* ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಬಿಸಿಸಿಗೆ ನುಂಗಲಾರದ ತುತ್ತಾದ ವಿರಾಟ್ ಕೊಹ್ಲಿ* ಕಳೆದ 9 ಇನ್ನಿಂಗ್ಸ್​ನಿಂದ ಅರ್ಧಶತಕವನ್ನೂ ದಾಖಲಿಸಿಲ್ಲ ಕಿಂಗ್ ಕೊಹ್ಲಿ* ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಫಾರ್ಮ್‌ ಹೊಂದಿರುವ ವಿರಾಟ್ ಕೊಹ್ಲಿ

ಬೆಂಗಳೂರು(ಜು.21): ಒಬ್ಬ ಚಾಂಪಿಯನ್ ಆಟಗಾರ ಈ ರೀತಿಯ ಕಳಪೆ ಫಾರ್ಮ್​ನಲ್ಲಿರೋದನ್ನ ವಿಶ್ವ ಕ್ರಿಕೆಟ್ ನೋಡುತ್ತಿರುವುದು ಇದೇ ಮೊದಲು. ಈ ಹಿಂದೆ ಕ್ರಿಕೆಟ್ ಜಗತ್ತಿ​ನಲ್ಲಿ ಘಟಾನುಘಟಿ ಆಟಗಾರರು ಕಳಪೆ ಫಾರ್ಮ್​ನಿಂದ ಬಳಲಿದ್ದರು. ಅದು ಕೇವಲ ಮೂರ್ನಾಲ್ಕು ಸರಣಿಗಳಿಗೆ ಸೀಮಿತ. ಆದ್ರೆ ವಿರಾಟ್ ಕೊಹ್ಲಿ, ಫಾರ್ಮ್​ ಕಳೆದುಕೊಂಡು ಮೂರು ವರ್ಷಗಳು ಆಗ್ತಾ ಬರ್ತಿದೆ, ಅವರ ಬ್ಯಾಟಿಂಗ್​ನಿಂದ ಶತಕ ಬರದೆ ಸಾವಿರ ದಿನಗಳು ಕಳೆದಿವೆ. ಈ ಪಂದ್ಯದಲ್ಲಿ ಸೆಂಚುರಿ ಹೊಡೆಯುತ್ತಾರೆ, ಆ ಪಂದ್ಯದಲ್ಲಿ ಹೊಡೆಯುತ್ತಾರೆ ಅನ್ನೋ ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದೆ ಬಂತು. ಅವರು ಮಾತ್ರ ಸೆಂಚುರಿ ಹೊಡೆಯುತ್ತಿಲ್ಲ. ಇಂಗ್ಲೆಂಡ್​ನಲ್ಲೂ ವಿಫಲರಾದ್ರು. 

ಕಳೆದ 9 ಇನ್ನಿಂಗ್ಸ್​ನಿಂದ ಅರ್ಧಶತಕವನ್ನೂ ದಾಖಲಿಸಿಲ್ಲ: ಸೆಂಚುರಿ ಸೈಡಿಗಿರಲಿ, ಭಾರತದ ಪರ ಕೊಹ್ಲಿ ಕಳೆದ 9 ಇನ್ನಿಂಗ್ಸ್​ನಿಂದ ಹಾಫ್ ಸೆಂಚುರಿಯನ್ನೂ ದಾಖಲಿಸಿಲ್ಲ. ಈಗ BCCI ಟಾರ್ಗೆಟ್ ಬೇರೆ ನೀಡಿದೆ. ಆಗಸ್ಟ್ 26ರಿಂದ ಆರಂಭವಾಗೋ ಏಷ್ಯಾಕಪ್​ನಲ್ಲಿ ರನ್ ಗಳಿಸಿದರೆ ಅಕ್ಟೋಬರ್​-ನವೆಂಬರ್​ನಲ್ಲಿ ನಡೆಯುವ ಐಸಿಸಿ ಟಿ20 ವಿಶ್ವಕಪ್​ಗೆ ಆಯ್ಕೆ. ಇಲ್ಲದಿದ್ದರೆ ಡ್ರಾಪ್ ಅಂತ. ಹಾಗಾಗಿ ವೆಸ್ಟ್ ಇಂಡೀಸ್ ಟೂರ್​ನಿಂದ ರೆಸ್ಟ್ ಪಡೆದಿರೋ ಕಿಂಗ್ ಕೊಹ್ಲಿ, ಆಗಸ್ಟ್ 1ರಿಂದ ಪ್ರಾಕ್ಟೀಸ್ ಆರಂಭಿಸಲಿದ್ದಾರೆ. ಆದರೆ ಕೊಹ್ಲಿಯನ್ನ ಟಿ20 ವಿಶ್ವಕಪ್ ಟೀಮ್​ನಿಂದ ಡ್ರಾಪ್ ಮಾಡೋ ತಾಕತ್ತು ಬಿಸಿಸಿಐಗೆ ಇದೆಯಾ..? ಕೊಹ್ಲಿ ಇಲ್ಲದೆ ಆಸ್ಟ್ರೇಲಿಯಾಗೆ ಭಾರತ ಕ್ರಿಕೆಟ್ ತಂಡವನ್ನ ಕರೆದುಕೊಂಡು ಹೋಗೋ ಧೈರ್ಯವನ್ನು ಕೋಚ್ ರಾಹುಲ್ ದ್ರಾವಿಡ್ ಮತ್ತು ಕ್ಯಾಪ್ಟನ್ ರೋಹಿತ್ ಶರ್ಮಾ ಮಾಡ್ತಾರಾ..? ಈ ಪ್ರಶ್ನೆ ಹುಟ್ಟಿಕೊಳ್ಳಲು ಕಾರಣ ಏನ್ ಗೊತ್ತಾ..?

