ಮೆಲ್ಬರ್ನ್(ಜು.21)‌: ಸೆಪ್ಟೆಂಬರ್‌ನಲ್ಲಿ ಆಸ್ಪ್ರೇ​ಲಿಯಾ ತಂಡ ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ಗೆ ವಾಪ​ಸಾ​ಗ​ಲಿದ್ದು, ಇಂಗ್ಲೆಂಡ್‌ ಪ್ರವಾಸ ಕೈಗೊ​ಳ್ಳ​ಲಿದೆ. ಸೆ.4ರಿಂದ 3 ಟಿ20 ಹಾಗೂ 3 ಏಕ​ದಿನ ಪಂದ್ಯ​ಗಳ ಸರ​ಣಿ​ಯಲ್ಲಿ ಪಾಲ್ಗೊ​ಳ್ಳ​ಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 

ಆಸ್ಪ್ರೇ​ಲಿಯಾ ತಂಡ ವಿಶೇಷ ವಿಮಾ​ನ​ದಲ್ಲಿ ಇಂಗ್ಲೆಂಡ್‌ಗೆ ಪ್ರಯಾ​ಣಿ​ಸ​ಲಿದ್ದು, ಸೌಥಾಂಪ್ಟನ್‌ ಹಾಗೂ ಮ್ಯಾಂಚೆ​ಸ್ಟರ್‌ನಲ್ಲಿ ಪಂದ್ಯ​ಗಳು ನಡೆ​ಯ​ಲಿವೆ. ಕೊರೋನಾ ನಡುವೆಯೂ ಇಂಗ್ಲೆಂಡ್‌ ಕ್ರಿಕೆಟ್‌ ಸರ​ಣಿ​ಗ​ಳನ್ನು ಆಯೋ​ಜಿ​ಸು​ತ್ತಿದ್ದು, ಸದ್ಯ ನಡೆ​ಯು​ತ್ತಿ​ರುವ ವಿಂಡೀಸ್‌ ವಿರು​ದ್ಧದ ಸರಣಿ ಬಳಿಕ ಪಾಕಿ​ಸ್ತಾನ ವಿರುದ್ಧ ಸರಣಿ ಆಡ​ಲಿದೆ.

ಆಂಗ್ಲೋ-ವಿಂಡೀಸ್ ಟೆಸ್ಟ್: ಇಂಗ್ಲೆಂಡ್‌ಗೆ ರೋಚಕ ಜಯ

ಮೊದಲಿಗೆ ಸೆಪ್ಟೆಂಬರ್ 04, 06 ಹಾಗೂ 08ರಂದು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಸಾಂಪ್ರಾದಾಯಿಕ ಎದುರಾಳಿಗಳು ಮುಖಾಮುಖಿಯಾಗಲಿವೆ. ಇದಾದ ಬಳಿಕ ಸೆಪ್ಟೆಂಬರ್ 10, 12 ಹಾಗೂ 15ರಂದು ಏಕದಿನ ಸರಣಿಯನ್ನಾಡಲಿವೆ.  ಪ್ರಸ್ತುತ ಸೌಥಾಂಪ್ಟನ್‌ ಹಾಗೂ ಮ್ಯಾಂಚೆ​ಸ್ಟರ್‌ನಲ್ಲಿ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ತಂಡಗಳು ಟೆಸ್ಟ್ ಪಂದ್ಯವನ್ನಾಡುತ್ತಿವೆ. ಇಲ್ಲಿ ಬಯೋ ಸೆಕ್ಯೂರ್ ಝೋನ್ ನಿರ್ಮಿಸಲಾಗಿದೆ. ಈ ಎರಡು ಮೈದಾನದಲ್ಲೇ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಲಿವೆ.