Asianet Suvarna News Asianet Suvarna News

Ashes 2021 : ಇಂಗ್ಲೆಂಡ್ ಹೋರಾಟ, ಗೆಲುವಿನ ಸನಿಹದಲ್ಲಿ ಆಸ್ಟ್ರೇಲಿಯಾ

ಗೆಲುವಿನಿಂದ 6 ವಿಕೆಟ್ ದೂರದಲ್ಲಿದೆ ಆಸ್ಟ್ರೇಲಿಯಾ
ಇಂಗ್ಲೆಂಡ್ ತಂಡದ ಗೆಲುವಿಗೆ ಬೇಕಿದೆ 386 ರನ್
ಸರಣಿಯಲ್ಲಿ 2-0 ಮುನ್ನಡೆಗೇರುವ ಹಾದಿಯಲ್ಲಿದೆ ಆಸೀಸ್ ಟೀಮ್

Australia vs england 2nd ashes test Australia close on second Test win san
Author
Adelaide SA, First Published Dec 19, 2021, 7:13 PM IST

ಅಡಿಲೇಡ್ (ಡಿ. 19): ಆಸ್ಟ್ರೇಲಿಯಾ (Australia) ಹಾಗೂ ಪ್ರವಾಸಿ ಇಂಗ್ಲೆಂಡ್ (England) ತಂಡಗಳ ನಡುವೆ ನಡೆಯುತ್ತಿರುವ  ಆ್ಯಷಸ್ ಟೆಸ್ಟ್ (Ashes) ಸರಣಿಯ ಪಿಂಕ್ ಬಾಲ್ (Pink Ball Test) ಟೆಸ್ಟ್ ಪಂದ್ಯದಲ್ಲಿ ಆತಿಥೇಯ ತಂಡ ಗೆಲುವಿನ ಸನಿಹದಲ್ಲಿದೆ. ಅಡಿಲೇಡ್ ನಲ್ಲಿ (Adelaide) ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಗೆಲುವಿಗೆ ಇನ್ನೂ 6 ವಿಕೆಟ್ ಗಳು ಅಗತ್ಯವಿದ್ದರೆ ಇಂಗ್ಲೆಂಡ್ ತಂಡಕ್ಕೆ ಅಸಾಧ್ಯ 386 ರನ್ ಬೇಕಿದೆ. 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಗೇರುವ ಗುರಿಯಲ್ಲಿರುವ ಆಸ್ಟ್ರೇಲಿಯಾ 5ನೇ ದಿನವಾದ ಸೋಮವಾರ ಆದಷ್ಟು ಬೇಗ ಪಂದ್ಯವನ್ನು ಮುಗಿಸುವ ಇರಾದೆಯಲ್ಲಿದೆ.

ಅಡಿಲೇಡ್ ಓವಲ್ (Adelaide Oval) ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 1 ವಿಕೆಟ್ ಗೆ 45 ರನ್ ಗಳಿಂದ 4ನೇ ದಿನವಾದ ಭಾನುವಾರ 2ನೇ ಇನ್ನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯಾ ತಂಡ 9 ವಿಕೆಟ್ ಗೆ 230 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತು. ಆ ಮೂಲಕ ಇಂಗ್ಲೆಂಡ್ ತಂಡದ ಗೆಲುವಿಗೆ 468 ರನ್ ಗಳ ಗುರಿ ನೀಡುವಲ್ಲಿ ಯಶ ಕಂಡಿತ್ತು. 2ನೇ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ತಂಡ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಗೆ 82 ರನ್ ಬಾರಿಸಿದ್ದು ಸೋಲು ತಪ್ಪಿಸಿಕೊಳ್ಳುವ ಹೋರಾಟದಲ್ಲಿದೆ.  40 ಎಸೆತಗಳಲ್ಲಿ 3 ರನ್ ಬಾರಿಸಿರುವ ಬೆನ್ ಸ್ಟೋಕ್ಸ್ (Ben Stokes) ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

