* ಟಿ20 ವಿಶ್ವಕಪ್‌ ಟೂರ್ನಿಗೆ ಭರ್ಜರಿ ತಯಾರಿ ಆರಂಭಿಸಿರುವ ಬಾಂಗ್ಲಾದೇಶ * ನ್ಯೂಜಿಲೆಂಡ್ ಎದುರಿನ ಎರಡನೇ ಟಿ20 ಪಂದ್ಯದಲ್ಲೂ ಮೊಹದುಲ್ಲಾ ಪಡೆಗೆ ಗೆಲುವು* 5 ಪಂದ್ಯಗಳ ಟಿ20 ಸರಣಿಯಲ್ಲಿ ಬಾಂಗ್ಲಾಗೆ 2-0 ಮುನ್ನಡೆ 

ಢಾಕಾ(ಸೆ.04): ಮುಂಬರುವ ಟಿ20 ವಿಶ್ವಕಪ್‌ಗೆ ಭರ್ಜರಿ ತಯಾರಿ ನಡೆಸುತ್ತಿರುವ ಬಾಂಗ್ಲಾದೇಶ ತಂಡವು ಇದೀಗ ನ್ಯೂಜಿಲೆಂಡ್ ಎದುರು ಮತ್ತೊಂದು ಗೆಲುವು ದಾಖಲಿಸಿದೆ. ಈ ಮೂಲಕ ಆಸ್ಟ್ರೇಲಿಯಾದ ವಿರುದ್ದ ಟಿ20 ಸರಣಿ ಗೆದ್ದು ಬೀಗಿದ್ದ ಮೊಹದುಲ್ಲಾ ಪಡೆ ಇದೀಗ, ಕಿವೀಸ್‌ ವಿರುದ್ದವೂ ಸರಣಿ ಕೈವಶ ಮಾಡಿಕೊಳ್ಳುವ ಹೊಸ್ತಿಲಲ್ಲಿದೆ 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು, ನ್ಯೂಜಿಲೆಂಡ್‌ ವಿರುದ್ಧ 2ನೇ ಟಿ20 ಪಂದ್ಯದಲ್ಲಿ 4 ರನ್‌ಗಳ ರೋಚಕ ಗೆಲುವು ಸಾಧಿಸಿದ ಬಾಂಗ್ಲಾದೇಶ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆದಿದೆ. ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾ, 20 ಓವರಲ್ಲಿ 6 ವಿಕೆಟ್‌ಗೆ 141 ರನ್‌ ಗಳಿಸಿತು. ನಾಯಕ ಟಾಮ್‌ ಲೇಥಮ್‌ (ಅಜೇಯ 65) ಹೋರಾಟದ ಹೊರತಾಗಿಯೂ ಕಿವೀಸ್‌ 20 ಓವರಲ್ಲಿ 5 ವಿಕೆಟ್‌ಗೆ 137 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಬಾಂಗ್ಲಾದೇಶ ತಂಡವು 4 ರನ್‌ಗಳ ರೋಚಕ ಜಯ ಸಾಧಿಸಿದೆ.

Scroll to load tweet…

ಕೇವಲ 60ಕ್ಕೆ ಕಿವೀಸ್‌ ಆಲೌಟ್‌: ಬಾಂಗ್ಲಾಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ

ಏಕದಿನ: ದಕ್ಷಿಣ ಆಫ್ರಿಕಾ ವಿರುದ್ಧ ಲಂಕಾಗೆ ಜಯ

ಕೊಲಂಬೊ: ದಕ್ಷಿಣ ಆಫ್ರಿಕಾ ವಿರುದ್ಧ ಗುರುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ 14 ರನ್‌ಗಳ ಗೆಲುವು ಸಾಧಿಸಿದ ಶ್ರೀಲಂಕಾ, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. 

Scroll to load tweet…

ಆವಿಷ್ಕ ಫೆರ್ನಾಂಡೋ(118) ಶತಕದ ನೆರವಿನಿಂದ ಲಂಕಾ 50 ಓವರಲ್ಲಿ 9 ವಿಕೆಟ್‌ಗೆ 300 ರನ್‌ ಗಳಿಸಿತು. ಏಡನ್‌ ಮಾರ್ಕ್ರಮ್‌(96) ಹಾಗೂ ರಾಸ್ಸಿ ವಾನ್‌ ಡೆರ್‌ ಡುಸ್ಸೆನ್‌(59)ರ ಅರ್ಧಶತಕಗಳ ಹೊರತಾಗಿಯೂ ದಕ್ಷಿಣ ಆಫ್ರಿಕಾ 50 ಓವರಲ್ಲಿ 6 ವಿಕೆಟ್‌ಗೆ 286 ರನ್‌ ಗಳಿಸಿತು.