ಟಿ20 ವಿಶ್ವಕಪ್​ನಲ್ಲಿ ರನ್ ಧೀರ ಕೊಹ್ಲಿ: ಯೆಸ್, ಇದೊಂದೇ ಕಾರಣಕ್ಕೆ ಕಿಂಗ್ ಕೊಹ್ಲಿಯನ್ನ ಟಿ20 ವರ್ಲ್ಡ್​ಕಪ್ ಟೀಮ್​ನಿಂದ ಡ್ರಾಪ್ ಮಾಡಲು ಬಿಸಿಸಿಐ ಮತ್ತು ಟೀಮ್​ ಮ್ಯಾನೇಜ್​ಮೆಂಟ್ ಚಿಂತಿಸುತ್ತಿರುವುದು. 4 ವಿಶ್ವಕಪ್ ಟೂರ್ನಿಗಳನ್ನ ಆಡಿರೋ ಕೊಹ್ಲಿ, ನಾಲ್ಕರಲ್ಲೂ ರನ್ ಹೊಳೆ ಹರಿಸಿದ್ದಾರೆ. ಏಕಾಂಗಿಯಾಗಿ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಕಳೆದ ವಿಶ್ವಕಪ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ವಿಫಲರಾಗಿದ್ದು ಬಿಟ್ಟರೆ ಐಸಿಸಿ ಟೂರ್ನಿಯಲ್ಲಿ ಕೊಹ್ಲಿಯನ್ನ ಕಂಟ್ರೋಲ್ ಮಾಡಲು ಯಾವ ತಂಡದಿಂದಲೂ ಸಾಧ್ಯವಾಗಿಲ್ಲ. 4 ವಿಶ್ವಕಪ್ ಟೂರ್ನಿಗಳಲ್ಲಿ 19 ಇನ್ನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ, 76.81ರ ಸರಾಸರಿಯಲ್ಲಿ 845 ರನ್ ಹೊಡೆದಿದ್ದಾರೆ. 129.60ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟಿಂಗ್ ಮಾಡಿ 10 ಅರ್ಧಶತಕಗಳನ್ನೂ ದಾಖಲಿಸಿದ್ದಾರೆ. 8 ಪಂದ್ಯಗಳಲ್ಲಿ ಅಜೇಯರಾಗಿ ಉಳಿದಿದ್ದಾರೆ.

ಬಿಸಿಸಿಐ ವಿರಾಟ್ ಕೊಹ್ಲಿಯನ್ನು ಜಿಂಬಾಬ್ವೆ ವಿರುದ್ಧ ಕಣಕ್ಕಿಳಿಸಲು ಮುಂದಾಗುತ್ತಿರುವುದೇಕೆ..?

ಈ ಟ್ರ್ಯಾಕ್ ರೆಕಾರ್ಡ್​ ನೋಡಿದ ಯಾರೇ ಆಗಲಿ, ಕೊಹ್ಲಿಯನ್ನ ವಿಶ್ವಕಪ್ ಟೀಮ್​ನಿಂದ ಡ್ರಾಪ್ ಮಾಡಲು ಸಾಧ್ಯವೇ ಇಲ್ಲ. ಹೌದು, ಕೊಹ್ಲಿ ಎರಡುವರೆ ವರ್ಷದಿಂದ ಶತಕ ಹೊಡೆದಿಲ್ಲ ನಿಜ. ಕಳೆದ 9 ಇನ್ನಿಂಗ್ಸ್​ನಿಂದ ಅರ್ಧಶತಕವನ್ನೂ ಬಾರಿಸಿಲ್ಲ ನಿಜ. ಚಾಂಪಿಯನ್ ಆಟಗಾರ ಫಾರ್ಮ್​ಗೆ ಮರಳಲು ಜಸ್ಟ್ ಒಂದು ಇನ್ನಿಂಗ್ಸ್ ಸಾಕು. ಆ ಒಂದು ಇನ್ನಿಂಗ್ಸ್ ಏಷ್ಯಾಕಪ್​ನಲ್ಲಿ ಬಂದರೆ ಇಂದು ವಿರಾಟ್ ಕೊಹ್ಲಿ ವಿರುದ್ಧ ಮಾತನಾಡುತ್ತಿರುವವವರು ಸೈಲೆಂಟ್ ಆಗಿ ಹೋಗ್ತಾರೆ. ಜಸ್ಟ್ ಒಂದು ಬೆಸ್ಟ್ ಇನ್ನಿಂಗ್ಸ್​ಗಾಗಿ ಕೊಹ್ಲಿ ಸಹ ಕಾಯ್ತಿದ್ದಾರೆ.