Asianet Suvarna News Asianet Suvarna News

Ashes 2021: ಬೃಹತ್ ಮೊತ್ತ ಗಳಿಸಿದ ಆಸೀಸ್‌, ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್

* ಆ್ಯಷಸ್‌ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲೂ ಆಸೀಸ್‌ ಬಿಗಿ ಹಿಡಿತ

* ಮೊದಲ ಇನಿಂಗ್ಸ್‌ನಲ್ಲಿ 473 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡ ಆಸೀಸ್

* ಇಂಗ್ಲೆಂಡ್ ಆರಂಭಿರನ್ನು ಪೆವಿಲಿಯನ್ನಿಗಟ್ಟಿದ ಆಸೀಸ್ ಬೌಲರ್‌ಗಳು

Ashes Test Australia Take Control Remove England Openers Early in Adelaide Test Day 2 kvn
Author
Bengaluru, First Published Dec 17, 2021, 5:18 PM IST
  • Facebook
  • Twitter
  • Whatsapp

ಅಡಿಲೇಡ್(ಡಿ.17): ಪಿಂಕ್ ಬಾಲ್ ಟೆಸ್ಟ್‌ನಲ್ಲಿ (Pink Ball Test) ಮಾರ್ನಸ್‌ ಲಬುಶೇನ್‌(103) ಆಕರ್ಷಕ ಶತಕ ಹಾಗೂ ಸ್ಟೀವ್ ಸ್ಮಿತ್(Steve Smith) (93) ಶತಕವಂಚಿತ ಬ್ಯಾಟಿಂಗ್‌ ನೆರವಿನಿಂದ ಆ್ಯಷಸ್‌ ಸರಣಿಯ (Ashes Test Series) ಅಡಿಲೇಡ್ ಟೆಸ್ಟ್ (Adelaide Test) ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 9 ವಿಕೆಟ್ ಕಳೆದುಕೊಂಡು 473 ರನ್ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಇನ್ನು ಮೊದ ಇನಿಂಗ್ಸ್ ಆರಂಭಿಸಿರುವ ಪ್ರವಾಸಿ ಇಂಗ್ಲೆಂಡ್ ತಂಡವು (England Cricket Team) ಎರಡನೇ ದಿನದಾಟದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 17 ರನ್‌ ಬಾರಿಸಿ ಸಂಕಷ್ಟಕ್ಕೆ ಸಿಲುಕಿದೆ. 

ಮೊದಲ ದಿನದಾಟದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 221 ರನ್ ಬಾರಿಸಿದ್ದ ಆಸ್ಟ್ರೇಲಿಯಾ ತಂಡವು (Australia Cricket Team) ಎರಡನೇ ದಿನದಾಟವನ್ನು ಎಚ್ಚರಿಕೆಯಿಂದಲೇ ಆರಂಭಿಸಿತು. ಮಾರ್ನಸ್ ಲಬುಶೇನ್ (Marnus Labuschagne) ಟೆಸ್ಟ್‌ ವೃತ್ತಿಜೀವನದ ಆರನೇ ಟೆಸ್ಟ್ ಶತಕ ಬಾರಿಸಿ ವಿಕೆಟ್‌  ಒಪ್ಪಿಸಿದರು. ಲಬುಶೇನ್ ಒಟ್ಟು 305 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 103 ರನ್ ಬಾರಿಸಿ ಓಲಿ ರಾಬಿನ್‌ಸನ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಇನ್ನು ಮತ್ತೊಂದು ತುದಿಯಲ್ಲಿ ನೆಲಕಚ್ಚಿ ಬ್ಯಾಟಿಂಗ್ ನಡೆಸಿದ ನಾಯಕ ಸ್ಟೀವ್ ಸ್ಮಿತ್ ಕೇವಲ 7 ರನ್ ಅಂತರದಲ್ಲಿ 28ನೇ ಶತಕ ಬಾರಿಸುವ ಅವಕಾಶವನ್ನು ಕೈಚೆಲ್ಲಿದರು. ಸ್ಮಿತ್ 201 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 93 ರನ್‌ ಬಾರಿಸಿ ಜೇಮ್ಸ್‌ ಆ್ಯಂಡರ್‌ಸನ್ (James Anderson) ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು.

