ನವ​ದೆ​ಹ​ಲಿ(ಅ.27): ಭಾರತ ಹಾಗೂ ಬಾಂಗ್ಲಾ​ದೇಶ ನಡುವಣ ಟಿ20 ಸರಣಿ ನ.3ರಿಂದ ಆರಂಭ​ವಾ​ಗ​ಲಿದೆ. ಆದರೆ ರಾಷ್ಟ್ರ ರಾಜ​ಧಾ​ನಿಯ ವಾಯು ಮಾಲಿನ್ಯ ಆಯೋ​ಜ​ಕ​ರ ತಲೆ​ನೋವಿಗೆ ಕಾರ​ಣ​ವಾ​ಗಿದೆ. ಇಲ್ಲಿನ ಫಿರೋಜ್‌ ಷಾ ಕೋಟ್ಲಾದಲ್ಲಿ ಮೊದಲ ಟಿ20 ಪಂದ್ಯ ನಡೆ​ಯ​ಲಿದೆ. ಆದರೆ ಇಲ್ಲಿನ ಕಳಪೆ ಗುಣ​ಮ​ಟ್ಟದ ಆಮ್ಲ​ಜ​ನ​ಕ​ದಿಂದ ಆಟ​ಗಾ​ರರು, ಪ್ರೇಕ್ಷ​ಕ​ರಿಗೆ ಸಮ​ಸ್ಯೆ ಉಂಟಾ​ಗುವ ಸಾಧ್ಯ​ತೆ​ಯಿದೆ.

ಇದನ್ನೂ ಓದಿ: ಬಾಂಗ್ಲಾ ಸರಣಿಗೆ ಟೀಂ ಇಂಡಿಯಾ ಪ್ರಕಟ: ಮೂವರು ಕನ್ನಡಿಗರಿಗೆ ಸ್ಥಾನ

ದೆಹಲಿಯ ಅರುಣ್ ಜೇಟ್ಲಿ ಕೀಡಾಂಗಣದಲ್ಲಿ(ಫಿರೋಷ್ ಷಾ ಕೋಟ್ಲಾ ಮೈದಾನ) ಮೊದಲ ಪಂದ್ಯ ಆಯೋಜಿಸಲಾಗಿದೆ. ನವೆಂಬರ್ 3 ರಂದು ಮೊದಲ ಪಂದ್ಯ ನಡೆಯಲಿದೆ. ಆದರೆ ಈಗಾಗಲೇ ದೆಹಲಿಯಲ್ಲಿ ಧೂಳು ಹೆಚ್ಚಾಗಿದ್ದು, ಹಲವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಧೂಳಿನಿಂದ ಸಂಪೂರ್ಣ ದೆಹಲಿ ಮುಳುಹೋಗಿದೆ. ಹೀಗಾಗಿ ಬ್ಯಾಟ್ಸ್‌ಮನ್‌ಗಳಿಗೆ ಬಾಲ್ ಕಾಣದಿರುವ ಸಾಧ್ಯತೆ ಕೂಡ ಹೆಚ್ಚಾಗಿದೆ.

ಇದನ್ನೂ ಓದಿ: ಪ್ರತಿಭಟನೆ ನಿಲ್ಲಿಸಿದ ಬಾಂಗ್ಲಾದೇಶಕ್ಕೆ ಮತ್ತೊಂದು ಶಾಕ್!

ಡಿಸೆಂಬರ್‌ 2017ರ ಟೆಸ್ಟ್‌ನಲ್ಲಿ ಶ್ರೀಲಂಕಾ ಆಟ​ಗಾ​ರ​ರಿಗೆ ಉಸಿ​ರಾಟದ ಸಮಸ್ಯೆ ಎದು​ರಾ​ಗಿದ್ದು, ಅಂದಿನ ಆಮ್ಲ​ಜ​ನ​ಕದ ಗುಣ​ಮ​ಟ್ಟ‘ಬಹಳ ಕಳಪೆ’ ಆಗಿತ್ತು. ಶ್ರೀಲಂಕಾ ಆಟ​ಗಾ​ರರು ಮುಖ​ಗ​ವಚ ಧರಿ​ಸಿ​ ಮೈದಾ​ನಕ್ಕೆ ಇಳಿ​ದಿ​ದ್ದ​ರು. ಆದರೆ ಡೆಲ್ಲಿ ಟಿ20 ರಾತ್ರಿ ನಡೆ​ಯಲಿದ್ದು, ಆಮ್ಲ​ಜ​ನ​ಕದ ಸಮ​ಸ್ಯೆ​ಯಾ​ಗದು ಎಂಬ ನಿರೀ​ಕ್ಷೆಯೂ ಇದೆ.