282 ರನ್ ಗಳ ಮುನ್ನಡೆಯೊಂದಿಗೆ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲಿಯೇ ಸ್ಟುವರ್ಟ್ ಬ್ರಾಡ್ ಹಾಗೂ ಜೇಮ್ಸ್ ಆಂಡರ್ ಸನ್, ಮಾರ್ಕಸ್ ಹ್ಯಾರಿಸ್  (Marcus Harris)ಹಾಗೂ ಮೈಕೆಲ್ ನೇಸರ್ (Michael Neser) ವಿಕೆಟ್ ಉರುಳಿಸಿ ತಿರುಗೇಟು ನೀಡುವ ವಿಶ್ವಾಸ ಮೂಡಿಸಿದ್ದರು. ಒಲ್ಲಿ ರಾಬ್ಸಿನ್ಸನ್  (Ollie Robinson)ಅತ್ಯುತ್ತಮ ಎಸೆತದಲ್ಲಿ ಸ್ಟೀವ್ ಸ್ಮಿತ್ ವಿಕೆಟ್ ಉರುಳಿಸಿದಾಗ ಆಸ್ಟ್ರೇಲಿಯಾ ತಂಡ 55 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು.
 


ಆದರೆ, ಅಲ್ಲಿಂದ ಆಸೀಸ್ ಇನ್ನಿಂಗ್ಸ್ ಗೆ ಬಲ ನೀಡಿದ ಮಾರ್ನಸ್ ಲಬುಶೇನ್ ಹಾಗೂ ಟ್ರಾವಿಸ್ ಹೆಡ್ 5ನೇ ವಿಕೆಟ್ ಗೆ 89 ರನ್ ಜೊತೆಯಾಟವಾಡಿದರು. ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದ ಲಬುಶೇನ್ (Marnus Labuschagne), 96 ಎಸೆತಗಳಲ್ಲಿ 51 ರನ್ ಸಿಡಿಸಿ ಡೇವಿಡ್ ಮಲಾನ್ ಗೆ (Dawid Malan) ವಿಕೆಟ್ ಒಪ್ಪಿಸಿದರು. ಇನ್ನೊಂದೆಡೆ ಬಿರುಸಿನ ಆಟವಾಡಿದ ಟ್ರಾವಿಸ್ ಹೆಡ್  (Travis Head) 54 ಎಸೆತಗಳಲ್ಲಿ 7 ಬೌಂಡರಿ ಇದ್ದ 51 ರನ್ ಬಾರಿಸಿ ರಾಬಿನ್ಸನ್ ಗೆ ವಿಕೆಟ್ ನೀಡಿದರು. ಕೆಳ ಕ್ರಮಾಂಕದಲ್ಲಿ ಗ್ರೀನ್ (33) ಹಾಗೂ ಮಿಚೆಲ್ ಸ್ಟಾರ್ಕ್ (19) ಕೆಲ ರನ್ ಬಾರಿಸಿದ್ದರಿಂದ ಆಸೀಸ್ 200ರ ಗಡಿ ದಾಟಿತ್ತು.

Ashes 2021: ಇಂಗ್ಲೆಂಡ್ ದಿಢೀರ್ ಕುಸಿತ, ಆಸ್ಟ್ರೇಲಿಯಾದ ಬಿಗಿ ಹಿಡಿತದಲ್ಲಿ ಜೋ ರೂಟ್ ಪಡೆ..!
ಅಸಾಧ್ಯ ಮೊತ್ತವನ್ನು ಚೇಸ್ ಮಾಡುವ ಹಾದಿಯಲ್ಲಿ ಇಂಗ್ಲೆಂಡ್ ಕೆಟ್ಟ ಆರಂಭ ಪಡೆಯಿತು. ಜೇಹ್ ರಿಚರ್ಡ್ ಸನ್ (Jhye Richardson) ಎಸೆತದಲ್ಲಿ ಹಸೀಬ್ ಹಮೀದ್  ( Haseeb Hameed)ಶೂನ್ಯಕ್ಕೆ ಔಟಾದರೆ, ರೋರಿ ಬರ್ನ್ಸ್ ಹಾಗೂ ಡೇವಿಡ್ ಮಲಾನ್ 2ನೇ ವಿಕೆಟ್ ಗೆ 44 ರನ್ ಜೊತೆಯಾಟವಾಡಿ ಬೇರ್ಪಟ್ಟರು. 52 ಎಸೆತಗಳಲ್ಲಿ 20 ರನ್ ಬಾರಿಸಿದ್ದ ಮಲಾನ್ ನೇಸರ್ ಎಸೆತದಲ್ಲಿ ಎಲ್ ಬಿಯಾಗಿ ನಿರ್ಗಮಿಸಿದರೆ, ನಾಯಕ ಜೋ ರೂಟ್ ನೊಂದಿಗೆ ಕೆಲ ಹೊತ್ತು ಹೋರಾಟ ನಡೆಸಿದ ಬರ್ನ್ಸ್ ತಂಡದ ಮೊತ್ತ 70 ರನ್ ಆಗಿದ್ದಾಗ ನಿರ್ಗಮಿಸಿದರು.