ಇನ್ನು ಗಾಬಾ ಟೆಸ್ಟ್ ಪಂದ್ಯದಲ್ಲಿ ಸ್ಪೋಟಕ ಶತಕ ಬಾರಿಸಿದ್ದ ಟ್ರಾವಿಸ್ ಹೆಡ್ ಆಟ ಕೇವಲ 18 ರನ್‌ಗಳಿಗೆ ಸೀಮಿತವಾದರೆ, ಆಲ್ರೌಂಡರ್‌ ಕ್ಯಾಮರೋನ್ ಗ್ರೀನ್ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಗ್ರೀನ್ ಕೇವಲ 2 ರನ್‌ ಬಾರಿಸಿ ಬೆನ್ ಸ್ಟೋಕ್ಸ್ (Ben Stokes) ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. 

Ashes 2021: ವಾರ್ನರ್, ಲಬುಶೇನ್ ಅಬ್ಬರ, ಬೃಹತ್ ಮೊತ್ತದತ್ತ ಆಸೀಸ್‌..!

ಇದಾದ ಬಳಿಕ ಕ್ರೀಸ್‌ಗಿಳಿದ ವಿಕೆಟ್ ಕೀಪರ್ ಬ್ಯಾಟರ್‌ ಅಲೆಕ್ಸ್‌ ಕ್ಯಾರಿ (Alex Carey), ಕೆಳ ಕ್ರಮಾಂಕದ ಬ್ಯಾಟರ್‌ಗಳ ಜತೆ ಸೇರಿ ತಂಡಕ್ಕೆ ಆಸರೆಯಾಗಲು ಯತ್ನಿಸಿದರು. ಕ್ಯಾರಿ ವೃತ್ತಿಜೀವನದ ಮೊದಲ ಟೆಸ್ಟ್ ಅರ್ಧಶತಕ ಬಾರಿಸಿ ಮಿಂಚಿದರು. ಒಟ್ಟು 107 ಎಸೆತಗಳನ್ನು ಎದುರಿಸಿದ ಕ್ಯಾರಿ 51 ರನ್ ಬಾರಿಸಿ ಜೇಮ್ಸ್‌ ಆ್ಯಂಡರ್‌ಸನ್‌ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಮಿಚೆಲ್ ಸ್ಟಾರ್ಕ್ ಅಜೇಯ 39 ರನ್‌ ಬಾರಿಸಿದರೆ, ನೀಸರ್ 35 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. 

ಇನ್ನು ಮೊದಲ ಇನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ವೇಗಿ ಮಿಚೆಲ್ ಸ್ಟಾರ್ಕ್ ಆರಂಭದಲ್ಲೇ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ರೋರಿ ಬರ್ನ್ಸ್‌ 4 ರನ್‌ ಬಾರಿಸಿ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದರೆ, ಮತ್ತೋರ್ವ ಆರಂಭಿಕ ಬ್ಯಾಟರ್ ಹಸೀಬ್ ಹಮೀದ್‌ 6 ರನ್‌ ಬಾರಿಸಿ ನೀಸರ್‌ಗೆ ಚೊಚ್ಚಲ ಬಲಿಯಾದರು. ಸದ್ಯ ಡೇವಿಡ್ ಮಲಾನ್(01) ಹಾಗೂ ನಾಯಕ ಜೋ ರೂಟ್‌(5) ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. 

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯಾ: 473/9 ಡಿ (ಮೊದಲ ಇನಿಂಗ್ಸ್)
ಮಾರ್ನಸ್ ಲಬುಶೇನ್: 103
ಬೆನ್ ಸ್ಟೋಕ್ಸ್: 113/3

ಇಂಗ್ಲೆಂಡ್‌: 17/2
ಹಸೀಬ್ ಹಮೀದ್: 6
ಮೀಚೆಲ್ ನೀಸರ್: 4/1
(* ಎರಡನೇ ದಿನದಾಟದಂತ್ಯದ ವೇಳೆಗೆ )
 

Follow Us:
Download App:
  • android
  • ios