2023-24ನೇ ಸಾಲಿನ ದೇಸಿ ಋತುವಿನ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ2019-20ರ ಬಳಿಕ ಮೊದಲ ಬಾರಿ ದೇವಧರ್ ಟ್ರೋಫಿ ಆಯೋಜನೆ2024ರ ಜನವರಿ 5ರಿಂದ ಫೆಬ್ರವರಿ 19ರ ವರೆಗೆ ರಣಜಿ ಲೀಗ್ ಪಂದ್ಯ ಆಯೋಜನೆ
ನವದೆಹಲಿ(ಏ.11): 2023-24ರ ದೇಸಿ ಋುತುವಿನ ವೇಳಾಪಟ್ಟಿಯನ್ನು ಬಿಸಿಸಿಐ ಸಿದ್ಧಪಡಿಸಿದ್ದು ಜೂನ್ 28ಕ್ಕೆ ದುಲೀಪ್ ಟ್ರೋಫಿಯೊಂದಿಗೆ ಋುತು ಆರಂಭಗೊಳ್ಳಲಿದೆ. ಇದೇ ವೇಳೆ 2019-20ರ ಬಳಿಕ ಮೊದಲ ಬಾರಿ ದೇವಧರ್ ಟ್ರೋಫಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ.
6 ವಲಯಗಳ ತಂಡಗಳು ಪಾಲ್ಗೊಳ್ಳುವ ದುಲೀಪ್ ಟ್ರೋಫಿ ಜುಲೈ 16ಕ್ಕೆ ಮುಕ್ತಾಯಗೊಳ್ಳಲಿದ್ದು, ಬಳಿಕ ಜುಲೈ 24ರಿಂದ ಆಗಸ್ಟ್ 3ರ ವರೆಗೆ ದೇವಧರ್ ಟ್ರೋಫಿ ನಡೆಯಲಿದೆ. 2022-23ರ ಇರಾನಿ ಕಪ್ ಅಕ್ಟೋಬರ್ 1ರಿಂದ 5ರ ವರೆಗೆ ನಿಗದಿಯಾಗಿದೆ. ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಅಕ್ಟೋಬರ್ 6ರಿಂದ ನವೆಂಬರ್ 6ರ ವರೆಗೆ ನಡೆಯಲಿದ್ದು, ವಿಜಯ್ ಹಜಾರೆ ಏಕದಿನ ಟೂರ್ನಿ (Vijay Hazare Tournament) ನವೆಂಬರ್ 23ಕ್ಕೆ ಆರಂಭಗೊಂಡು, ಡಿಸೆಂಬರ್ 15ಕ್ಕೆ ಮುಕ್ತಾಯಗೊಳ್ಳಲಿದೆ. ರಣಜಿ ಟ್ರೋಫಿ ಟೂರ್ನಿಯ (Ranji Trophy Tournament) ಲೀಗ್ ಹಂತದ ಪಂದ್ಯಗಳು 2024ರ ಜನವರಿ 5ರಿಂದ ಫೆಬ್ರವರಿ 19ರ ವರೆಗೆ ನಡೆಯಲಿದೆ. ನಾಕೌಟ್ ಹಂತ ಫೆ.23ರಿಂದ ಮಾ.14ರ ವರೆಗೆ ನಡೆಸುವುದಾಗಿ ಬಿಸಿಸಿಐ (BCCI) ತಿಳಿಸಿದೆ.
ಇನ್ನು, ಮಹಿಳೆಯರ ಟಿ20 ಚಾಂಪಿಯನ್‌ಶಿಪ್ ಅಕ್ಟೋಬರ್ 19ರಿಂದ ನವೆಂಬರ್ 9, ಅಂತರ್ ವಲಯ ಟಿ20 ನವೆಂಬರ್ 24ರಿಂದ ಡಿಸೆಂಬ್ 4, ರಾಷ್ಟ್ರೀಯ ಮಹಿಳಾ ಏಕದಿನ 2024ರ ಜನವರಿ 4ರಿಂದ 26ರ ವರೆಗೆ ನಡೆಯಲಿದೆ.
ಪ್ರಸಾರ ಹಕ್ಕು: ಬಿಸಿಸಿಐಗೆ 10,000 ಕೋಟಿ ರುಪಾಯಿ ನಿರೀಕ್ಷೆ!
