ಚೀನಾ ವಸ್ತು ಪ್ರಚಾರ ಮಾಡಲ್ಲ, ಬಳಸಲ್ಲ; ಪ್ರತಿಜ್ಞೆ ಮಾಡಿದ ಹರ್ಭಜನ್!
ಲಡಾಖ್ ಗಡಿ ಬಿಕ್ಕಟ್ಟಿನ ಬಳಿಕ ಚೀನಾ ವಿರುದ್ಧ ಪ್ರತಿಯೊಬ್ಬ ಭಾರತೀಯ ಆಕ್ರೋಶ ಹೊರಹಾಕುತ್ತಿದ್ದಾನೆ. ಚೀನಿ ವಸ್ತಗಳ ಬಳಕೆಗೆ ಗುಡ್ ಬೈ ಹೇಳುತ್ತಿದ್ದಾನೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗ ಹರ್ಭಜನ್ ಸಿಂಗ್ ಪ್ರತಿಜ್ಞೆ ಮಾಡಿದ್ದಾರೆ. ಭಜ್ಜಿ ಪ್ರತಿಜ್ಞೆ ಕುರಿತ ವಿವರ ಇಲ್ಲಿದೆ.
ಪಂಜಾಬ್(ಜೂ.20): ಲಾಡಾಖ್‌ನಲ್ಲಿ ಚೀನಾ ಸೇನೆ ದಾಳಿಯಿಂದ ಭಾರತೀಯ ಸೇನೆಯ 20 ಯೋಧರು ಹುತಾತ್ಮರಾಗಿದ್ದಾರೆ. ಘಟನೆ ಬಳಿಕ ಮಾತುಕತೆ ನಡೆದರೂ ಚೀನಾ ಮಾತ್ರ ಸುಮ್ಮನೆ ಇರುವಂತೆ ಕಾಣುತ್ತಿಲ್ಲ. ಗ್ಯಾಲ್ವಾನ್ ಬಳಿಕ ಇದೀಗ ಪ್ಯಾಂಗಾಂಗ್ ಸರೋವರ ಗಡಿ ಪ್ರದೇಶದಲ್ಲಿ ಕಿರಿಕ್ ಶುರು ಮಾಡಿದೆ. ಹೀಗಾಗಿ ಚೀನಾಗೆ ತಿರುಗೇಟು ನೀಡಲು ಒತ್ತಾಯ ಕೇಳಿಬರುತ್ತಿದೆ. ಇತ್ತ ಸಾರ್ವಜನಿಕರು ಚೀನಿ ವಸ್ತುಗಳಿಗೆ ಬಹಿಷ್ಕಾರ ಹಾಕುತ್ತಿದ್ದಾರೆ. ಇದರ ನಡುವೆ ಟೀಂ ಇಂಡಿಯಾ ಕ್ರಿಕೆಟಿಗ ಹರ್ಭಜನ್ ಸಿಂಗ್, ಚೀನಿ ವಸ್ತುಗಳಿಂದ ದೂರವಿರುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಭಾರತೀಯ ಸೇನೆ, ಪ್ರಧಾನಿ ಮೋದಿ ವ್ಯಂಗ್ಯವಾಡಿದ CSK ಡಾಕ್ಟರ್ ಅಮಾನತು!
ಚೀನಾ ವಸ್ತುಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಲ್ಲ, ಇಷ್ಟೇ ಅಲ್ಲ ಚೀನಾ ವಸ್ತುಗಳನ್ನು ಬಳಸುವುದಿಲ್ಲ ಎಂದು ಹರ್ಭಜನ್ ಸಿಂಗ್ ಪ್ರತಿಜ್ಞೆ ಮಾಡಿದ್ದಾರೆ. ಚೀನಾ ಹಲವು ವಸ್ತುಗಳ ಪ್ರಚಾರಗಳಿಗೆ ಭಾರತದ ಸೆಲೆಬ್ರೆಟಿಗಳನ್ನು ಬಳಸಿಕೊಳ್ಳಲಾಗುತ್ತದೆ. ಇದೀಗ ಚೀನಾ ದಾಳಿಯಿಂದ ತಾನೂ ಯಾವುದೇ ಚೀನಾ ವಸ್ತುಗಳ ಪ್ರಚಾರ ಅಥವಾ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಭಜ್ಜಿ ಹೇಳಿದ್ದಾರೆ.
ನಮ್ಮ ಭಾರತೀಯ ಸೇನೆಯ ಸಹೋದರ ಮೇಲೆ ದಾಳಿ ಮಾಡಿದ ಚೀನಾದ ಎಲ್ಲಾ ವಸ್ತುಗಳನ್ನು ಬಹಿಷ್ಕರಿಸಬೇಕು. ನಮ್ಮ ಹಣ ಪಡೆದು ನಮ್ಮ ಮೇಲೆ ದಾಳಿ ಮಾಡುವ ದೇಶದ ಎಲ್ಲಾ ವಸ್ತುಗಳನ್ನು ಬಹಿಷ್ಕರಿಸಬೇಕು ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ಭಾರತ ಎಲ್ಲಾ ವಸ್ತುಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ನಮಗೆ ಚೀನಿ ವಸ್ತುಗಳ ಅವಶ್ಯಕತೆ ಇಲ್ಲ. ಪ್ರತಿಯೊಬ್ಬರು ಚೀನಾ ವಸ್ತುಗಳ ಬಳಕೆಗೆ ಗುಡ್ ಬೈ ಹೇಳಬೇಕು ಎಂದಿದ್ದಾರೆ. ಐಪಿಎಲ್ ಟೂರ್ನಿಗೆ ಯಾವುದೇ ಚೀನಾ ಪ್ರಾಯೋಜಕತ್ವ ಬೇಕಿಲ್ಲ. ಎಲ್ಲಾ ಬ್ರ್ಯಾಂಡ್‌ಗಿಂತ ಐಪಿಎಲ್ ಬೆಳೆದು ನಿಂತಿದೆ. ಚೀನಾ ಸೇವೆ ಅಗತ್ಯವಿಲ್ಲ ಎಂದು ಭಜ್ಜಿ ಹೇಳಿದ್ದಾರೆ.