Ashes 2021: ಬೃಹತ್ ಮೊತ್ತ ಗಳಿಸಿದ ಆಸೀಸ್‌, ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್
ಬರ್ನ್ಸ್ ತಮ್ಮ 34 ರನ್ ಗಳ ಇನ್ನಿಂಗ್ಸ್ ಗಾಗಿ 95 ಎಸೆತ ಆಡಿದ್ದರು. ರಿಚರ್ಡ್ ಸನ್ ಗೆ 2ನೇ ವಿಕೆಟ್ ರೂಪದಲ್ಲಿ ಬರ್ನ್ಸ್ ನಿರ್ಗಮನ ಕಂಡರು. ಅನುಭವಿ ಆಲ್ರೌಂಡರ್ ಬೆನ್ ಸ್ಟೋಕ್ಸ್ ಹಾಗೂ ನಾಯಕ ಜೋ ರೂಟ್ (24ರನ್, 67 ಎಸೆತ, 1 ಬೌಂಡರಿ) ಆಸೀಸ್ ಬೌಲಿಂಗ್ ಅನ್ನು ಎಚ್ಚರಿಕೆಯಿಂದ ಎದುರಿಸಿದರು. ಆದರೆ, 44ನೇ ಓವರ್ ಎಸೆಯಲು ಬಂದ ಸ್ಟಾರ್ಕ್ ತಮ್ಮ 2ನೇ ಎಸೆತದಲ್ಲಿ ರೂಟ್ ರ (Joe Root ) ವಿಕೆಟ್ ಪಡೆಯುವುದರೊಂದಿಗೆ ಇಂಗ್ಲೆಂಡ್ ನ ಸೋಲು ತಪ್ಪಿಸಿಕೊಳ್ಳುವ ಹೋರಾಟಕ್ಕೆ ದೊಡ್ಡ ಏಟು ಬಿದ್ದಿತು. ರೂಟ್ ವಿಕೆಟ್ ಉರುಳಿದ ಬೆನ್ನಲ್ಲಿಯೇ ದಿನದಾಟವನ್ನೂ ಅಂತ್ಯಗೊಳಿಸಲಾಯಿತು.

ಸೊನ್ನೆ ಸುತ್ತೋದ್ರಲ್ಲಿ ಇಂಗ್ಲೆಂಡ್ ಓಪನರ್ಸ್ ರೆಕಾರ್ಡ್!
ಪುರುಷರ ಟೆಸ್ಟ್ ಕ್ರಿಕೆಟ್ ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ಬಾರಿ ಸೊನ್ನೆ ಸುತ್ತಿದ ಆರಂಭಿಕ ಆಟಗಾರರ ಲಿಸ್ಟ್ ನಲ್ಲಿ ಇಂಗ್ಲೆಂಡ್ ಸ್ಥಾನ ಪಡೆದಿದೆ. 2021ರಲ್ಲಿಇಂಗ್ಲೆಂಡ್ ತಂಡದ ನಾಲ್ವರು ಆರಂಭಿಕರು ಡೊಮಿನಿಕ್ ಸಿಬಲಿ, ರೋರಿ ಬರ್ನ್ಸ್, ಜಾಕ್ ಕ್ರಾವ್ಲಿ ಹಾಗೂ ಹಸೀಬ್ ಹಮೀದ್ ಸೇರಿ ಒಟ್ಟಾರೆ 14 ಪಂದ್ಯಗಳಲ್ಲಿ 13 ಬಾರಿ ಸೊನ್ನೆಗೆ ಔಟ್ ಆಗಿದ್ದಾರೆ, ಇದು ವಿಶ್ವ ಕ್ರಿಕೆಟ್ ನಲ್ಲಿ ದಾಖಲೆ ಎನಿಸಿದೆ. 1994ರಲ್ಲಿ ನ್ಯೂಜಿಲೆಂಡ್ ತಂಡದ ಆರಂಭಿಕರು 9 ಪಂದ್ಯಗಳಲ್ಲಿ 9 ಬಾರಿ ಸೊನ್ನೆ ಸುತ್ತಿದ್ದು ದಾಖಲೆ ಎನಿಸಿತ್ತು.

Follow Us:
Download App:
  • android
  • ios