Asianet Suvarna News Asianet Suvarna News

BCCI Annual General Meeting: ದಕ್ಷಿಣ ಆಫ್ರಿಕಾ ಪ್ರವಾಸ ಬಗ್ಗೆ ಮಹತ್ವದ ಚರ್ಚೆ..!

* ಕೋಲ್ಕತದಲ್ಲಿಂದು ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆ

* ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದ ಬಗ್ಗೆ ಮಹತ್ವದ ಚರ್ಚೆ ಸಾಧ್ಯತೆ

* ಟೀಂ ಇಂಡಿಯಾದ ಭವಿಷ್ಯದ ಸರಣಿಗಳ ಬಗ್ಗೆ ಸಭೆಯಲ್ಲಿ ಚರ್ಚೆ

BCCI Annual General Meeting Likely To Discuss Fate Of India Tour To South Africa Says Report kvn
Author
Bengaluru, First Published Dec 4, 2021, 10:03 AM IST

ಕೋಲ್ಕತ(ಡಿ.04): ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ)ಯ (BCCI) 90ನೇ ವಾರ್ಷಿಕ ಸಾಮಾನ್ಯ ಸಭೆ (Annual General Meeting) ಶನಿವಾರ ನಡೆಯಲಿದ್ದು, ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದ (Indian Tour of South Africa) ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಟೀಂ ಇಂಡಿಯಾದ ಭವಿಷ್ಯದ ಸರಣಿಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಇದರ ಜೊತೆಗೆ ದ.ಆಫ್ರಿಕಾ ಪ್ರವಾಸದ ಬಗ್ಗೆಯೂ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. 

ಆಫ್ರಿಕಾ ಭಾಗದಲ್ಲಿ ಈಗಾಗಲೇ ಕೋವಿಡ್‌ ಹೊಸ ರೂಪಾಂತರಿ ಒಮಿಕ್ರೋನ್‌ (COVID-19 Omicron variant) ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಹಲವು ದೇಶಗಳು ಅಲ್ಲಿಗೆ ಸಂಚಾರ ನಿರ್ಬಂಧಿಸಿವೆ. ಹೀಗಾಗಿ ಭಾರತದ ಆಟಗಾರರು ದ.ಆಫ್ರಿಕಾ ಪ್ರವಾಸ ಕೈಗೊಳ್ಳಬೇಕೇ? ಬೇಡವೇ ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಪ್ರವಾಸ ಕೈಗೊಳ್ಳಲು ಕೇಂದ್ರ ಸರ್ಕಾರದ ಅನುಮತಿಗಾಗಿ ಕಾಯುತ್ತಿರುವ ಬಿಸಿಸಿಐ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬಹುದು ಎನ್ನಲಾಗಿದೆ. ಡಿಸೆಂಬರ್ 9ರಂದು ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಬೇಕಿದ್ದು, ಡಿ.17ರಿಂದ 3 ಟೆಸ್ಟ್‌, 3 ಏಕದಿನ ಹಾಗೂ 4 ಟಿ20 ಪಂದ್ಯಗಳನ್ನು ಆಡಬೇಕಿದೆ.

ಅಹಮದಾಬಾದ್‌ ಭವಿಷ್ಯ ನಿರ್ಧರಿಸಲು ಸಮಿತಿ

ನವದೆಹಲಿ: ಬೆಟ್ಟಿಂಗ್‌ ಕಂಪೆನಿಗಳಲ್ಲಿ ಹಣ ಹೂಡಿಕೆ ಮಾಡಿರುವ ಸಿವಿಸಿ ಕ್ಯಾಪಿಟಲ್ಸ್‌ (CVC Capitals) ಕಂಪೆನಿಯು ಖರೀದಿಸಿರುವ ಐಪಿಎಲ್‌ನ ಅಹಮದಾಬಾದ್‌ ತಂಡದ (Ahmedabad Franchise) ಭವಿಷ್ಯ ನಿರ್ಧರಿಸಲು 4 ಮಂದಿಯ ಸ್ವತಂತ್ರ ಸಮಿತಿಯನ್ನು ರಚಿಸಲಾಗಿದೆ. ಶುಕ್ರವಾರ ನಡೆದ ಐಪಿಎಲ್‌ ಆಡಳಿತ ಮಂಡಳಿ ಸಭೆಯಲ್ಲಿ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯು ಸಿವಿಸಿ ಐಪಿಎಲ್‌ ತಂಡದ ಮಾಲಿಕತ್ವ ವಹಿಸಿಕೊಳ್ಳಲು ಅರ್ಹತೆ ಹೊಂದಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಿದ್ದು, ಶೀಘ್ರದಲ್ಲೇ ವರದಿ ಸಲ್ಲಿಸಲಿದೆ ಎಂದು ಗೊತ್ತಾಗಿದೆ.

