ಸೆಂಚುರಿಯನ್(ಏ.15)‌: ಬಾಬರ್‌ ಆಜಂ ( 59 ಎಸೆತಗಳಲ್ಲಿ 122 ರನ್‌) ಶತಕ ಹಾಗೂ ಮೊಹಮದ್‌ ರಿಜ್ವಾನ್‌ (ಅಜೇಯ 73) ಅರ್ಧಶತಕದ ನೆರವಿನಿಂದ, ದಕ್ಷಿಣ ಆಫ್ರಿಕಾ ವಿರುದ್ಧ 3ನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ 9 ವಿಕೆಟ್‌ಗಳ ಗೆಲುವು ಸಾಧಿಸಿ, 4 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಪಡೆದಿದೆ. 

ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ, ಜನ್ನೆಮಾನ್‌ ಮಲಾನ್‌(55) ಹಾಗೂ ಏಡೆನ್‌ ಮಾರ್ಕ್ರಮ್‌(63) ಅರ್ಧಶತಕಗಳ ನೆರವಿನಿಂದ 20 ಓವರಲ್ಲಿ 5 ವಿಕೆಟ್‌ ನಷ್ಟಕ್ಕೆ 203 ರನ್‌ ಗಳಿಸಿತು. 

ಐಸಿಸಿ ಏಕದಿನ ರ‍್ಯಾಂಕಿಂಗ್‌: ಕೊಹ್ಲಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಬಾಬರ್‌ ಅಜಂ

ಬೃಹತ್‌ ಗುರಿ ಬೆನ್ನತ್ತಿದ ಪಾಕಿಸ್ತಾನಕ್ಕೆ ಆಜಂ ಹಾಗೂ ರಿಜ್ವಾನ್‌ ಮೊದಲ ವಿಕೆಟ್‌ಗೆ 197 ರನ್‌ಗಳ ದಾಖಲೆ ಜೊತೆಯಾಟವಾಡಿದರು. ಪಾಕಿಸ್ತಾನ ಇನ್ನೂ 2 ಓವರ್‌ ಬಾಕಿ ಇರುವಂತೆಯೇ ಗುರಿ ತಲುಪಿ ಸಂಭ್ರಮಿಸಿತು. ಬಾಬರ್‌ರ 122 ರನ್‌ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ, 4 ಸಿಕ್ಸರ್‌ಗಳಿದ್ದವು. ಮೊಹಮ್ಮದ್ ರಿಜ್ವಾನ್‌ ಅಜೇಯ 73 ರನ್‌ಗಳ ಜತೆಯಾಟ ನಿಭಾಯಿಸಿದರು.

ಸ್ಕೋರ್‌: 
ದಕ್ಷಿಣ ಆಫ್ರಿಕಾ 203/5 (ಮಾರ್ಕ್ರಮ್‌ 63, ಮಲಾನ್‌ 55, ನವಾಜ್‌ 2-38) 
ಪಾಕಿಸ್ತಾನ 205/1 (ಆಜಂ 122, ರಿಜ್ವಾನ್‌ 73, ವಿಲಿಯಮ್ಸ್‌ 1-34)