Asianet Suvarna News Asianet Suvarna News

ಶ್ರೀಲಂಕಾ ವಿರುದ್ದದ ಏಕದಿನ ಸರಣಿಗೆ ಬಾಂಗ್ಲಾದೇಶ ಕ್ರಿಕೆಟ್ ತಂಡ ಪ್ರಕಟ

* ಶ್ರೀಲಂಕಾ ವಿರುದ್ದದ 3 ಪಂದ್ಯಗಳ ಏಕದಿನ ಸರಣಿಗೆ ಬಾಂಗ್ಲಾದೇಶ ತಂಡ ಪ್ರಕಟ

* ಬಾಂಗ್ಲಾ ತಂಡ ಕೂಡಿಕೊಂಡ ಶಕೀಬ್ ಅಲ್‌ ಹಸನ್‌

* ಮೇ 23ರಿಂದ ಆರಂಭವಾಗಲಿರುವ ಏಕದಿನ ಸರಣಿ

Bangladesh Cricket Board Announces 15 Player Squad for first two ODIs against Sri Lanka kvn
Author
Dhaka, First Published May 20, 2021, 4:16 PM IST

ಢಾಕಾ(ಮೇ.20): ಶ್ರೀಲಂಕಾ ವಿರುದ್ದ ತವರಿನಲ್ಲಿ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಿಗೆ ಬಾಂಗ್ಲಾದೇಶ ಕ್ರಿಕೆಟ್ ತಂಡ ಪ್ರಕಟವಾಗಿದ್ದು, ನಿರೀಕ್ಷೆಯಂತೆಯೇ ಅನುಭವಿ ಆಲ್ರೌಂಡರ್ ಶಕೀಬ್ ಅಲ್‌ ಹಸನ್‌ ತಂಡ ಕೂಡಿಕೊಂಡಿದ್ದಾರೆ.

ಗಾಯದ ಸಮಸ್ಯೆಯಿಂದ ಶಕೀಬ್ ಅಲ್‌ ಹಸನ್‌ ನ್ಯೂಜಿಲೆಂಡ್ ಪ್ರವಾಸದಿಂದ ವಂಚಿತರಾಗಿದ್ದರು. ಇನ್ನು 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಶ್ರೀಲಂಕಾ ವಿರುದ್ದದ 2 ಪಂದ್ಯಗಳ ಟೆಸ್ಟ್‌ ಸರಣಿಯಿಂದಲೂ ಹೊರಗುಳಿದಿದ್ದರು. 

ಇನ್ನು ನ್ಯೂಜಿಲೆಂಡ್ ವಿರುದ್ದದ ಸೀಮಿತ ಓವರ್‌ಗಳ ಸರಣಿಯಲ್ಲಿ ಸ್ಥಾನ ಪಡೆದಿದ್ದ ನಜ್ಮುಲ್ ಹುಸೈನ್ ಶಾಂಟೋ, ಅಲ್ ಅಮಿತ್ ಹುಸೈನ್‌, ಹಸನ್‌ ಮೊಹ್ಮುದ್, ರುಬೆಲ್ ಹುಸೇನ್‌ ಹಾಗೂ ನಶುಮ್ ಅಹಮ್ಮದ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಶ್ರೀಲಂಕಾ ವಿರುದ್ದದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಕರ್ಷಕ 163 ರನ್‌ ಚಚ್ಚಿದ್ದ ಶಾಂಟೋ ಅವರನ್ನು ಕೈಬಿಟ್ಟಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಾಂಗ್ಲಾದೇಶ ಆಯ್ಕೆ ಸಮಿತಿ ಮುಖ್ಯಸ್ಥ ಮಿನ್‌ಹಜುಲ್‌ ಆಬೆದಿನ್‌, ಏಕದಿನ ಕ್ರಿಕೆಟ್‌ನಲ್ಲಿ ಶಾಂಟೋ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿಲ್ಲ. ಹೀಗಾಗಿ ಶಾಂಟೋಗೆ ವಿಶ್ರಾಂತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಬಾಂಗ್ಲಾದೇಶ ನ್ಯಾಷನಲ್ ಕ್ಯಾಂಪ್ ಕೂಡಿಕೊಂಡ ಶಕೀಬ್ ಅಲ್ ಹಸನ್

ಶಾಂಟೋ ಇದುವರೆಗೂ 8 ಪಂದ್ಯಗಳನ್ನಾಡಿ ಕೇವಲ 93 ರನ್‌ಗಳನ್ನಷ್ಟೇ ಬಾರಿಸಿದ್ದಾರೆ. ಈ ಪೈಕಿ ವೆಸ್ಟ್ ಇಂಡೀಸ್ ವಿರುದ್ದದ 3 ಪಂದ್ಯಗಳ ಸರಣಿಯನ್ನಾಡಿ ಕೇವಲ 38 ರನ್‌ ಬಾರಿಸಿದ್ದರು. ಇನ್ನು ನ್ಯೂಜಿಲೆಂಡ್ ವಿರುದ್ದದ ಏಕದಿನ ಸರಣಿಯಲ್ಲಿ ಶಾಂಟೋ ಬಾಂಗ್ಲಾದೇಶ ತಂಡದಲ್ಲಿದ್ದರೂ ಸಹಾ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿರಲಿಲ್ಲ.

ನಾವು ಕೋವಿಡ್‌ 19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು 4 ಮೀಸಲು ಕ್ರಿಕೆಟ್ ಆಟಗಾರರು ಸೇರಿದಂತೆ ಒಟ್ಟು 19 ಆಟಗಾರರನ್ನು ಆಯ್ಕೆಮಾಡಿದ್ದೇವೆ. 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಮೇ 23ರಿಂದ ಆರಂಭವಾಗಲಿದೆ ಎಂದು ಆಯ್ಕೆ ಸಮಿತಿಯ ಮುಖ್ಯಸ್ಥರು ಹೇಳಿದ್ದಾರೆ.

ಬಾಂಗ್ಲಾದೇಶ ತಂಡ ಹೀಗಿದೆ ನೋಡಿ:

ತಮೀಮ್ ಇಕ್ಬಾಲ್(ನಾಯಕ), ಲಿಟನ್ ದಾಸ್, ಶಕೀಬ್ ಅಲ್ ಹಸನ್‌, ಮುಷ್ಫಿಕುರ್ ರಹೀಮ್, ಮೊಹಮ್ಮದ್ ಮಿಥುನ್, ಮೊಹಮದುಲ್ಲಾ, ಅಫೀಫ್ ಹುಸೈನ್, ಮೆಹದಿ ಹಸನ್, ಮೊಹಮ್ಮದ್ ಸೈಫುದ್ದಿನ್‌, ಟಸ್ಕಿನ್ ಅಹಮ್ಮದ್, ಮುಷ್ತಾಫಿಜುರ್ ರೆಹಮಾನ್, ಶೌರಿಫುಲ್ ಇಸ್ಲಾಂ'
ಮೀಸಲು ಆಟಗಾರರು: ಮೊಹಮ್ಮದ್ ನಯೀಮ್, ತೈಜುಲ್ ಇಸ್ಲಾಂ, ಶೌಹಿದುಲ್ ಇಸ್ಲಾಂ, ಅಮಿನುಲ್‌ ಇಸ್ಲಾಂ ಬಿಪ್ಲಬ್.

Follow Us:
Download App:
  • android
  • ios