ಢಾಕ(ಜು.19): ಕೊರೋನಾ ವೈರಸ್ ಹರಡುವಿಕೆ ಹೆಚ್ಚಾಗುತ್ತಿದೆ. ಭಾರತ ಪ್ರಮುಖ ನಗರ, ಹಾಗೂ ಕೆಲ ರಾಜ್ಯಗಳಲ್ಲಿ ಪರಿಸ್ಥಿತಿ ಕೈಮೀರುತ್ತಿದೆ. ಅತ್ತ ಬಾಂಗ್ಲಾದೇಶದಲ್ಲೂ ಕೊರೋನಾ ಆರ್ಭಟ ಹೆಚ್ಚಾಗಿದೆ. ಒಬ್ಬರ ಹಿಂದೆ ಒಬ್ಬರಂತೆ ಬಾಂಗ್ಲಾದೇಶ ಕ್ರಿಕೆಟಿಗರಲ್ಲಿ ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದೀಗ ಬಾಂಗ್ಲಾದೇಶ ಹಿರಿಯ ಆಲ್ರೌಂಡರ್ ಶಕೀಬ್ ಅಲ್ ಹಸನ್ ಕುಟುಂಬಕ್ಕೂ ಕೊರೋನಾ ವಕ್ಕರಿಸಿದೆ.

ಬಾಂಗ್ಲಾ ಕ್ರಿಕೆಟಿಗ ಮಶ್ರಫೆ ಮೊರ್ತಜಾಗೆ ಕೊರೋನಾ ಸೋಂಕು!.

ಶಕೀಬ್ ಅಲ್ ಹಸನ್ ತಂದೆ ಮಶ್ರೂರ್ ರೆಝಾ ಕಳೆದ ಕೆಲ ದಿನಗಳಿಂದ ಜ್ವರ ಹಾಗೂ ಶೀತದಿಂದ ಬಳಸುತ್ತಿದ್ದರು. ಹೀಗಾಗಿ ಕೊರೋನಾ ಟೆಸ್ಟ್ ಮಾಡಿಸಲಾಗಿತ್ತು. ಇದೀಗ ವರದಿ ಬಂದಿತ್ತು, ಕೊರೋನಾ ವೈರಸ್ ದೃಢಪಟ್ಟಿದೆ. ಶಕೀಬ್ ತಂದೆಗೆ ಚಿಕಿತ್ಸೆ ಆರಂಭಿಸಲಾಗಿದೆ. ಇದೇ ವೇಳೆ ಶಕೀಬ್ ತಾಯಿ ಕೊರೋನಾ ವೈರಸ್ ಪರೀಕ್ಷೆ ಮಾಡಿಸಿದ್ದಾರೆ. ಇದರ ವರದಿಗಾಗಿ ಕಾಯುತ್ತಿದ್ದಾರೆ.

ಶಕೀಬ್ ತಂದೆ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಇವರು ಕೆಲಸ ಮಾಡುತ್ತಿದ್ದ ಬ್ಯಾಂಕ್‌ನಲ್ಲಿ 6 ಮಂದಿಗೆ ಕೊರೋನಾ ದಋಢಪಟ್ಟಿತ್ತು. ಎಚ್ಚರಿಕೆಯಿಂದ ಇದ್ದ ಶಕೀಬ್ ತಂದೆಗೂ ಇದೀಗ ಕೊರೋನಾ ವಕ್ಕರಿಸಿದೆ. ಪೋಷಕರೊಂದಿಗೆ ಶಕೀಬ್ ಸಹೋದರ ಸೋಹಾನ್ ವಾಸವಾಗಿದ್ದಾರೆ.  ಸೋಹಾನ್‌ಗೆ ಯಾವುದೇ ರೋಗ ಲಕ್ಷಣಗಳು ಇಲ್ಲದ ಕಾರಣ ಪರೀಕ್ಷೆ ಮಾಡಿಸಿಲ್ಲ.  ಶಕೀಬ್ ಪೋಷಕರು ಢಾಕಾದಲ್ಲಿ ನೆಲೆಸಿದ್ದರೆ, ಶಕೀಬ್, ಪತ್ನಿ ಹಾಗೂ ಇಬ್ಬರು ಮಕ್ಕಳು ಅಮೆರಿಕದಲ್ಲಿ ನೆಲೆಸಿದ್ದಾರೆ.