ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿ ಪ್ರಕಟ: ಕೊಹ್ಲಿ, ರೋಹಿತ್, ಬುಮ್ರಾಗೆ A+ ಗ್ರೇಡ್‌

2020-21ನೇ ಸಾಲಿನ ಬಿಸಿಸಿಐ ವಾರ್ಷಿಕ ಗುತ್ತಿಗೆ ನವೀಕರಿಸಿ ಪ್ರಕಟಣೆ ಹೊರಡಿಸಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಹಾಗೂ ರೋಹಿತ್ ಶರ್ಮಾ A+ ಗ್ರೇಡ್‌ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

BCCI announces central contracts for 2020 to 21 season Rohit Bumrah Kohli got A+ Grade kvn

ಮುಂಬೈ(ಏ.16): ಭಾರತ ಪರ ಎಲ್ಲಾ ಮೂರು ಮಾದರಿಯಲ್ಲಿ ಆಡುವ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಹಾಗೂ ಜಸ್‌ಪ್ರೀತ್‌ ಬುಮ್ರಾ, ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ‘ಎ+’ ದರ್ಜೆಯಲ್ಲಿ ಮುಂದುವರಿದಿದ್ದಾರೆ. ಅಕ್ಟೋಬರ್‌ 2020ರಿಂದ ಸೆಪ್ಟೆಂಬರ್‌ 2021ರ ವರೆಗಿನ ಅವಧಿಗೆ ಗುತ್ತಿಗೆ ನವೀಕರಿಸಿ ಗುರುವಾರ(ಏ.16) ಬಿಸಿಸಿಐ ಪಟ್ಟಿ ಪ್ರಕಟಿಸಿತು.

‘ಎ’ ದರ್ಜೆಯಲ್ಲಿ 10, ‘ಬಿ’ ದರ್ಜೆಯಲ್ಲಿ 5 ಹಾಗೂ ‘ಸಿ’ ದರ್ಜೆಯಲ್ಲಿ 10 ಆಟಗಾರರಿದ್ದಾರೆ. ಕರ್ನಾಟಕದ ಕೆ.ಎಲ್‌.ರಾಹುಲ್‌ ‘ಎ’ ದರ್ಜೆಯಲ್ಲಿದ್ದರೆ, ಮಯಾಂಕ್‌ ಅಗರ್‌ವಾಲ್‌ ‘ಬಿ’ ದರ್ಜೆಯಲ್ಲಿ ಸ್ಥಾನ ಪಡೆದಿದ್ದಾರೆ. ‘ಎ+’ ದರ್ಜೆಗೆ ವಾರ್ಷಿಕ 7 ಕೋಟಿ ರುಪಾಯಿ, ‘ಎ’ ದರ್ಜೆಗೆ ವಾರ್ಷಿಕ 5 ಕೋಟಿ ರುಪಾಯಿ, ‘ಬಿ’ ದರ್ಜೆಗೆ ವಾರ್ಷಿಕ 3 ಕೋಟಿ ರುಪಾಯಿ ಹಾಗೂ ‘ಸಿ’ ದರ್ಜೆಗೆ ವಾರ್ಷಿಕ 1 ಕೋಟಿ ರುಪಾಯಿ ವೇತನ ಸಿಗಲಿದೆ. ಇನ್ನು  ಕರ್ನಾಟಕದ ಮತ್ತೋರ್ವ ಆಟಗಾರ ಮನೀಶ್ ಪಾಂಡೆ ಹಾಗೂ ಕೇದಾರ್ ಜಾಧವ್ ಬಿಸಿಸಿಐ ಕೇಂದ್ರ ಗುತ್ತಿಗೆಯಿಂದ ಹೊರಬಿದ್ದಿದ್ದಾರೆ.

ವಿರಾಟ್‌ ಕೊಹ್ಲಿಗೆ ಒಲಿದ ವಿಸ್ಡನ್‌ ದಶಕದ ಕ್ರಿಕೆಟಿಗ ಗೌರವ!

‘ಎ+’: ಕೊಹ್ಲಿ, ರೋಹಿತ್‌, ಬುಮ್ರಾ. 
‘ಎ’: ಅಶ್ವಿನ್‌, ಜಡೇಜಾ, ಪೂಜಾರ, ರಹಾನೆ, ಧವನ್‌, ರಾಹುಲ್‌, ಶಮಿ, ಇಶಾಂತ್‌, ಪಂತ್‌, ಹಾರ್ದಿಕ್‌. 
‘ಬಿ’: ಸಾಹ, ಉಮೇಶ್‌ ಯಾದವ್‌, ಭುವನೇಶ್ವರ್‌, ಶಾರ್ದೂಲ್‌, ಮಯಾಂಕ್‌. 
‘ಸಿ’: ಕುಲ್ದೀಪ್‌, ಸೈನಿ, ದೀಪಕ್‌ ಚಹರ್‌, ಗಿಲ್‌, ವಿಹಾರಿ, ಅಕ್ಷರ್‌, ಶ್ರೇಯಸ್‌ ಅಯ್ಯರ್‌, ವಾಷಿಂಗ್ಟನ್‌, ಚಹಲ್‌, ಸಿರಾಜ್‌.

Latest Videos
Follow Us:
Download App:
  • android
  • ios