ಟೀಂ ಇಂಡಿಯಾ ಕೋಚಿಂಗ್ ಸ್ಥಾನದಿಂದ ಇಬ್ಬರು ಹೊರನಡೆದಿದ್ದಾರೆ. ಇದು ಕೋಲಾಹಲಕ್ಕೆ ಕಾರಣವಾಗಿದೆ. ಇತ್ತೀಚಿನ ಮನಸ್ತಾಪ, ಜಟಾಪಟಿಗಳ ನಡುವೆ ಈ ನಿರ್ಧಾರ ಭಾರಿ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಬಿಸಿಸಿಐ ಮೌನ ಮುರಿದಿದೆ.

ಮುಂಬೈ (ಜು.29) ಸತತ ಸೋಲಿನಿಂದ ಕಂಗೆಟ್ಟಿದ್ದ ಟೀಂ ಇಂಡಿಯಾಗೆ ಜಿಂಬಾಬ್ವೆ ವಿರುದ್ದ ಸರಣಿ ರಿಲೀಫ್ ನೀಡಿದೆ. ಆದರೆ ಸಮಸ್ಯೆಗಳು, ಮನಸ್ತಾಪಗಳು, ಜಟಾಪಟಿಗಳು ಮುಂದುವರಿದಿದೆ. ವಿವಿಎಸ್ ಲಕ್ಷ್ಮಣ್ ಕೋಚಿಂಗ್‌ನಲ್ಲಿ ಭಾರತ ಗೆದ್ದಿದೆ, ಗೌತಮ್ ಗಂಭೀರ್ ಕೋಚಿಂಗ್‌ನಲ್ಲಿ ಸೋಲು ಕಾಣುತ್ತಿದೆ ಅನ್ನೋ ಚರ್ಚೆಗಳು ಶುರುವಾಗಿದೆ. ಗೌತಮ್ ಗಂಭೀರ್ ಕೋಚಿಂಗ್‌ ವಿರುದ್ದ ಸೋಶಿಯಲ್ ಮೀಡಿಯಾಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಿದೆ. ಈ ಬೆಳವಣಿಗೆ ನಡುವೆ ಟೀಂ ಇಂಡಿಯಾ ಕೋಚಿಂಗ್‌ನಿಂದ ಇಬ್ಬರು ಹೊರನೆಡಿದಿದ್ದಾರೆ. ಅಸಿಸ್ಟೆಂಟ್ ಕೋಚ್ ರ್ಯಾನ್ ಟೆನ್‌ಡೊಶೆಟ್ ಹಾಗೂ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಟೀಂ ಇಂಡಿಯಾ ತೊರೆದಿದ್ದಾರೆ. ಈ ಬೆಳವಣಿಗೆ ಭಾರಿ ಕೋಲಾಹಲ ಸೃಷ್ಟಿಸುತ್ತಿದ್ದಂತೆ ಬಿಸಿಸಿಐ ಮೌನ ಮುರಿದಿದೆ.

ಬಿಸಿಸಿಐ ಹೇಳಿದ್ದೇನು?

ಇಬ್ಬರು ಕೋಚ್ ರಾಜೀನಾಮೆ ನೀಡಿ ತಂಡದಿಂದ ಹೊರ ನಡೆದಿದ್ದಾರೆ. ಜೊತೆಗೆ ಐಪಿಎಲ್ ಫ್ರಾಂಚೈಸಿ ಸೇರಿಕೊಂಡಿದ್ದಾರೆ. ತಂಡದೊಳಗಿನ ಮನಸ್ತಾಪ, ಕೋಚ್ ಜೊತೆಗಿನ ಜಟಾಪಟಿಗಳೇ ಕಾರಣ ಎಂಬ ಆರೋಪಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿಬಂದಿತ್ತು. ಈ ಬೆಳವಣಿಗೆಯಿಂದ ಬಿಸಿಸಿಐ ಸ್ಪಷ್ಟನೆ ನೀಡಿದೆ. ರ್ಯಾನ್ ಟೆನ್‌ಡೊಶೆಟ್ ಹಾಗೂ ಟಿ ದಿಲೀಪ್ ಕೋಚಿಂಗ್ ಅವಧಿ ಮುಗಿದಿದೆ. ಇಬ್ಬರು ರಾಜೀನಾಮೆ ನೀಡಿಲ್ಲ. ಅವಧಿ ಮತ್ತೆ ವಿಸ್ತರಣೆ ಮಾಡುವ ಉದ್ದೇಶಿ ಬಿಸಿಸಿಐಗೆ ಇರಲಿಲ್ಲ.ಅವಧಿ ಮುಗಿಯುತ್ತಿದ್ದಂತೆ ತೆರಳಿದ್ದಾರೆ. ರಾಜೀನಾಮೆ ನೀಡಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಸೋಲಿಗೆ ಕೋಚ್ ತಲೆದಂಡ ಮಾಡಲಾಗಿದೆ ಅನ್ನೋ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಬಿಸಿಸಿಐ, ಯಾರಿಂದಲೂ ರಾಜೀನಾಮೆ ಪಡೆಯಲಿಲ್ಲ. ಯಾರ ತಲೆದಂಡವೂ ಮಾಡಿಲ್ಲ. ಅವಧಿ ಮುಗಿದಿದೆ ಅಷ್ಟೇ. ಹೆಚ್ಚುವರಿ ಅವಧಿ ಮುಗಿದಿದೆ. ಹೊಸ ಕೋಚ್‌ಗಳ ನೇಮಕ ಪ್ರಕ್ರಿಯೆ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದು ಬಿಸಿಸಿಐ ಹೇಳಿದೆ.

