿಬಾರದು ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹೇಳಿದ ಬೆನ್ನಲ್ಲೇ ಬಿಸಿಸಿಐ ಮೂವರು ಕ್ರಿಕೆಟಿಗರನ್ನು ಅನರ್ಹಗೊಳಿಸಿದೆ. ಮುಂಬೈ ಅಂಡರ್ 16 ತಂಡದ ನಾಯಕ ಸೇರಿದಂತೆ ಮೂವರು ಯುವ ಕ್ರಿಕೆಟಿಗರು ಶಿಕ್ಷೆಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ: ಬಿಸಿ​ಸಿಐ ಚುನಾ​ವ​ಣೆಗೆ 8 ರಾಜ್ಯ ಸಂಸ್ಥೆಗಳು ಅನ​ರ್ಹ!

ಮುಂಬೈ ಅಂಡರ್ 16 ತಂಡದ ನಾಯಕ ಹಾಗೂ ಆರಂಭಿಕ ಜಶ್ ಗಾಣಿಗ, ಆಲ್ರೌಂಡರ್ ಜಯ್ ಧಾತ್ರಕ್  ಹಾಗೂ ಲೆಗ್ ಸ್ಪಿನ್ನರ್ ಅಮನ್ ತಿವಾರಿಯನ್ನು ಬಿಸಿಸಿಐ ಅನರ್ಹಗೊಳಿಸಿದೆ. ಮುಂಬೈ ಕ್ರಿಕೆಟ್ ಸಂಸ್ಥೆಗೆ ಪತ್ರ ಬರೆದಿರುವ ಬಿಸಿಸಿಐ ಅಂಡರ್ 16 ತಂಡದ ಮೂವರು ಕ್ರಿಕೆಟಿಗರು ಅಂಡರ್ 16 ಕ್ರಿಕೆಟ್ ಆಡಲು ಅನರ್ಹರು ಎಂದಿದೆ.

ಇದನ್ನೂ ಓದಿ: BCCI ನೊಟೀಸ್ ಬೆನ್ನಲ್ಲೇ CACಗೆ ಕಪಿಲ್ ದೇವ್ ರಾಜಿನಾಮೆ!

ವಯಸ್ಸಿನ ವಂಚನೆ ಕುರಿತು ಬಿಸಿಸಿಐ, ಮುಂಬೈ ಕ್ರಿಕೆಟ್ ಸಂಸ್ಥೆಯನ್ನು ತರಾಟೆ ತೆಗೆದುಕೊಂಡಿದೆ. ಈ ಮೂವರು ಕ್ರಿಕೆಟಿಗರು ತರಬೇತಿ ಶಿಬಿರ, ಅಭ್ಯಾಸ, ಸಂಭವನೀಯ ತಂಡದಲ್ಲಿ ಕಾಣಿಸಿಕೊಂಡಿದ್ದು ಹೇಗೆ ಎಂದು ಬಿಸಿಸಿಐ ಪ್ರಶ್ನಿಸಿದೆ. 

ಮೂವರ ಅಮಾನತ್ತಿನಿಂದ ಮುಂಬೈ ಕ್ರಿಕೆಟ್ ಸಂಸ್ಥೆ ಹರ್ಶಾ ಸಾಲುಂಕೆ, ನಿಸರ್ಗ್ ಬುವದ್, ಹಾಗೂ ಅರ್ಜುನ್ ದಾನಿ ಬದಲಿ ಆಟಗಾರರನ್ನಾಗಿ ಆಯ್ಕೆ ಮಾಡಿದೆ.