Asianet Suvarna News Asianet Suvarna News

ಬಾಂಗ್ಲಾ ಕ್ರಿಕೆಟಿಗ ಶಹಾದತ್‌ಗೆ ನಿಷೇಧದ ಶಿಕ್ಷೆ!

ಬಾಂಗ್ಲಾ ಮಾಜಿ ವೇಗಿ ಶಹಾದತ್ ಹುಸೈನ‌ಗೆ ಬಾಂಗ್ಲಾ ಕ್ರಿಕೆಟ್ ಮಂಡಳಿ ನಿಷೇಧ ಶಿಕ್ಷೆ ವಿಧಿಸಿದೆ. ಜೊತೆಗೆ 3 ಲಕ್ಷ ರೂಪಾಯಿ ದಂಡ ವಿಧಿಸಿದೆ. ಶಹಾದತ್ ಅಮಾನತು ಮಾಡಲು ಕಾರಣವೇನು? ಇಲ್ಲಿದೆ ವಿವರ.

Bangladesh cricketer board ban shahadat hussain for 5 years
Author
Bengaluru, First Published Nov 20, 2019, 9:54 AM IST

ಢಾಕಾ(ನ.20) : ರಾಷ್ಟ್ರೀಯ ಕ್ರಿಕೆಟ್‌ ಲೀಗ್‌ನಲ್ಲಿ ಸಹ ಆಟಗಾರನ ಮೇಲೆ ಹಲ್ಲೆ ನಡೆಸಿದ ಬಾಂಗ್ಲಾದೇಶ ಮಾಜಿ ವೇಗಿ ಶಹಾದತ್‌ ಹುಸೇನ್‌ಗೆ 5 ವರ್ಷ ನಿಷೇಧ ಶಿಕ್ಷೆ ವಿಧಿಸಲಾಗಿದೆ. ಆದರೆ ನಿಷೇಧ ಅವ​ಧಿಯ ಕೊನೆ 2 ವರ್ಷಗಳನ್ನು ಬಾಂಗ್ಲಾ​ದೇಶ ಕ್ರಿಕೆಟ್‌ ಮಂಡಳಿ ಅಮಾ​ನ​ತು​ಗೊ​ಳಿಸಿದೆ. 

ಇದನ್ನೂ ಓದಿ: ಕೊಹ್ಲಿ ವಿಕೆಟ್ ಕಬಳಿಸಿ ಕನಸು ನನಸು ಮಾಡಿಕೊಂಡೆ; ಅಬು ಜಾಯೆದ್!

ಚೆಂಡಿನ ಹೊಳಪಿನ ಬಗ್ಗೆ ನಡೆದ ಜಗಳದಲ್ಲಿ ಸಹ ಆಟ​ಗಾರ ಅರಾಫತ್‌ ಸನ್ನಿಗೆ ಹುಸೇ​ನ್‌ ಹೊಡೆದಿದ್ದರು. ಈ ಪ್ರಕ​ರಣವನ್ನು ಗಂಭೀರವಾಗಿ ಪರಿ​ಗ​ಣಿ​ಸಿದ ಬಾಂಗ್ಲಾ ಕ್ರಿಕೆಟ್‌ ಮಂಡಳಿ, ಶಹಾ​ದತ್‌ ಮೇಲೆ ನಿಷೇಧ ಹೇರಿದೆ. ಜತೆಗೆ 3 ಲಕ್ಷ ಟಾಕಾ (.2.5 ಲಕ್ಷ) ದಂಡ ವಿಧಿ​ಸಿದೆ. 

ಇದನ್ನೂ ಓದಿ:ಭಾರತದ ದಾಳಿಗೆ ಬಾಂಗ್ಲಾ ಖಲ್ಲಾಸ್; ಮೂರೇ ದಿನಕ್ಕೆ ಪಂದ್ಯ ಕ್ಲೋಸ್!

ಶಹಾ​ದತ್‌ ವಿವಾದದಲ್ಲಿ ಸಿಲು​ಕಿ​ರು​ವುದು ಇದೇ ಮೊದ​ಲಲ್ಲ. 2015ರಲ್ಲಿ 11 ವರ್ಷದ ಮನೆಕೆಲಸದ ಹುಡುಗಿಗೆ ಕಿರುಕುಳ ನೀಡಿದ್ದ ಆರೋಪ ಎದು​ರಿ​ಸಿ​ದ್ದರು. 2018ರಲ್ಲಿ ತನ್ನ ಕಾರಿಗೆ ಡಿಕ್ಕಿ ಹೊಡೆದ ಆಟೋರಿಕ್ಷಾ ಚಾಲಕನಿಗೆ ಥಳಿಸಿ ಸುದ್ದಿ​ಯಾ​ಗಿ​ದ್ದರು. ಹುಸೇನ್‌ ಬಾಂಗ್ಲಾ ಪರ 38 ಟೆಸ್ಟ್‌, 51 ಏಕದಿನ, 6 ಟಿ20 ಪಂದ್ಯಗಳ​ನ್ನಾ​ಡಿ​ದ್ದ​ರು.

Follow Us:
Download App:
  • android
  • ios