ಬಿಸಿಸಿಐ ಚುನಾವಣೆಗೆ 8 ರಾಜ್ಯ ಸಂಸ್ಥೆಗಳು ಅನರ್ಹ!
ಬಿಸಿಸಿಐ ಅಧ್ಯಕ್ಷ ಗಾದಿ ಹಿಡಿಯಲು ಅಭ್ಯರ್ಥಿಗಳ ತಯಾರಿ ಆರಂಭಗೊಂಡಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಕಸರತ್ತುಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ಬಿಸಿಸಿಐ 8 ರಾಜ್ಯ ಕ್ರಿಕೆಟ್ ಸಂಸ್ಥೆಗಳನ್ನು ಅನರ್ಹಗೊಳಿಸಿದೆ.
ನವದೆಹಲಿ(ಅ.11): ಬಿಸಿಸಿಐ ಚುನಾವಣೆಗೆ ಚಟುವಟಿಕೆಗೆಗಳು ಗರಿಗೆದರಿದೆ. ಇದರ ಬೆನ್ನಲ್ಲೇ ಕೆಲ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಬಿಸಿಸಿಐ ಶಾಕ್ ನೀಡಿದೆ. ಅ.23ರಂದು ನಡೆಯಲಿರುವ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆ ಹಾಗೂ ಚುನಾವಣೆಗೆ 8 ರಾಜ್ಯ ಕ್ರಿಕೆಟ್ ಸಂಸ್ಥೆಗಳನ್ನು ಸುಪ್ರೀಂ ನೇಮಿತ ಆಡಳಿತ ಸಮಿತಿ (ಸಿಒಎ) ಅನರ್ಹಗೊಳಿಸಿದೆ.
ಇದನ್ನೂ ಓದಿ: KSCA ಚುನಾವಣೆ ಫಲಿತಾಂಶ; ರೋಜರ್ ಬಿನ್ನಿ ಬಣಕ್ಕೆ ಭರ್ಜರಿ ಗೆಲುವು!
ಸುಪ್ರೀಂ ಕೋರ್ಟ್ ಅನುಮೋದಿಸಿದ ಬಿಸಿಸಿಐ ಸಂವಿಧಾನದ ಅನುಸರಣೆಗೆ ಬಾರದ ರಾಜ್ಯ ಸಂಸ್ಥೆಗಳ ಸಂವಿಧಾನದಲ್ಲಿ ತಿದ್ದುಪಡಿಗೆ ಸಿಒಎ ಸಲಹೆ ನೀಡಿತ್ತು. ಮಣಿಪುರ, ಉತ್ತರ ಪ್ರದೇಶ, ತಮಿಳುನಾಡು, ಹರ್ಯಾಣ, ಮಹಾರಾಷ್ಟ್ರ, ರೈಲ್ವೇಸ್, ಸರ್ವಿಸಸ್ ಹಾಗೂ ಭಾರತೀಯ ವಿಶ್ವವಿದ್ಯಾಲಯಗಳ ಸಂಘ ಮತದಾನ ಮಾಡುವ ಹಕ್ಕನ್ನು ಕಳೆದುಕೊಂಡಿವೆ.
ಇದನ್ನೂ ಓದಿ: ಬಿಸಿಸಿಐ ಚುನಾವಣಾ ಕಣಕ್ಕೆ ಸೌರವ್, ಅಜರ್
ಗುರುವಾರ ಚುನಾವಣಾ ಅಧಿಕಾರಿ ಗೋಪಾಲಸ್ವಾಮಿ ಅಂತಿಮ ಪಟ್ಟಿಬಿಡುಗಡೆ ಮಾಡಿದರು. ಬ್ರಿಜೇಶ್ ಪಟೇಲ್ (ಕರ್ನಾಟಕ), ಗಂಗೂಲಿ (ಬಂಗಾಳ), ಅಜರುದ್ದೀನ್ (ಹೈದರಾಬಾದ್), ರಜತ್ ಶರ್ಮಾ (ಡೆಲ್ಲಿ), ಜಯ್ ಶಾ (ಸೌರಾಷ್ಟ್ರ), ಅರುಣ್ ಸಿಂಗ್ ಧುಮಲ್ (ಹಿಮಾಚಲ) ರಾಜ್ಯ ಸಂಸ್ಥೆಗಳನ್ನು ಪ್ರತಿನಿಧಿಸಲಿದ್ದಾರೆ.