ಆಸ್ಟ್ರೇಲಿಯನ್ ಓಪನ್: ಸೆಮೀಸ್‌ಗೇರಿದ ಜೋಕೋವಿಚ್, ಸೆರೆನಾ ವಿಲಿಯಮ್ಸ್
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ನೊವಾಕ್ ಜೋಕೋವಿಚ್ ಹಾಗೂ ಸೆರೆನಾ ವಿಲಿಯಮ್ಸ್ ಸೆಮಿಫೈನಲ್ ಪ್ರವೇಶಿಸಿದ್ದು, ಮತ್ತೊಂದು ಗ್ರ್ಯಾನ್‌ಸ್ಲಾಂಗೆ ಮುತ್ತಿಕ್ಕಲು ಇನ್ನೆರಡೇ ಹೆಜ್ಜೆಗಳು ಬಾಕಿ ಉಳಿದಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮೆಲ್ಬರ್ನ್(ಫೆ.17): ಹಾಲಿ ಚಾಂಪಿಯನ್ ನೋವಾಕ್ ಜೋಕೋವಿಚ್ ಹಾಗೂ ಮಾಜಿ ಚಾಂಪಿಯನ್ ಸೆರೆನಾ ಆಸ್ಪ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದ್ದಾರೆ. 9ನೇ ಬಾರಿಗೆ ಸೆಮೀಸ್‌ಗೇರಿರುವ ಜೋಕೋವಿಚ್, 9ನೇ ಆಸ್ಪ್ರೇಲಿಯನ್ ಓಪನ್ ಟ್ರೋಫಿಯೊಂದಿಗೆ 18ನೇ ಗ್ರ್ಯಾನ್‌ಸ್ಲಾಂ ಜಯಿಸಲು ಕಾತರಿಸುತ್ತಿದ್ದರೆ, ದಾಖಲೆಯ 24ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿಗೆ ಮುತ್ತಿಡಲು ಸೆರೆನಾ ತುದಿಗಾಲಲ್ಲಿ ನಿಂತಿದ್ದಾರೆ.
ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಸರ್ಬಿಯಾದ ಜೋಕೋವಿಚ್, ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ 6-7, 6-2, 6-4, 7-6 ಸೆಟ್‌ಗಳಲ್ಲಿ ಜಯಗಳಿಸಿದರು. ಸೆಮೀಸ್‌ನಲ್ಲಿ ಜೋಕೋವಿಚ್‌ಗೆ ರಷ್ಯಾದ ಆಸ್ಲನ್ ಕರಟ್ಲೆವ್ ವಿರುದ್ಧ ಸೆಣಸಲಿದ್ದಾರೆ. ಕರೆಟ್ಲೆವ್, ಕ್ವಾರ್ಟರ್‌ಫೈನಲ್‌ನಲ್ಲಿ ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೊವ್ ವಿರುದ್ಧ 2-6, 6-4, 6-1, 6-2 ಸೆಟ್‌ಗಳಲ್ಲಿ ಜಯಿಸಿದರು. ಆಧುನಿಕ ಟೆನಿಸ್‌ನಲ್ಲಿ ಇದೇ ಮೊದಲ ಬಾರಿಗೆ ಚೊಚ್ಚಲ ಗ್ರ್ಯಾನ್ ಸ್ಲಾಂನಲ್ಲೇ ಸೆಮೀಸ್‌ಗೇರಿದ ದಾಖಲೆಯನ್ನು ಕರಟ್ಲೆವ್ ನಿರ್ಮಿಸಿದರು.
ಆಸ್ಟ್ರೇಲಿಯನ್ ಓಪನ್ 21ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಸನಿಹಕ್ಕೆ ನಡಾಲ್
ಹಾಲೆವ್‌ಗೆ ಸೋಲುಣಿಸಿದ ಸೆರೆನಾ: 2ನೇ ಶ್ರೇಯಾಂಕಿತೆ ರೊಮೇನಿಯಾದ ಸಿಮೋನಾ ಹಾಲೆಪ್ ವಿರುದ್ಧ ಸೆರೆನಾ 6-3, 6-3 ನೇರ ಸೆಟ್‌ಗಳಲ್ಲಿ ಸುಲಭ ಜಯ ಪಡೆದರು. ಸೆರೆನಾಗೆ ಸೆಮೀಸ್‌ನಲ್ಲಿ ಜಪಾನ್‌ನ ನವೊಮಿ ಒಸಾಕ ಎದುರಾಗಲಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಒಸಾಕ, ಚೈನೀಸ್ ತೈಪೆಯ ಶೀ ಸು ವೀ ವಿರುದ್ಧ 6-2, 6-2 ಸೆಟ್‌ಗಳಲ್ಲಿ ಗೆದ್ದರು.