Asia Cup: ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಲೀಕ್!
ಭಾರತ ಹಾಗೂ ಪಾಕಿಸ್ತಾನದ ನಡುವಿನ ಹೈವೋಲ್ಟೇಜ್ ಏಷ್ಯಾಕಪ್ ಮುಖಾಮುಖಿ ಭಾನುವಾರ ನಡೆಯಲಿದೆ. ಇದಕ್ಕೂ ಮುನ್ನ ಬಿಸಿಸಿಐ, ಟೀಮ್ ಇಂಡಿಯಾದ ಅಭ್ಯಾಸ 10 ಚಿತ್ರಗಳನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರು (ಆ.27): ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಏಷ್ಯಾಕಪ್ ಟಿ20 ಮುಖಾಮುಖಿಗೆ ಇನ್ನೊಂದೇ ದಿನ ಬಾಕಿ ಉಳಿದಿದೆ. ಈ ನಡುವೆ ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೆ ಟೀಮ್ ಇಮಡಿಯಾದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಯಾರೆಲ್ಲಾ ಇರಬಹುದು ಎನ್ನುವ ಚರ್ಚೆ ಹಾಗೂ ಕುತೂಹಲ ಆರಂಭವಾಗಿದೆ. ಟೀಮ್ ಇಂಡಿಯಾದ ಕಟ್ಟಾ ಅಭಿಮಾನಿಗಳ ಪ್ರಕಾರ, ಏಷ್ಯಾಕಪ್ ಟಿ20ಯಲ್ಲಿ ಆಡಲಿರುವ ಪ್ಲೇಯಿಂಗ್ ಇಲೆವೆನ್ ತಂಡವೇ ಮುಂಬರುವ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ತಂಡದ ಮೊದಲ ಆಯ್ಕೆಯ ಪ್ಲೇಯಿಂಗ್ ಇಲೆವೆನ್ ಆಗಿರಲಿದ್ದು, ಆ ನಿಟ್ಟಿನಲ್ಲಿ ತಂಡ ತಂತ್ರ ರೂಪಿಸಲಿದೆ ಎಂದು ಹೇಳಲಾಗಿದೆ. ಆದರೆ ದುಬೈ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಬಹು ನಿರೀಕ್ಷಿತ ಪಾಕಿಸ್ತಾನದ ಮುಖಾಮುಖಿಗೆ ಬಿಸಿಸಿಐ ಭಾರತದ ಪ್ಲೇಯಿಂಗ್ ಇಲೆವೆನ್ ಅನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಕ್ರಿಪ್ಟಿಕ್ ಅಥವಾ ರಹಸ್ಯ ಪೋಸ್ಟ್ ಮೂಲಕ "ಸೋರಿಕೆ" ಮಾಡಿದೆ ಎಂದೂ ಅಭಿಮಾನಿಗಳು ಹೇಳಿದ್ದಾರೆ. ಬಿಸಿಸಿಐ ಟೀಮ್ ಇಂಡಿಯಾ ದುಬೈನಲ್ಲಿ ನಡೆದ ಅಭ್ಯಾಸದ ಸಮಯದ ಪೋಸ್ಟ್‌ಗಳನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದೆ. ಇದರಲ್ಲಿ 10 ಚಿತ್ರಗಳಿದ್ದು, 11 ವಿಭಿನ್ನ ಆಟಗಾರರಿದ್ದಾರೆ. ಹಾಗಾಗಿ ಇದು ಪ್ಲೇಯಿಂಗ್ ಇಲೆವೆನ್ ಇರಬಹುದಾ ಎನ್ನುವ ಚಿಂತೆಯಲ್ಲಿ ಅಭಿಮಾನಿಗಳು ಬಿದ್ದಿದ್ದಾರೆ.
'ಟೀಮ್ ಇಂಡಿಯಾ ಟ್ರೇನಿಂಗ್ ಮಾಡುತ್ತಿದ್ದರೆ, ನಮ್ಮ ಕ್ಯಾಮೆರಾಗಳು ಕ್ಲಿಕ್ ಮಾಡುತ್ತಿವೆ' ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದ್ದು, #AsiaCup2022 ಹಾಗೂ #AsiaCup ಎನ್ನುವ ಟ್ಯಾಗ್ ಕೂಡ ನೀಡಿದೆ. ಈ ಇನ್ಸ್‌ಟಾಗ್ರಾಮ್ ಪೋಸ್ಟ್‌ನಲ್ಲಿ ಒಟ್ಟು 10 ಚಿತ್ರಗಳಿವೆ. ಇದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ, ಸಾಮಾನ್ಯವಾಗಿ ಬಿಸಿಸಿಐ ಒಂದೇ ಬಾರಿ ಒಂದೇ ಪೋಸ್ಟ್‌ನಲ್ಲಿ 10 ಚಿತ್ರಗಳನ್ನು ಪ್ರಕಟಿಸುವ ಸಾಧ್ಯತೆ ಬಹಳ ಕಡಿಮೆ. ಪಾಕಿಸ್ತಾನದ ವಿರುದ್ಧ ಭಾನುವಾರದ ಪಂದ್ಯಕ್ಕೂ ಮುನ್ನ ಇಂಥ ಹತ್ತು ಚಿತ್ರಗಳನ್ನು ಪೋಸ್ಟ್ ಮಾಡಿದ್ದು, ಬಹುತೇಕ ಇದು ಪ್ಲೇಯಿಂಗ್ ಇಲೆವೆನ್ ಆಗಿರುವ ಸಾಧ್ಯತೆಯೇ ಹೆಚ್ಚು ಎಂದು ಅಭಿಮಾನಿಗಳು ಅಂದಾಜಿಸಿದ್ದಾರೆ.
ಬಿಸಿಸಿಐ ಪೋಸ್ಟ್ ಮಾಡಿದ ಚಿತ್ರದ ಪ್ರಕಾರ ಹೇಳುವುದಾದರೆ, ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮ ಆರಂಭಿಕರಾಗಿ ಕಣಕ್ಕಿಳಿಯಲಿದ್ದು, ವಿರಾಟ್ ಕೊಹ್ಲಿ ಎಂದಿನಂತೆ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಹಾಗೂ ರಿಷಭ್ ಪಂತ್ ನಂತರದ ಸ್ಥಾನಗಳಲ್ಲಿದ್ದು, ದಿನೇಶ್ ಕಾರ್ತಿಕ್ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯಲಿದ್ದಾರೆ. ಭುವನೇಶ್ವರ್ ಕುಮಾರ್, ಯಜುವೇಂದ್ರ ಚಾಹಲ್, ಅವೇಶ್ ಖಾನ್ ಹಾಗೂ ಆರ್ಶ್‌ದೀಪ್ ಸಿಂಗ್ ಚಿತ್ರಗಳನ್ನು ಹಾಕಲಾಗಿದೆ. ಇದು ಬಹುತೇಕ ಪ್ಲೇಯಿಂಗ್ ಇಲೆವೆನ್ ಆಗಿರಬಹುದು ಎನ್ನುವುದು ಫ್ಯಾನ್ಸ್‌ನ ಅಭಿಮತ. ಇನ್ನೊಂದೆಡೆ, ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಕೇವಲ ಏಕೈಕ ಸ್ಪಿನ್ನರ್ ಜೊತೆ ಭಾರತ ಆಡಲಿಳಿಯಲಿದೆಯೇ ಎನ್ನುವ ಅನುಮಾನವೂ ಕೂಡ ವ್ಯಕ್ತವಾಗಿದೆ.
ರೋಹಿತ್ ಶರ್ಮಾ 'ರಿಯಲ್' ಕ್ಯಾಪ್ಟನ್: ಚಹಲ್ ದಾಂಪತ್ಯದ ಗಾಳಿಸುದ್ದಿಗೆ ಹಿಟ್‌ಮ್ಯಾನ್ ಚಾಟಿ..!
"ಭಾರತ ಮತ್ತು ಪಾಕ್ ನಡುವಿನ ಪಂದ್ಯದ ಪ್ಲೇಯಿಂಗ್ ಇಲೆವೆನ್ ರೀತಿ ಇದು ಕಾಣುತ್ತಿದೆ' ಎಂದು ಇನ್ಸ್‌ಟಾಗ್ರಾಮ್‌ನಲ್ಲಿ ಒಬ್ಬರು ಕಾಮೆಂಟ್ ಮಾಡಿದ್ದಾರೆ. 'ಈ ಚಿತ್ರಗಳ ಮೂಲಕ ಬಿಸಿಸಿಐ ಪ್ಲೇಯಿಂಗ್ ಇಲೆವೆನ್ ಅನ್ನು ಖಚಿತಪಡಿಸಿದೆ' ಎಂದಿದ್ದಾರೆ. ಕೆಲವೊಬ್ಬರು ಇದನ್ನು ತಮಾಷೆ ಮಾಡಿದ್ದು, "ಪ್ಲೇಯಿಂಗ್ ಇಲೆವೆನ್ ಲೀಕ್' ಆಗಿದೆ ಎಂದು ಎಂದು ಬರೆದಿದ್ದಾರೆ. ಬಿಸಿಸಿಐ ನೀವು ಪ್ಲೇಯಿಂಗ್ ಇಲೆವೆನ್ ಅನ್ನು ಬಹಳ ಮುಂಚೆಯೇ ಹೇಳಿದ್ದಕ್ಕೆ ಥ್ಯಾಂಕ್ಸ್ ಎಂದು ಇನ್ನೊಬ್ಬರು ಬರೆದಿದ್ದಾರೆ.
ಸೇಡಿನ ಕದನ: ಇಂಡೋ-ಪಾಕ್ ಪಂದ್ಯಕ್ಕೂ ಮುನ್ನ ಫ್ಯಾನ್ಸ್ ನಡುವೆ ಶುರುವಾಯ್ತು 'ಮೀಮ್ಸ್ ವಾರ್'..!
ಏಷ್ಯಾಕಪ್ ತಂಡದಲ್ಲಿ ಇವರಲ್ಲದೆ, ದೀಪಕ್ ಹೂಡಾ, ರವೀಂದ್ರ ಜಡೇಜಾ, ಆರ್.ಅಶ್ವಿನ್ ಮತ್ತು ರವಿ ಬಿಷ್ಣೋಯಿ ಕೂಡ ಇದ್ದಾರೆ. ಅದರೊಂದಿಗೆ ಶ್ರೇಯಸ್ ಅಯ್ಯರ್, ಅಕ್ಸರ್ ಪಟೇಲ್ ಹಾಗೂ ದೀಪಕ್ ಚಹರ್ ಅನ್ನು ಮೀಸಲು ಪ್ಲೇಯರ್ ಆಗಿಯೂ ಹೆಸರಿಸಲಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ಇದೇ ಸ್ಥಳದಲ್ಲಿ ಪಾಕಿಸ್ತಾನದ ವಿರುದ್ಧ 2021 ಟಿ20 ವಿಶ್ವಕಪ್‌ನಲ್ಲಿ ಎದುರಾದ 10 ವಿಕೆಟ್ ಸೋಲಿಗೆ ಸೇಡು ತೀರಿಸಿಕೊಳ್ಳುವ ಗುರಿಯಲ್ಲಿ ಬಾಬರ್ ಅಜಮ್ ನೇತೃತ್ವದ ತಂಡವನ್ನು ಭಾರತ ಎದುರಿಸಲಿದೆ. ಆ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಭಾರತ ತನ್ನ 2ನೇ ಪಂದ್ಯದಲ್ಲಿ ಅರ್ಹತಾ ಹಂತದಿಂದ ಬಂದ ಹಾಂಕಾಂಗ್ ತಂಡವನ್ನು ಎದುರಿಸಲಿದೆ.