ಸೆಲೆಬ್ರೆಟಿ ಕ್ರಿಕೆಟ್ ಲೀಗ್‌‌ನಲ್ಲಿ ಮಾರಾಮಾರಿ, 6 ಮಂದಿಗೆ ಗಾಯ, ಟೂರ್ನಿ ರದ್ದು!

ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಟೂರ್ನಿ ಕ್ರೇಜ್ ತುಸು ಹೆಚ್ಚು. ನೆಚ್ಚಿನ ಸಿನಿಮಾ ತಾರೆಯರು ಕ್ರಿಕೆಟ್ ಆಡೋದನ್ನು ನೋಡಲು ಅಭಿಮಾನಿಗಳು ಮುಗಿ ಬೀಳುತ್ತಾರೆ. ಆದರೆ ಇದೇ ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಬ್ಯಾಟ್, ವಿಕೆಟ್‌ಗಳಿಂದ ಹೊಡೆದಾಟ ನಡೆದಿದೆ. ಪರಿಣಾಮ ಸಂಪೂರ್ಣ ಟೂರ್ನಿ ರದ್ದಾಗಿದೆ.

Bangladesh Celebrity Cricket League cancelled due to fight between 2 teams 6 injured ckm

ಢಾಕಾ(ಸೆ.30): ಸಿನಿಮಾ ತಾರೆಯಲು ಕ್ರಿಕೆಟ್ ಮೈದಾನಕ್ಕಿಳಿದರೆ ಅಭಿಮಾನಿಗಳು ಮುಗಿಬೀಳುತ್ತಾರೆ. ಹೀಗಾಗಿ ಸೆಲೆಬ್ರೆಟಿಗಳ ಕ್ರಿಕೆಟ್ ಲೀಗ್ ಆಟಕ್ಕಿಂತ ಸಿನಿ ತಾರೆಯರಿಂದಲೇ ಹೆಚ್ಚು ಜನಪ್ರಿವಾಗಿದೆ. ಭಾರತದಲ್ಲಿನ ಸೆಲೆಬ್ರೆಟಿ ಕ್ರಿಕೆಟ್ ಲೀಗ್ ನೋಡಿ, ಬಾಂಗ್ಲಾದೇಶದಲ್ಲೂ ಇದೇ ರೀತಿ ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಆರಂಭಿಸಲಾಗಿದೆ. ಆದರೆ ಈ ಲೀಗ್ ಟೂರ್ನಿಯ ಪಂದ್ಯದ ನಡುವೆ ಮರಾಮಾರಿ ಆಗಿದೆ. ಬ್ಯಾಟ್, ವಿಕೆಟ್‌ಗಳಿಂದ ಬಡಿದಾಡಿಕೊಂಡಿದ್ದಾರೆ. ಇದರ ಪರಿಣಾಮ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಷ್ಟೇ ಅಲ್ಲ ಸೆಮಿಫೈಲ್ ಪಂದ್ಯಕ್ಕೂ ಮುನ್ನ ಟೂರ್ನಿಯೇ ರದ್ದಾಗಿದೆ. 

ಮುಸ್ತಾಫಾ ಕಮಲ್ ರಾಜಾ ಹಾಗೂ ದಿಪಾಕಂರ್ ದಿಪೋನ್ ನಡುವಿನ ಪಂದ್ಯ ರೋಟಕ ಘಟ್ಟ ತಲುಪಿತ್ತು. ಆದರೆ ಅಂಪೈರ್ ನಿರ್ಧಾರ ಎರಡು ತಂಡದ  ನಡುವಿನ ಅಸಮಾಧಾನ ಸ್ಫೋಟಿಸಿದೆ. ಬೌಂಡರಿ ವಿಚಾರಕ್ಕೆ ಆರಂಭಗೊಂಡ ಜಗಳ ಕೊನೆಗೆ ಬ್ಯಾಟ್ ವಿಕೆಟ್ ಮೂಲಕ ಹೊಡೆದಾಡಿಕೊಂಡಿದ್ದಾರೆ. ನಟ ನಟಿಯರು ಸೇರಿದಂತೆ ತಾರೆಯರು ಬಡಿದಾಡಿಕೊಂಡಿದ್ದಾರೆ.

