Asianet Suvarna News Asianet Suvarna News

ಶಕಿಬ್‌ ವಿರುದ್ಧ ಬಿಸಿಬಿ ಕಾನೂನು ಕ್ರಮ

ಬಾಂಗ್ಲಾ ಕ್ರಿಕೆಟ್ ಮಂಡಳಿ ವಿರುದ್ದ ಪ್ರತಿಭಟನೆ ಕೈಗೊಂಡ ಆಲ್ರೌಂಡರ್ ಶಕೀಬ್ ಅಲ್ ಹಸನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಶಕೀಬ್ ವಿರುದ್ಗ ಬಾಂಗ್ಲಾ ಕ್ರಿಕೆಟ್ ಮಂಡಳಿ ಕಾನೂನು ಕ್ರಮಕ್ಕೆ ಮುಂದಾಗಿದೆ.

BCB likely to take legal action against shakib al hasan
Author
Bengaluru, First Published Oct 27, 2019, 12:19 PM IST

ಢಾಕಾ(ಅ.27): ನಾಯಕ ಶಕಿಬ್‌ ಅಲ್‌ ಹಸನ್‌ ವಿರುದ್ಧ ಬಾಂಗ್ಲಾದೇಶ ಕ್ರಿಕೆಟ್‌ ಸಂಸ್ಥೆ(ಬಿಸಿ​ಬಿ) ಕಾನೂನು ಕ್ರಮಕ್ಕೆ ಮುಂದಾ​ಗಿ​ದೆ. ಟೆಲಿಕಾಂ ಸಂಸ್ಥೆ ‘ಗ್ರಾಮೀ​ಣ್‌​ಫೋನ್‌’ ಜೊತೆ ಶಕಿಬ್‌ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಆ ಮೂಲಕ ಶಕಿ​ಬ್‌ ಕೇಂದ್ರ ಗುತ್ತಿಗೆ ನಿಯಮ ಉಲ್ಲಂಘಿಸಿ​ದ್ದಾರೆ. ಹೀಗಾಗಿ ಶಕಿಬ್‌ಗೆ ನೋಟಿಸ್‌ ನೀಡಲಾಗಿದೆ. 

ಇದನ್ನೂ ಓದಿ: ಬಾಂಗ್ಲಾ ಸರಣಿಗೆ ಟೀಂ ಇಂಡಿಯಾ ಪ್ರಕಟ: ಮೂವರು ಕನ್ನಡಿಗರಿಗೆ ಸ್ಥಾನ

ಮಂಗ​ಳ​ವಾರ ಶಕಿಬ್‌ರನ್ನು ತನ್ನ ಪ್ರಚಾರ ರಾಯ​ಭಾ​ರಿ​ಯೆಂದು ಟೆಲಿಕಾಂ ಸಂಸ್ಥೆ ಘೋಷಿ​ಸಿ​ತ್ತು. ಶಕಿಬ್‌ ನೇತೃ​ತ್ವ​ದ​ಲ್ಲಿ ಬಾಂಗ್ಲಾ ಕ್ರಿಕೆ​ಟಿ​ಗ​ರು ವೇತನ, ಸೌಲ​ಭ್ಯಗಳ ಹೆಚ್ಚಳಕ್ಕಾಗಿ ಪ್ರತಿ​ಭ​ಟನೆ ನಡೆ​ಸಿ​ದ್ದ​ರು. ಪ್ರತಿ​ಭ​ಟನೆಯಿಂದ ಪ್ರಥ​ಮ​ದರ್ಜೆ ಕ್ರಿಕೆ​ಟಿ​ಗರು ಲಾಭ ಪಡೆ​ಯ​ಲಿ​ದ್ದಾರೆ. ಆದರೆ ಶಕಿ​ಬ್‌ ಬಿಸಿಬಿ ಕೆಂಗ​ಣ್ಣಿಗೆ ಗುರಿ​ಯಾ​ಗಿ​ದ್ದಾರೆ. 

ಇದನ್ನೂ ಓದಿ: ಭಾರತ vs ಬಾಂಗ್ಲಾ ಟಿ20; ಮೊದಲ ಪಂದ್ಯಕ್ಕೆ ಧೂಳಿನ ಸಮಸ್ಯೆ!

ನ.3 ರಿಂದ ಭಾರತ ಪ್ರವಾಸ ಆರಂಭ​ವಾ​ಗ​ಲಿದ್ದು, ಅ.30ರಂದು ಬಾಂಗ್ಲಾ ತಂಡ ಭಾರತಕ್ಕೆ ಪ್ರಯಾಣ ಬೆಳೆಸಲಿದೆ. 3 ಟಿ20 ಹಾಗೂ 2 ಟೆಸ್ಟ್ ಪಂದ್ಯಕ್ಕಾಗಿ ಬಾಂಗ್ಲಾದೇಶ, ಭಾರತಕ್ಕೆ ಆಗಮಿಸುತ್ತಿದೆ. 

ಭಾರತ vs ಬಾಂಗ್ಲಾದೇಶ ಸರಣಿ ವೇಳಾಪಟ್ಟಿ:
ನ.03, 1ನೇ ಟಿ20, ದೆಹಲಿ
ನ.07, 2ನೇ ಟಿ20, ರಾಜ್‌ಕೋಟ್
ನ.10, 3ನೇ ಟಿ20, ನಾಗ್ಪುರ

ನ.14 ರಿಂದ ನ.18, 1ನೇ ಟೆಸ್ಟ್, ಇಂಧೋರ್
ನ.22 ರಿಂದ ನ.26, 2ನೇ ಟೆಸ್ಟ್, ಕೋಲ್ಕತಾ

Follow Us:
Download App:
  • android
  • ios