ಟ್ರೋಫಿ ಗೆದ್ದ ಟೀಂ ಇಂಡಿಯಾಗೆ ಬಿಸಿಸಿಐ ಗಿಫ್ಟ್, 125 ಕೋಟಿ ರೂ ಬಹುಮಾನ ಮೊತ್ತ ಘೋಷಿಸಿದ ಜಯ್ ಶಾ!

ಟಿ20 ವಿಶ್ವಕಪ್ ಟ್ರೋಫಿ ಗೆದ್ದ ಟೀಂ ಇಂಡಿಯಾಗೆ ಬಿಸಿಸಿಐ ಭರ್ಜರಿ ಗಿಫ್ಟ್ ನೀಡಿದೆ. ಐಸಿಸಿ ಬಹುಮಾನ ಮೊತ್ತ ಸುಮಾರು 20 ಕೋಟಿ ಪಡೆದಿರುವ ಟೀಂ ಇಂಡಿಯಾಗೆ ಇದೀಗ ಜಯ್ ಶಾ, 125 ಕೋಟಿ ರೂಪಾಯಿ ಬಹುಮಾನ ಮೊತ್ತ ಘೋಷಿಸಿದ್ದಾರೆ.
 

BCCI announces rs 125 crore prize money to team india for lifting t20 world cup trophy ckm

ಮುಂಬೈ(ಜೂ.30)  ಐಸಿಸಿ ಟಿ20 ವಿಶ್ವಕಪ್ ಟ್ರೋಫಿ ಗೆದ್ದ ಟೀಂ ಇಂಡಿಯಾ ಇತಿಹಾಸ ಬರೆದಿದೆ. ಐಸಿಸಿ ಟ್ರೋಫಿ ಬರಕ್ಕೆ ಕೊನೆಗೂ ಪೂರ್ಣವಿರಾಮ ಹಾಕಿ ಹೊಸ ಅಧ್ಯಾಯ ಆರಂಭಿಸಿದೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಬಾರ್ಬಡೋಸ್‌ನಲ್ಲಿ ಸೌತ್ ಆಫ್ರಿಕಾ ಮಣಿಸಿ ಟ್ರೋಫಿ ಗೆದ್ದುಕೊಂಡಿದೆ. ಟ್ರೋಫಿ ಗೆದ್ದ ಟೀಂ ಇಂಡಿಯಾ ಐಸಿಸಿ ಕಡೆಯಿಂದ 20 ಕೋಟಿ ರೂಪಾಯಿ ಬಹುಮಾನ ಪಡೆದಿದೆ. ಇದೀಗ ಟ್ರೋಫಿ ಗೆಲುವಿನ ಸಂಭ್ರಮದಲ್ಲಿ ಬಿಸಿಸಿಐ ಭರ್ಜರಿ ಬಹುಮಾನ ಘೋಷಿಸಿದೆ. ಟೀಂ ಇಂಡಿಯಾ ಬರೋಬ್ಬರಿ 125 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ. ಈ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಣೆ ಮಾಡಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿ ಗೆದ್ದ ಟೀಂ ಇಂಡಿಯಾಗೆ 125 ಕೋಟಿ ರೂಪಾಯಿ ಬಹುಮಾನ ಮೊತ್ತ ಘೋಷಿಸಲು ತುಂಬಾ ಸಂತೋಷವಾಗುತ್ತಿದೆ. ಭಾರತ ತಂಡ ಇಡೀ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ, ಅಸಾಧಾರಣ ಪ್ರತಿಭೆ, ಕ್ರೀಡಾ ಸ್ಪೂರ್ತಿ ಪ್ರದರ್ಶಿಸಿದೆ. ಅದ್ಬುತ ಪ್ರದರ್ಶನ ನೀಡಿದ ಆಟಗಾರರು, ತರಬೇತುದಾರರು, ಮಾರ್ಗದರ್ಶಕರು,ಸಹಾಯಕ ಸಿಬ್ಬಂದಿಗಳಿಗೆ ಅಭಿನಂದನೆಗಳು ಎಂದು ಜಯ್ ಶಾ ಎಕ್ಸ್ ಮೂಲಕ ಘೋಷಣೆ ಮಾಡಿದ್ದಾರೆ.  

ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ 3ನೇ ಶಾಕ್, ಅಂತಾರಾಷ್ಟ್ರೀಯ ಟಿ20ಗೆ ಜಡೇಜಾ ವಿದಾಯ!

ಕಳೆದೊಂದು ದಶಕದಿಂದ ಭಾರತ ಐಸಿಸಿ ಟ್ರೋಫಿ ಬರ ಅನುಭವಿಸಿತ್ತು. 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ಕೆಲ ಅವಕಾಶಗಳು ಟೀಂ ಇಂಡಯಾಗೆ ಒಲಿದಿದ್ದರೂ, ಟ್ರೋಫಿ ಭಾಗ್ಯ ಸಿಗಲಿಲ್ಲ. 2023ರ ಏಕದಿನ ವಿಶ್ವಕಪ್ ಫೈನಲ್ ಸೋಲು ಟೀಂ ಇಂಡಿಯಾವನ್ನು ಜರ್ಝರಿತ ಮಾಡಿತ್ತು. ಇದೀಗ ಟಿ20 ವಿಶ್ಪಕಪ್ ಗೆಲ್ಲುವ ಮೂಲಕ ಹೊಸ ಇತಿಹಾಸ ರಚಿಸಿದೆ. 2007ರ ಬಳಿಕ 2024ರಲ್ಲಿ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆಲುವಿನ ಸಾಧನೆ ಮಾಡಿದೆ.

 

 

ಟ್ರೋಪಿ ಗೆದ್ದ ಟೀಂ ಇಂಡಿಯಾ ಐಸಿಸಿ ಬಹುಮಾನ ಮೊತ್ತವಾಗಿ 2.45 ಮಿಲಿಯನ್‌ ಅಮೆರಿಕನ್‌ ಡಾಲರ್‌(ಅಂದಾಜು 20.35 ಕೋಟಿ ರು.) ಸ್ವೀಕರಿಸಿದೆ. ಕಳೆದ ಬಾರಿ ವಿಶ್ವಕಪ್‌ ಗೆದ್ದಿದ್ದ ಇಂಗ್ಲೆಂಡ್ ತಂಡಕ್ಕೆ 1.6 ಮಿಲಿಯನ್‌ ಯುಎಸ್ ಡಾಲರ್‌(ಈಗಿನ ಅಂದಾಜು 13.2 ಕೋಟಿ ರು.) ನಗದು ಬಹುಮಾನ ಪಡೆದಿತ್ತು.  ರನ್ನರ್ ಅಪ್ ಪ್ರಶಸ್ತಿಪಡೆದುಕೊಂಡ ಸೌತ್ ಆಫ್ರಿಕಾ ತಂಡ 10.6 ಕೋಟಿ ರೂಪಾಯಿ ಬಹುಮಾನ ಪಡೆದಿದಿದೆ. ಇನ್ನು  ಸೆಮಿಫೈನಲ್‌ ಪ್ರವೇಶಿಸಿದ ತಂಡಗಳು ತಲಾ ಅಂದಾಜು ₹6.5 ಕೋಟಿ, ಸೂಪರ್‌-8 ಹಂತದಲ್ಲಿ ಹೊರಬಿದ್ದ ತಂಡಗಳು ತಲಾ ಅಂದಾಜು ₹3.17 ಕೋಟಿ ಪಡೆದಿದೆ.

ಟಿ20 ವಿಶ್ವಕಪ್ ವೇಳೆ ಪನೌತಿ ಟೀಕೆಗೆ ಗುರಿಯಾದ MBA ಚಾಯ್‌ವಾಲ ಇದೀಗ ರಿವರ್ಸ್ ಜಿಂಕ್ಸ್ ಹೀರೋ!

Latest Videos
Follow Us:
Download App:
  • android
  • ios