ಮುಂಬೈ: ಭಾರತದ ದ್ವಿಪಕ್ಷೀಯ ಸರಣಿಗಳ ಮುಂದಿನ 4 ವರ್ಷಗಳ ಅವಧಿಯ ಮಾಧ್ಯಮ ಹಕ್ಕು ಮಾರಾಟ ಮಾಡಲು ಬಿಸಿಸಿಐ ಸಜ್ಜಾಗಿದ್ದು, 10,000 ಕೋಟಿ ರು. ಬಂಪರ್ ನಿರೀಕ್ಷೆಯಲ್ಲಿದೆ. ಈ ಬಗ್ಗೆ ಭಾನುವಾರ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಲಾಗಿದ್ದು, ಮುಂದಿನ ತಿಂಗಳು ಟೆಂಡರ್ ಕರೆಯುವ ಸಾಧ್ಯತೆಯಿದೆ.
ಗ್ಯಾಸ್ ಡೆಲಿವರಿ ಮ್ಯಾನ್ ಪುತ್ರ ರಿಂಕು ಸಿಂಗ್ ಐಪಿಎಲ್ ಸ್ಟಾರ್ ಆಗಿದ್ದು ಹೀಗೆ..
2018ರಲ್ಲಿ 5 ವರ್ಷ ಅವಧಿಗೆ ಡಿಸ್ನಿ-ಸ್ಟಾರ್ ಪ್ರಸಾರ ಹಕ್ಕನ್ನು 6,138 ಕೋಟಿ ರು.ಗೆ ಖರೀದಿಸಿತ್ತು. ಆದರೆ ಈ ಬಾರಿ 4 ವರ್ಷಕ್ಕೆ ಒಪ್ಪಂದ ಮಾಡಿಕೊಳ್ಳಲು ಬಿಸಿಸಿಐ ನಿರ್ಧರಿಸಿದ್ದು, ಟೀವಿ ಹಾಗೂ ಡಿಜಿಟಲ್ ಹಕ್ಕನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಿದೆ ಎಂದು ವರದಿಯಾಗಿದೆ. ಪ್ರಸಾರ ಹಕ್ಕು ಖರೀದಿಗೆ ಡಿಸ್ನಿ ಸ್ಟಾರ್, ವಯಾಕಾಂ 18, ಸೋನಿ-ಝೀ ನಡುವೆ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ.
ಟೆಸ್ಟ್ ವಿಶ್ವಕಪ್ ಫೈನಲ್: ಇಂದು ಕೋಚ್‌ಗಳ ಸಭೆ
ಬೆಂಗಳೂರು: ಭಾರತದ ಅಗ್ರ ಆಟಗಾರರು ಐಪಿಎಲ್‌ನಲ್ಲಿ ಆಡುತ್ತಿದ್ದರೂ, ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ಹಾಗೂ ಉಳಿದ ಕೋಚ್‌ಗಳು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮಂಗಳವಾರದಿಂದ ತಯಾರಿ ಆರಂಭಿಸಲಿದ್ದಾರೆ. ಜೂನ್ 7ರಿಂದ 11ರ ವರೆಗೂ ಲಂಡನ್‌ನ ದಿ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಪ್ರೇಲಿಯಾ ವಿರುದ್ಧ ಸೆಣಸಲಿದೆ.
ಮಂಗಳವಾರ ಇಲ್ಲಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ)ಯಲ್ಲಿ ಗಾಯಗೊಂಡಿರುವ ಪ್ರಮುಖ ಆಟಗಾರರಾದ ಜಸ್‌ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಬದಲಿಗೆ ಯಾರನ್ನು ಆಯ್ಕೆ ಮಾಡಬೇಕು, ಐಪಿಎಲ್‌ನಲ್ಲಿ ಆಡುತ್ತಿರುವ ಆಟಗಾರರ ಕೆಲಸದ ಒತ್ತಡ, ಐಪಿಎಲ್ ವೇಳೆಯೇ ಟೆಸ್ಟ್ ವಿಶ್ವಕಪ್ ಫೈನಲ್‌ಗೆ ನಡೆಸಬೇಕಿರುವ ಸಿದ್ಧತೆ ಬಗ್ಗೆ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ, ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಹಾಗೂ ಇನ್ನಿತರ ಸಹಾಯಕ ಸಿಬ್ಬಂದಿ ಜೊತೆ ಚರ್ಚಿಸಲಿದ್ದಾರೆ. ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಸಹ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