ಶ್ರೀಲಂಕಾ ಪ್ರವಾಸಕ್ಕೆ ಹೊಸ ಕೋಚ್

ಭಾರತ ತಂಡದ ಶ್ರೀಲಂಕಾ ಪ್ರವಾಸಕ್ಕೆ ಹೊಸ ಕೋಚ್ ನೇಮಕಗೊಳ್ಳಲಿದ್ದಾರೆ. ಈಗಗಾಲೆ ಕೆಲ ಅರ್ಜಿಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ಟೀಂ ಇಂಡಿಯಾ ಮುಂದಿನ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಕೋಚ್ ಆಯ್ಕೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ಬಿಸಿಸಿಐ ಹೇಳಿದೆ.

ಗೌತಮ್ ಗಂಭೀರ್ ಆಪ್ತನಾಗಿರುವ ರ್ಯಾನ್ ಟೆನ್‌ಡೊಶೆಟ್ 2024ರಲ್ಲಿ ಕೆಕೆಆಕ್ ತಂಡದ ಕೋಚಿಂಗ್ ಜವಾಬ್ದಾರಿ ತೊರೆದು ಟೀಂ ಇಂಡಿಯಾ ಸೇರಿಕೊಂಡಿದ್ದರು. ಇದೀಗ ಟೀಂ ಇಂಡಿಯಾದಿಂದ ಅವಧಿ ಮುಗಿಸಿ ಹೊರಬಂದಿರುವ ರ್ಯಾನ್ ಟೆನ್‌ಡೊಶೆಟ್ ಕೆಕೆಆರ್ ಕೋಚಿಂಗ್ ಸೇರಿಕೊಂಡಿದ್ದಾರೆ. 2027ರ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ಜೊತೆ ಕೆಲಸ ಮಾಡಲಿದ್ದಾರೆ.

ಜಿಂಬಾಬ್ವೆ ವಿರುದ್ದದ ಟಿ20 ಸರಣಿಗೆ ಗೌತಮ್ ಗಂಭೀರ್ ಸೇರಿದಂತೆ ಖಾಯಂ ಕೋಚ್ ಹಾಗೂ ಸ್ಟಾಫ್‌ಗಳಿಗೆ ವಿಶ್ರಾಂತಿ ನೀಡಲಾಗಿತ್ತು. ವಿವಿಎಸ್ ಲಕ್ಷ್ಮಣ್ ಪ್ರಧಾನ ಕೋಚ್ ಜವಾಬ್ದಾರಿ ವಹಿಸಿಕೊಂಡಿದ್ದರು. ಲಕ್ಷ್ಮಣ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ 3 ಪಂದ್ಯಗಳನ್ನು ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡಿತ್ತು. ಇದಕ್ಕೂ ಮುನ್ನ ನಡೆದ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ದದ ಸರಣಿಯಲ್ಲಿ ಟೀಂ ಇಂಡಿಯಾ ಸೋಲು ಕಂಡಿತ್ತು. ಟಿ20 ಹಾಗೂ ಏಕದಿನ ಎರಡರಲ್ಲೂ ಮುಗ್ಗರಿಸಿತ್ತು.