ಮೆಲ್ಬರ್ನ್‌(ನ.16) : ಭಾರತ ಪ್ರವಾಸಕ್ಕೆ ಇನ್ನು 2 ವರ್ಷಕ್ಕೂ ಹೆಚ್ಚಿಗೆ ಸಮ​ಯ ಬಾಕಿ ಇದ್ದರೂ, ತಂಡ ಈಗಾ​ಗಲೇ ಅಭ್ಯಾಸ ಆರಂಭಿ​ಸಿ​ರು​ವು​ದಾಗಿ ಆಸ್ಪ್ರೇ​ಲಿಯಾ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಜಸ್ಟಿನ್‌ ಲ್ಯಾಂಗರ್‌ ಹೇಳಿ​ದ್ದಾರೆ. 2022ರಲ್ಲಿ ಆಸ್ಪ್ರೇ​ಲಿಯಾ ತಂಡ ಭಾರತಕ್ಕೆ ಆಗ​ಮಿ​ಸ​ಲಿದ್ದು 4 ಪಂದ್ಯ​ಗಳ ಟೆಸ್ಟ್‌ ಸರಣಿಯನ್ನು ಆಡ​ಲಿದೆ. ಇದಕ್ಕಾಗಿ ಈಗಿನಿಂದಲೇ ಅಭ್ಯಾಸ ನಡೆಸುವುದಾಗಿ  ಕೋಚ್ ಹೇಳಿದ್ದಾರೆ.

ಇದನ್ನೂ ಓದಿ: ಆಸ್ಟ್ರೇಲಿಯಾ ಕ್ರಿಕೆಟರ್ ಆಸೋಸಿಯೇಶನ್‌ಗೆ ವ್ಯಾಟ್ಸನ್ ಅಧ್ಯಕ್ಷ!

ತವ​ರಿ​ನಲ್ಲಿ ಭಾರತ ತಂಡ ಅತ್ಯಂತ ಬಲಿ​ಷ್ಠ​ವಾ​ಗಿದ್ದು, ಪ್ರತಿ ಎದು​ರಾ​ಳಿಯನ್ನು ಬಗ್ಗು​ಬ​ಡಿ​ಯು​ತ್ತಿದೆ. ಹಲವು ವರ್ಷಗಳಿಂದ ಭಾರ​ತ​ದಲ್ಲಿ ಟೆಸ್ಟ್‌ ಸರಣಿ ಗೆಲ್ಲದ ಆಸ್ಪ್ರೇ​ಲಿಯಾ, ಕಳೆದ ಬಾರಿ ಭಾರತ ತಂಡ ಪ್ರವಾಸ ಕೈಗೊಂಡಿದ್ದಾಗಲೂ ಸರಣಿ ಕೈಚೆ​ಲ್ಲಿತ್ತು. ‘ಭಾ​ರತದಲ್ಲಿ ಗೆಲ್ಲು​ವುದು ಯಾವಾ​ಗಲೂ ಕಷ್ಟ. ಆದರೆ ನಾವು ನಿರೀಕ್ಷೆಯೊಂದಿಗೆ ಸಿದ್ಧತೆ ಆರಂಭಿ​ಸಿ​ದ್ದೇವೆ. ಇನ್ನು 2 ವರ್ಷ ಸಮ​ಯ​ವಿದೆ. ಆ ವೇಳೆಗೆ ಯುದ್ಧಗೆ ಸಂಪೂರ್ಣ ಸಿದ್ಧ​ರಾ​ಗು​ವ ಭರ​ವಸೆ ಇದೆ’ ಎಂದು ಲ್ಯಾಂಗರ್‌ ಹೇಳಿ​ದ್ದಾರೆ.

ಇದನ್ನೂ ಓದಿ: ರೋಲ್ ಮಾಡೆಲ್ ಅಪ್ಪ ಅಲ್ಲ, ಕೊಹ್ಲಿ ಆಗಲು ಬಯಸಿದ ವಾರ್ನರ್ ಪುತ್ರಿ!

2 ವರ್ಷಕ್ಕೂ ಮೊದಲು ದ್ವಿಪಕ್ಷೀಯ ಸರಣಿಗೆ ಸಿದ್ದತೆ ನಡೆಸುತ್ತಿರುವ ಮೊದಲ ತಂಡ ಆಸ್ಟ್ರೇಲಿಯಾ.  ವಿಶ್ವಕಪ್ ಸರಣಿ, ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಐಸಿಸಿ ಮಹತ್ವದ ಸರಣಿಗಳಿ ಪ್ರತಿ ತಂಡ ವರ್ಷಕ್ಕೂ ಮೊದಲೇ ಸಿದ್ಧತ ಆರಂಭಿಸುವುದು ವಾಡಿಕೆ. ಆದರೆ ದ್ವಿಪಕ್ಷೀಯ ಸರಣಿಗೆ ಇದೇ ಮೊದಲು.