ದ.ಆಫ್ರಿಕಾ ‘ಎ’-ಭಾರತ ‘ಎ’ ಟೆಸ್ಟ್‌ ಡ್ರಾ

ಬ್ಲೂಮ್‌ಫೌಂಟೇನ್‌: ದಕ್ಷಿಣ ಆಫ್ರಿಕಾ 'ಎ' ಹಾಗೂ ಭಾರತ ‘ಎ’ (India A) ತಂಡಗಳ ನಡುವಿನ 2ನೇ ಅನಧಿಕೃತ ಟೆಸ್ಟ್‌ (Unofficial Test) ಡ್ರಾಗೊಂಡಿದೆ. ಗೆಲುವಿಗೆ 234 ರನ್‌ ಗುರಿ ಪಡೆದಿದ್ದ ಭಾರತ 3 ವಿಕೆಟ್‌ ನಷ್ಟಕ್ಕೆ 155 ರನ್‌ ಗಳಿಸಿದ್ದಾಗ ಪಂದ್ಯ ಡ್ರಾಗೊಳಿಸಲಾಯಿತು. ಅಭಿಮನ್ಯ ಈಶ್ವರನ್‌ ಹಾಗೂ ಹನುಮ ವಿಹಾರಿ ತಲಾ ಅರ್ಧಶತಕ ಸಿಡಿಸಿದರು. ಮೊದಲ ಟೆಸ್ಟ್‌ ಪಂದ್ಯ ಕೂಡಾ ಡ್ರಾನಲ್ಲಿ ಅಂತ್ಯಗೊಂಡಿತ್ತು.

ವಿಂಡೀಸ್‌ ವಿರುದ್ಧ ಟೆಸ್ಟ್‌ ಸರಣಿ ಗೆದ್ದ ಶ್ರೀಲಂಕಾ

ಗಾಲೆ: ಸ್ಪಿನ್ನರ್‌ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ಆತಿಥೇಯ ಶ್ರೀಲಂಕಾ (Sri Lanka Cricket) ತಂಡ ವೆಸ್ಟ್‌ ಇಂಡೀಸ್‌ ವಿರುದ್ಧದ 2ನೇ ಟೆಸ್ಟ್‌ ಪಂದ್ಯದಲ್ಲಿ 164 ರನ್‌ ಗೆಲುವು ಸಾಧಿಸಿದೆ. ಇದರೊಂದಿಗೆ 2 ಟೆಸ್ಟ್‌ಗಳ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತು. 

Ind vs NZ Mumbai Test: ಮಯಾಂಕ್‌ ಅಗರ್‌ವಾಲ್ ಶತಕ, ಬೃಹತ್ ಮೊತ್ತದತ್ತ ಭಾರತ

ಗೆಲುವಿಗೆ 297 ರನ್‌ ಗುರಿ ಪಡೆದಿದ್ದ ವಿಂಡೀಸ್‌ 132 ರನ್‌ಗೆ ಆಲೌಟಾಯಿತು. ಲಸಿತ್‌ ಎಂಬುಲ್ದೇನಿಯಾ ಹಾಗೂ ರಮೇಶ್‌ ಮೆಂಡಿಸ್‌ ತಲಾ 5 ವಿಕೆಟ್‌ ಗೊಂಚಲು ಪಡೆದರು. 4ನೇ ದಿನದಂತ್ಯಕ್ಕೆ 8 ವಿಕೆಟ್‌ ನಷ್ಟಕ್ಕೆ 328 ರನ್‌ ಕಲೆ ಹಾಕಿದ್ದ ಲಂಕಾ, 5ನೇ ದಿನ 345 ರನ್‌ಗೆ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.

ಸ್ಕೋರ್‌: 
ಲಂಕಾ 204/10 ಮತ್ತು 345/9 ಡಿ.
ವಿಂಡೀಸ್‌ 253/10 ಮತ್ತು 132/10

Follow Us:
Download App:
  • android
  • ios