ಬಿಸಿಸಿಐ ಬಳಿಕ ಎಫ್‌ಟಿಪಿಗೆ ಆಸೀಸ್‌ ವಿರೋಧ

ಐಸಿಸಿಯ ಮಹತ್ವದ ಯೋಜನೆಗೆ ಕಳೆದ ತಿಂಗಳು ಬಿಸಿಸಿಐ ವಿರೋಧ ವ್ಯಕ್ತಪಡಿಸಿತ್ತು. ಇದೀಗ ಆಸ್ಟ್ರೇಲಿಯಾ ಕೂಡ ಐಸಿಸಿ ಪ್ಲಾನ್ ಕಾರ್ಯಗತಗೊಳಿಸಲು ನಮ್ಮ ವಿರೋಧವಿದೆ ಎಂದಿದೆ.  ಹೊಸ ಆದಾಯ ಮೂಲದ ಕಂಡು ಹಿಡಿದಿದ್ದ ಐಸಿಸಿಗೆ ಹಿನ್ನಡೆಯಾಗಿದೆ. 

Australia oppose icc ftp cricket tour program after bcci

ಮೆಲ್ಬರ್ನ್‌(ಅ.27):  ಐಸಿಸಿ ಪ್ರಸ್ತಾ​ಪಿ​ಸಿದ 8 ವರ್ಷ​ಗಳ ಫ್ಯೂಚರ್ ಟೂರ್‌ ಪ್ರೋಗ್ರಾಮ್‌ (FTP) ಬಗ್ಗೆ ಕ್ರಿಕೆಟ್‌ ಆಸ್ಪ್ರೇ​ಲಿಯಾ ವಿರೋಧ ವ್ಯಕ್ತ​ಪ​ಡಿ​ಸಿದೆ. ಐಸಿಸಿ ಪ್ರಸ್ತಾವನೆಯಿಂದ ದ್ವಿಪಕ್ಷೀಯ ಸರಣಿಗಳು ಹಾಗೂ ಅದರ ಮಹತ್ವ ಸತ್ತುಹೋಗಲಿದೆ. ದ್ವಿಪ​ಕ್ಷೀಯ ಟೆಸ್ಟ್‌ ಸರಣಿಗಳ​ನ್ನು ಆಯೋ​ಜಿ​ಸ​ದಿ​ರಲು ಸಾಧ್ಯ​ವಿಲ್ಲವೆಂದು ಕ್ರಿಕೆಟ್‌ ಆಸ್ಪ್ರೇ​ಲಿಯಾ ತಿಳಿ​ಸಿ​ದೆ. 

ಇದನ್ನೂ ಓದಿ: ಗಂಗೂಲಿ ಅಥವಾ ಲಕ್ಷ್ಮಣ್? ICC ಪ್ರಶ್ನೆಗೆ ಫ್ಯಾನ್ಸ್ ಉತ್ತರ!

ಕಳೆದ ತಿಂಗಳು ದುಬೈ​ನಲ್ಲಿ ನಡೆ​ದಿದ್ದ ಐಸಿಸಿ ಸಭೆ​ಯಲ್ಲಿ ಬಿಸಿ​ಸಿಐ, ಎಫ್‌ಟಿಪಿಗೆ ವಿರೋಧ ವ್ಯಕ್ತ​ಪ​ಡಿ​ಸಿ​ತ್ತು. ಮುಂದಿನ 8 ವರ್ಷ​ಗ​ಳಲ್ಲಿ (2023-2031) 8 ಟೂರ್ನಿ​ಗಳ ಪ್ರಸಾ​ರ ಹಕ್ಕು ಮಾರಾಟ ಮಾಡುವ ಪ್ರಸ್ತಾ​ಪವನ್ನು ಐಸಿಸಿ ಸದಸ್ಯ ರಾಷ್ಟ್ರ​ಗಳ ಮುಂದಿ​ಟ್ಟಿ​ತ್ತು. ಬಿಸಿ​ಸಿಐ ಸಿಇಒ ರಾಹುಲ್‌ ಜೊಹ್ರಿ ಈಗಾ​ಗಲೇ ವಿರೋ​ಧಿ​ಸಿ​ದ್ದು, ಕ್ರಿಕೆಟ್‌ ಆಸ್ಪ್ರೇ​ಲಿಯಾ ಸಿಇಒ ಕೆವಿನ್‌ ರಾಬಟ್ಸ್‌ರ್‍ ಸಹ ಆತಂಕ ವ್ಯಕ್ತ​ಪ​ಡಿ​ಸಿ​ದ್ದಾ​ರೆ.

ಇದನ್ನೂ ಓದಿ: ಗಂಗೂಲಿಗೆ BCCI ಅಧ್ಯಕ್ಷ ಪಟ್ಟ; ಕೊನೆಗೂ ಪ್ರತಿಕ್ರಿಯೆ ನೀಡಿದ ರವಿ ಶಾಸ್ತ್ರಿ!

ಬಿಸಿಸಿಐ ಹಾಗೂ ಆಸ್ಟ್ರೇಲಿಯಾ ವಿರೋಧ ವ್ಯಕ್ತಪಡಿಸಿದ ಕಾರಣ, ಐಸಿಸಿ ಮಹತ್ವದ ಯೋಜನೆಗೆ ಭಾರಿ ಹಿನ್ನಡೆಯಾಗಿದೆ. ಪ್ರಮುಖ ಕ್ರಿಕೆಟ್ ಮಂಡಳಿಗಳೇ ಹಿಂದೆ ಸರಿದಿರುವುದರಿಂದ ಐಸಿಸಿ FTP ಕಾರ್ಯಗತ ಮಾಡುವುದು ಅಸಾಧ್ಯವಾಗಿ ಪರಿಣಮಿಸಿದೆ.

Latest Videos
Follow Us:
Download App:
  • android
  • ios