ಪಾಕಿಸ್ತಾನ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕತ್ವದಿಂದ ಬಾಬರ್ ಅಜಂ ಕೆಳಗಿಳಿದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಅವರು ಪಾಕ್ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಈ ವಿಚಾರವನ್ನು ಬಾಬರ್ ಅಜಂ ತಮ್ಮ ಅಧಿಕೃತ 'ಎಕ್ಸ್'(ಟ್ವಿಟರ್) ಖಾತೆಯ ಮೂಲಕ ಖಚಿತಪಡಿಸಿದ್ದಾರೆ.
ತಮ್ಮ ಬ್ಯಾಟಿಂಗ್ ಪ್ರದರ್ಶನಕ್ಕೆ ಹೆಚ್ಚು ಒತ್ತಡ ನೀಡುವ ಉದ್ದೇಶದಿಂದ ಹಾಗೂ ನಾಯಕತ್ವದ ಹೊರೆಯಿಂದ ವಿಮುಖರಾಗುವ ಉದ್ದೇಶದಿಂದ ತಾವು ಪಾಕಿಸ್ತಾನ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿಯುತ್ತಿರುವುದಾಗಿ ಘೋಷಿಸಿದ್ದಾರೆ. ಬಾಬರ್ ಅಜಂ ನಾಯಕತ್ವದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು 6 ಐಸಿಸಿ ಟೂರ್ನಿಗಳನ್ನು ಆಡಿದ್ದು, ಆರು ಬಾರಿಯೂ ಬರಿಗೈನಲ್ಲೇ ವಾಪಾಸ್ಸಾಗಿದೆ. ಇದರ ಬೆನ್ನಲ್ಲೇ ಬಾಬರ್ ಅಜಂ ನಾಯಕತ್ವದ ಬಗ್ಗೆ ಒಂದು ವರ್ಗದ ಪಾಕ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆಗಳನ್ನು ಮಾಡುತ್ತಾ ಬಂದಿದ್ದರು.
ಇರಾನಿ ಕಪ್: ಮುಂಬೈಗೆ ರಹಾನೆ, ಶ್ರೇಯಸ್, ಸರ್ಫರಾಜ್ ಆಸರೆ
ಇನ್ನು ಬಾಬರ್ ಅಜಂ, ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿದ ಬಳಿಕವೂ ಅವರನ್ನು ಟ್ರೋಲ್ ಮಾಡಿದ್ದಾರೆ. ಐಸಿಸಿ ಟೂರ್ನಿಗಳಲ್ಲಿ ಬಾಬರ್ ಅಜಂ ಪಡೆಯ ಸಾಧನೆಯನ್ನು ಮತ್ತೊಮ್ಮೆ ನೆಟ್ಟಿಗರು ನೆನಪು ಮಾಡಿಕೊಂಡು ಟ್ರೋಲ್ ಮಾಡಿದ್ದಾರೆ. ಯುಎಇನಲ್ಲಿ ನಡೆದ 2021ರ ಐಸಿಸಿ ಟಿ20 ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತು. ಇನ್ನು 2022ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಬರ್ ನೇತೃತ್ವದ ಪಾಕ್ ತಂಡವು ಫೈನಲ್ ಪ್ರವೇಶಿಸಿತ್ತಾದರೂ, ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿ ನಿರಾಸೆ ಅನುಭವಿಸಿತ್ತು.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್: ಟೀಂ ಇಂಡಿಯಾ ಅಗ್ರಸ್ಥಾನ ಭದ್ರ, ಫೈನಲ್ ರೇಸ್‌ನಲ್ಲಿ ಭಾರತ ಸೇರಿ 5 ತಂಡ
29 ವರ್ಷದ ಬಾಬರ್ ಅಜಂ ಅವರನ್ನು ಕಳೆದ ವರ್ಷದ ಐಸಿಸಿ ಏಕದಿನ ವಿಶ್ವಕಪ್ ಮುಕ್ತಾಯದ ಬಳಿಕ ಸೀಮಿತ ಓವರ್‌ಗಳ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಆದರೆ ಇದಾಗಿ ಮೂರು ತಿಂಗಳಲ್ಲೇ ಅಂದರೆ 2024ರ ಮಾರ್ಚ್‌ನಲ್ಲಿ ಮತ್ತೆ ಪಾಕ್ ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ 2024ರಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಬರ್ ಅಜಂ ನೇತೃತ್ವದ ಪಾಕ್ ತಂಡವು ಭಾರತ, ಕ್ರಿಕೆಟ್ ಶಿಶು ಅಮೆರಿಕ ಎದುರು ಸೋಲು ಕಾಣುವ ಮೂಲಕ ಗ್ರೂಪ್ ಹಂತದಲ್ಲೇ ಹೊರಬಿದ್ದು ವ್ಯಾಪಕ ಟೀಕೆಗೆ ಗುರಿಯಾಗಿತ್ತು.
