ಐಪಿಎಲ್ ಹಣೆಬರಹ ಇಂದು ನಿರ್ಧಾರ?
ಸೆಪ್ಟೆಂಬರ್‌ನಿಂದ ನವೆಂಬರ್ ವರೆಗೂ ಐಪಿಎಲ್ ನಡೆಸಲು ಬಿಸಿಸಿಐ ಚಿಂತನೆ ನಡೆಸಿದ್ದು, ಟೂರ್ನಿ ವಿದೇಶಕ್ಕೆ ಸ್ಥಳಾಂತರಗೊಳ್ಳುವುದು ಬಹುತೇಕ ಖಚಿತವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಜು.17): 2020ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಟೂರ್ನಿಯ ಭವಿಷ್ಯ ಶುಕ್ರವಾರ ನಿರ್ಧಾರವಾಗುವ ಸಾಧ್ಯತೆ ಇದೆ. ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆ ಆನ್‌ಲೈನ್‌ನಲ್ಲಿ ನಡೆಯಲಿದ್ದು, ಟೂರ್ನಿ ಆಯೋಜನೆ ಸೇರಿದಂತೆ ಒಟ್ಟು 11 ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ.
ಸೆಪ್ಟೆಂಬರ್‌ನಿಂದ ನವೆಂಬರ್ ವರೆಗೂ ಐಪಿಎಲ್ ನಡೆಸಲು ಬಿಸಿಸಿಐ ಚಿಂತನೆ ನಡೆಸಿದ್ದು, ಟೂರ್ನಿ ವಿದೇಶಕ್ಕೆ ಸ್ಥಳಾಂತರಗೊಳ್ಳುವುದು ಬಹುತೇಕ ಖಚಿತವಾಗಿದೆ. ಇದೇ ವೇಳೆ ರಣಜಿ ಟ್ರೋಫಿ ಸೇರಿದಂತೆ ದೇಸಿ ಪಂದ್ಯಾವಳಿಗಳನ್ನು ನಡೆಸುವುದು, ಪ್ರಯೋಜಕತ್ವ ಗುತ್ತಿಗೆ ನವೀಕರಣ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ನಿರ್ಧರಿಸಲಾಗುವುದು ಎನ್ನಲಾಗಿದೆ.
ಭಾರತ-ಇಂಗ್ಲೆಂಡ್ ಸರಣಿ ಮುಂದೂಡಿಕೆ..! IPL ನಡೆಯೋದು ಪಕ್ಕಾ..?
ಬಿಸಿಸಿಐ ಈಗಾಗಲೇ ಕೇಂದ್ರೀಯ ಗುತ್ತಿಗೆ ಹೊಂದಿರುವ ಆಟಗಾರರಿಗೆ ಆರು ವಾರಗಳ ಕಾಲ ದುಬೈನಲ್ಲಿ ತರಭೇತಿ ಆಯೋಜಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಇದರ ಜತೆಗ ಭಾರತದಲ್ಲಿ ಈ ವರ್ಷ ಐಪಿಎಲ್ ಆಯೋಜಿಸಲು ಸಾಧ್ಯವಾಗದಿದ್ದರೆ, ಬಿಸಿಸಿಐ ಪಾಲಿಗೆ ದುಬೈ ಮೊದಲ ಆಯ್ಕೆ ಆಗಿರಲಿದೆ ಎನ್ನಲಾಗಿದೆ.