ಟಿವಿ ಸೆಲೆಬ್ರಿಟಿ ಕ್ರಿಕೆಟ್ ಟೂರ್ನಿಗೆ ಅದ್ದೂರಿ ತೆರೆ; ಗೆದ್ದು ಬೀಗಿದ ಹರ್ಷ ಸಿ.ಎಂ ಗೌಡ ತಂಡ

ಉಭಯ ತಂಡದ ಸಿನಿ ತಾರೆಯಲು ಕೈಕೈಮಿಲಾಯಿಸುತ್ತಿದ್ದಂತೆ ಇತರ ಸಿಬ್ಬಂದಿಗಳು ಸೇರಿದ್ದಾರೆ. ಬಳಿಕ ಹೊಡೆದಾಟವೇ ನಡೆದಿದೆ. ಕೆಲವರು ಜಗಳ ಬಿಡಿಸುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೈಯಲ್ಲಿದ್ದ ಬ್ಯಾಟ್ ಹಾಗೂ ವಿಕೆಟ್‌ನಿಂದ ಹೊಡೆದಾಡಿಕೊಂಡಿದ್ದಾರೆ. ಇದರಿಂದ 6 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಭದ್ರತಾ ಸಿಬ್ಬಂದಿಗಳು, ಇತರ ಸಿನಿ ತಾರೆಯರು ಸ್ಥಳಕ್ಕೆ ಧಾವಿಸಿ ಜಗಳ ಬಿಡಿಸಿದ್ದಾರೆ.

 

 

ಇತ್ತ ಗಾಯಗೊಂಡ ತಾರೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೌಂಡರಿ ವಿಚಾರದಲ್ಲಿ ಅಂಪೈರ್ ನೀಡಿದ ತೀರ್ಪು ಉಭಯ ತಂಡಗಳ ನಡುವಿನ ಆಕ್ರೋಶ ಹೆಚ್ಚಿಸಿತ್ತು. ಹೊಡೆದಾಟ, ಗಾಯದ ಕಾರಣ ಲೀಗ್ ಹಂತದಲ್ಲೇ ಟೂರ್ನಿ ರದ್ದಾಗಿದೆ. ಸೆಮಿಫೈನಲ್ ಪ್ರವೇಶಕ್ಕಾಗಿ ನಡೆಯುತ್ತಿದ್ದ ಹೋರಾಟದ ನಡುವೆ ಈ ಮಾರಾಮಾರಿ ನಡೆದಿದೆ. ಹೀಗಾಗಿ ಸಂಪೂರ್ಣ ಟೂರ್ನಿಯನ್ನೇ ರದ್ದು ಮಾಡಲಾಗಿದೆ.

ಕೊಹ್ಲಿಯಂತೆ ಕಾಣುವ ಹರಿಯಾಣದ ಸಾಫ್ಟ್‌ವೇರ್‌ ಇಂಜಿನಿಯರ್‌ ಕಾರ್ತಿಕ್‌ ಶರ್ಮಾ!

ಬಾಂಗ್ಲಾದೇಶ ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಸಿನಿ ತಾರೆಯರ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಟೂರ್ನಿಯ ಮುಖ್ಯ ಉದ್ದೇಶವೇ ಸಿನಿ ತಾರೆಯರನ್ನು ಒಗ್ಗೂಡಿಸಿ ಫ್ರೆಂಡ್ಲಿ ಪಂದ್ಯ ಆಡಿಸುವುದಾಗಿದೆ. ಆದರೆ ದ್ವೇಷ, ಹಗೆತನದ ಮೂಲಕ ಆಟವಾಡುವುದು ಕ್ರೀಡಾ ಸ್ಪೂರ್ತಿಯಲ್ಲ. ಕ್ರಿಕೆಟ್ ಅನ್ನೋ ಜಂಟ್ಲಮೆನ್ ಕ್ರೀಡೆ ಆಡಲು ಬಾಂಗ್ಲಾದೇಶ ಸಿನಿ ತಾರೆಯರು ಅರ್ಹರಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
 

Latest Videos
Follow Us:
Download App:
  • android
  • ios